ಬಿಟ್​ಕಾಯಿನ್​ ಕೇಸ್; ಶ್ರೀಕಿ ಬಾಸ್​ಗಳಿಗೆ ಬಲವಾದ ಬಲೆ ಬೀಸಿದ ED ಆಫೀಸರ್ಸ್​

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಂಡಿದ್ದು ಇಡಿ ಅಧಿಕಾರಿಗಳು 3 ಗೇಮಿಂಗ್​ ಕಂಪನಿಗಳ ಮಾಲೀಕರಿಗೆ ಬಲೆ ಬೀಸಿದ್ದಾರೆ.

ಸದ್ಯ ಈ ಹಿಂದೆ ಬೀದರ್​ ಪೊಲೀಸರು ಮಾಡಿದ್ದ ತನಿಖೆಯಲ್ಲಿ ಗೇಮಿಂಗ್ ಕಂಪನಿಗಳಿಂದ ಅಮಾಯಕರ ವೈಯಕ್ತಿಕ ದಾಖಲೆಗಳ ದುರುಪಯೋಗ ಪಡಿಸಿಕೊಂಡ ಮಾಹಿತಿಯನ್ನು ಇಡಿ ಕಲೆ ಹಾಕಿದೆ. ಆ ಮೂಲಕ ಪ್ರಕರಣದ ಮೂಲದ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಯಾವವು 3 ಕಂಪನಿಗಳು?
ಕಂಪನಿ 1: ಡೆಕ್ಕನ್ ಗೇಮ್ಸ್
ಕಂಪನಿ 2: ಶೊವಲೈನ
ಕಂಪನಿ 3: ವೇಬಾ

ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನ ಇಂದಿರಾನಗರದಲ್ಲಿರುವ ಕಂಪನಿಗಳು ಭಾರತೀಯ ಮೂಲದ ಅಂತರಾಷ್ಟ್ರೀಯ ಮಾಲೀಕರ ಒಡೆತನದ ಕಂಪನಿಗಳು ಎನ್ನಲಾಗಿದೆ. ಇದರ ಮಾಲೀಕರು ಅಮಾಯಕರಿಗೆ ಹಣದ ಆಸೆಯನ್ನು ತೋರಿಸಿ 120 ಅಕೌಂಟ್​ಗಳಿಗೆ ಲಕ್ಷಾಂತರ ಹಣ ಟ್ರಾನ್ಸಫರ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪ್ರತಿ ಅಕೌಂಟ್ಗೆ 4 ರಿಂದ 7 ಲಕ್ಷ ಹಾಕಿದ ಇವರು ಬಳಿಕ ಆ ಹಣವನ್ನ ಹೈದ್ರಾಬಾದ್ ನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ವೇಳೆ ಕೋಟ್ಯಾಂತರ ಹಣದ ಮೂಲ ಪತ್ತೆಯಾಗಿತ್ತು ಆದರೆ ಆ ಹಣವನ್ನ ರಿಕವರಿ ಮಾಡದೇ ಕೈ ಬಿಟ್ಟಿದ್ದ ಬೀದರ್​ನ ಪೊಲೀಸರು ಕೇವಲ ಅಕೌಂಟ್ ಓಪನ್ ಮಾಡಿಸಿದ್ದ ವ್ಯಕ್ತಿ ಹಾಗೂ ಹಣ ಡ್ರಾ ಮಾಡಿದವನನ್ನು ಅರೆಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಕಂಪನಿಯ ಮಾಲೀಕರ ಹೇಳಿಕೆಯೂ ಪಡೆಯದೇ ನಿರ್ಲಕ್ಷ್ಯವಹಿಸಲಾಗಿತ್ತು.

ಶ್ರೀಕಿ ಬಾಸ್​ಗಳಿಗೆ ಪೀಕಲಾಟ ಶುರು..
ಡೆಕ್ಕನ್ ಗೇಮ್ಸ್ ಕಂಪನಿಯ ಮಾಲೀಕ ಎನ್ನಲಾದ ತಮಿಳುನಾಡು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ನ್ಯೂಸ್​ಫಸ್ಟ್ ಗೆ ಇಡಿ ತನಿಖಾ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸದ್ಯ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಹ್ಯಾಕರ್ ಶ್ರೀಕಿ ಹಿಂದಿನ ಮಾಸ್ಟರ್ ಮೈಂಡ್ ಗಳಿಗೆ ಪೀಕಲಾಟ ತಂದಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ..

ಇದನ್ನೂ ಓದಿ:ಬಿಟ್​​ಕಾಯಿನ್ ಯಾರಿಗೆ ತಿರುಗುಬಾಣ..? ಪ್ರಧಾನಿ ಮೋದಿ ಹೇಳಿದ ಆ ಒಂದು ಮಾತು

News First Live Kannada

Leave a comment

Your email address will not be published. Required fields are marked *