ಬಿಟ್ ಕಾಯಿನ್ ಸಂಬಂಧ ತನ್ನ ಸರ್ಕಾರಿ ನಿವಾಸದಲ್ಲಿ ಆರೋಗ್ಯ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ಟಾಂಗ್ ನೀಡಿದರು ಸುಧಾಕರ್. ಈ ಸಂಬಂಧ ಮಾತಾಡಿದ ರಣದೀಪ್ ಸುರ್ಜೇವಾಲ ಸುದ್ದಿಗೋಷ್ಠಿ ಮಾಡಿದ್ದಾರೆ. ಕೆಲವು ದಿನಗಳಿಂದ ನಮ್ಮ ರಾಜ್ಯದಲ್ಲಿ ಬಿಟ್ ಕಾಯಿನ್ ಬಗ್ಗೆ ಆಪಾದನೆ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರದಲ್ಲೂ ಇಂದು ರಾಷ್ಟ್ರೀಯ ಮಾಧ್ಯಮವನ್ನು ಬಳಕೆ ಮಾಡಿ ಸುರ್ಜೇವಾಲ ಸುದ್ದಿಗೋಷ್ಠಿ ಮಾಡಿದ್ದಾರೆ. ಒಟ್ಟಾರೆ, ಅವರ ಅಪಾದನೆ ಸಾರಾಂಶ, ಬಿಜೆಪಿ ದೊಡ್ಡ ಪ್ರಮಾಣದ ಸ್ಕ್ಯಾಮ್ ಆಗಿದೆ ಅಂತ ಎಂದರು.
ಕ್ರಿಪ್ಟೋ ಕರೆನ್ಸಿಯಲ್ಲಿ ಅವ್ಯವಹಾರ ಮಾಡಿದ್ದಾರೆ. ಈ ಸರ್ಕಾರವೇ ದೊಡ್ಡ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ ಎಂದು ತಿಳಿಸಬೇಕು ಎಂಬುದು. ಸುಳ್ಳನ್ನು ನೂರು ಬಾರಿ ಹೇಳಿ, ಸತ್ಯ ಮಾಡಲು ಹೊರಟಿದ್ದಾರೆ. 6 ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದಾರೆ. ನಾನು 6 ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ಮೊದಲು ಸರ್ಕಾರದ ಪರವಾಗಿ ಕೆಲ ವಿಚಾರ ತಿಳಿಸುತ್ತೇನೆ ಎಂದರು.
ಶ್ರೀಕಿ ಯಾರು? ಅವನು ಬಲೆಗೆ ಹೇಗೆ ಬಿದ್ದ? ಕಾಂಗ್ರೆಸ್ ಸರ್ಕಾರ ಅವನನ್ನು ಹಿಡಿಯಲಿಲ್ಲ. ನಮ್ಮ ಸರ್ಕಾರ ಅವನನ್ನು ಹಿಡಿದಿದ್ದು. ಅಂದಿನ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ದೊಡ್ಡ ಅಂದೋಲನಾ ಮಾಡಿದ್ರು. ಡ್ರಗ್ಸ್ ಕೇಸ್‌ನ್ನು ಬಯಲಿಗೇಳೆದಾಗ ಶ್ರೀಕಿ ಕೂಡ ಸಿಕ್ಕಿದ್ದ. ಇದೇ ಪ್ರಕರಣದಲ್ಲಿ ಶ್ರೀಕಿ ಸಿಕ್ಕಿಬಿದ್ದದ್ದು. ಡ್ರಗ್ ಆಡಿಕ್ಟ್ ಅವನು. ನಾನು ಅವನನ್ನು ನೋಡಿಯೇ ಇಲ್ಲ. ಮಾಧ್ಯಮಗಳಲ್ಲಿ ಅವನನ್ನು ನೋಡಿದ್ದೇನೆ ಎಂದು ಹೇಳಿದರು.
ಮಾದಕ ವಸ್ತುಗಳನ್ನು ಬಳಕೆ ಮಾಡಿದ್ದರ ಹಿಂದೆ ವಿಚಾರಣೆ ಮಾಡಿದಾಗ ಹ್ಯಾಕಿಂಗ್ ಮಾಡಿದ್ದನ್ನ ಅವನೇ ಒಪ್ಪಿಕೊಂಡಿದ್ದಾನೆ. ಅವನ ವಿದ್ಯಾಭ್ಯಾಸ ಎಲ್ಲಾ ವಿದೇಶದಲ್ಲೇ. ಹೀಗಾಗಿ, ನಮ್ಮ ಪೊಲೀಸ್ ಇಲಾಖೆಯವರು ಒಂದು ತಂಡ ಮಾಡಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ತನಿಖೆ ಮಾಡಿದಾಗ ಎಲ್ಲಾ ತಿಳಿದು ಬಂದಿದೆ. ಒಬ್ಬ ಮಾದಕ ವಸ್ತು ವ್ಯಸನಿಯ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರು ನಮ್ಮ ವಿರುದ್ಧ ಅಪಾದನೆ ಮಾಡುತ್ತಿದ್ದಾರೆ ಎಂದು ಕೆಂಡಕಾರಿದರು.
ಒಬ್ಬ ಡ್ರಗ್ ಆಡಿಕ್ಟ್, ತಲೆಯಲ್ಲಿ ಕ್ರೈಂ ಮಾಡುವುದೇ ಅವನ ಗುರಿ. ಅವನು ಯಾವಾಗ ನಿಜ ಹೇಳ್ತಾನೆ? ಯಾವಾಗ ಸುಳ್ಳು ಹೇಳ್ತಾನೆ? ನಾವು ಯೋಚನೆ ಮಾಡಬೇಕು. ಯಾವ ನಟರು ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ? ಎಂದು ಸುರ್ಜೇವಾಲ ಮೊದಲ ಪ್ರಶ್ನೆ ಕೇಳಿದ್ದಾರೆ. ತನಿಖೆ ಮಾಡಿಸಿದ್ದು ಯಾರು? ರಾಜ್ಯದಲ್ಲಿ 5 ವರ್ಷಗಳ ಕಾಲ ಅವರ ಸರ್ಕಾರವೇ ಇತ್ತು. ಬಳಿಕ ಸಮ್ಮಿಶ್ರ ಸರ್ಕಾರ ಅವರದ್ದೇ ಇತ್ತು. ಆಗ ಯಾವ ತನಿಖೆಯೂ ಮಾಡಲಿಲ್ಲ. ಈಗ ನಮ್ಮ ವಿರುದ್ಧ ಅಪಾದನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರದ ಬಗ್ಗೆ ಯಾರಾದ್ರೂ ಕಲಿಯಬೇಕು ಅಂದರೆ, ಅದನ್ನು ಕಾಂಗ್ರೆಸ್‌ನವರಿಂದ ಕಲಿಯಬೇಕು. ಇಲ್ಲಿ ಯಾರು ನಟರು ಇಲ್ಲ. ಅಂದಿನ ಗೃಹ ಸಚಿವರು ಇದನ್ನು ಬಹಳ ವ್ಯವಸ್ಥಿತವಾಗಿ ವಿಚಾರಣೆ ಮತ್ತು ತನಿಖೆ ಮಾಡಿಸಿದ್ದಾರೆ. ಶ್ರೀಕಿಯನ್ನು ತನಿಖೆ ಮಾಡುವ ಸಂದರ್ಭದಲ್ಲಿ, ಬಿಟ್ ಕಾಯಿನ್ ವ್ಯವಹಾರ ಮಾಡುತ್ತೇನೆ ಎಂದಿದ್ದಾನೆ. ಬಿಟ್ ಕಾಯಿನ್‌ನ ನಾನು ಹ್ಯಾಕ್ ಮಾಡಿದ್ದೇನೆ ಎಂದಿದ್ದಾನೆ. ಅವನ ಖಾತೆಯನ್ನು ನೋಡಬೇಕೆಂದು ಹೇಳಿ, ಮಹಜರು ಮಾಡಿಸಿದ್ದಾರೆ. ಸೈಬರ್ ಪರಿಣಿತರನ್ನು ಕರೆದುಕೊಂಡು ಹೋಗಿದ್ದಾರೆ. ಅವನ ವಿಚಾರಣೆ ಮಾಡುವಾಗ ಕಂಪ್ಲೀಟ್ ವಿಡಿಯೋ ಮಾಡಿಸಿದ್ದಾರೆ. ಇಲ್ಲಿ ತನಿಖೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಸಿದ್ದಾರೆ ಎಂದರು.
ನಮ್ಮ ಪೊಲೀಸ್ ಅಧಿಕಾರಿಗಳು ಪಾರದರ್ಶಕವಾಗಿ ಮಾಡಿಸಿದ್ದಾರೆ. ಮತ್ತೆ ಕೋರ್ಟ್ ಅನುಮತಿ ಪಡೆದು ಪೊಲೀಸ್ ಇಲಾಖೆಗೆ ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಳ್ಳಲು ಅನುಮತಿ ಕೇಳಿದ್ದಾರೆ. 186.811 ಬಿಟ್ ಕಾಯಿನ್ ತೋರಿಸಿದ್ದಾನೆ ಶ್ರೀಕಿ ತನ್ನ ವ್ಯಾಲೆಟ್‌ನಲ್ಲಿ. ಇದನ್ನು ಕೂಡ ವಿಚಾರಣೆ ನಡೆಸಲಾಗಿದೆ. ಇದು ಅವನ ಖಾಸಗಿ ಖಾತೆಯದ್ದು ಎಂದು ಅಲ್ಲಿಯೇ ತಿಳಿಸಲಾಗಿದೆ. 2006 ರಲ್ಲಿ ಬಿಟ್ ಕಾಯಿನ್ ವ್ಯವಹಾರವೇ ಆಕ್ರಮ ಎನ್ನಲಾಗಿತ್ತು. ಆದ್ರೆ, ಕೆಲವರು ಬಿಟ್ ಕಾಯಿನ್ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಈಗ ಏನಾಗಿದೆ ಅಂದರೆ, ಶ್ರೀಕಿ ಹೇಳಿಕೆಯ ಮೇಲೆ ಕೆಲವೊಂದು ತನಿಖೆ ಆಗುತ್ತಿದೆ. ಇದೆಲ್ಲವು ಕೂಡ ಚಾರ್ಚ್‌ಶೀಟ್ ಮಾಡಿದ್ದಾರೆ. ಇಂದಿನ ಸುದ್ದಿಗೋಷ್ಟಿಯಲ್ಲಿ ನಮ್ಮ ರಾಜ್ಯದ ಪೊಲೀಸರು ಮಾಡಿರುವ ತನಿಖೆಯ ಅಂಶವನ್ನೇ ಹೇಳಿದ್ದಾರೆ. ನಮ್ಮ ಪೊಲೀಸ್ ಇಲಾಖೆಯವರು ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ. ಎಲ್ಲವು ಕೂಡ ರಿಯಲ್ ಟೈಂನಲ್ಲಿ ಮಾಡಲಾಗಿದೆ. ಯಾರನ್ನು ಬಚ್ಚಿಡುವ ಕೆಲಸ ನಡೆದಿಲ್ಲ ಎಂದು ತಿಳಿಸಿದರು.
ಮೂರನೆಯದು ಬಿಟ್ ಫಿನಿಕ್ಸ್ ಅಂತಾ. 5200 ಕೋಟಿ ಮೌಲ್ಯ ಎಂಬುದು. 14682 ಬಿಟ್ ಫಿನಿಕ್ಸ್, ವೇಲ್ ಆಲರ್ಟ್ ಎಂದು ಗುರುತಾಗಿದೆ. ಇದು ನಡೆದಾಗ ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿದ್ರು. ಸುರ್ಜೇವಾಲ ಕೇಳ್ತಾರೆ, ಈ ಬಿಟ್ ಕಾಯಿನ್ ವರ್ಗಾವಣೆಗೂ ಶ್ರೀಕಿಗೂ ಸಂಬಂಧ ಇದೆಯೇ ಎಂದು ಕೇಳ್ತಾರೆ. ಬಿಟ್ ಫಿನಿಕ್ಸ್, ಬಿಟ್ ಕಾಯಿನ್ ಎಂಬುದು ದೊಡ್ಡ ದಂಧೆ. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಆಯಿತು. ಕೇವಲ ಇದು ರಾಷ್ಟ್ರೀಯ ಮಾಧ್ಯಮದಲ್ಲಿ ಮಾತ್ರವಲ್ಲದೇ, ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಯಿತು. ಯಾವುದೇ ದೇಶದ ಕರೆನ್ಸಿಗಳು ಲಪಾಟಿಸಿದ್ರೆ, ಬೇರೆ ದೇಶದವರು ಸುಮ್ಮನೆ ಇರುತ್ತಿದ್ರಾ? ನಮ್ಮ ದೇಶದಲ್ಲಿ ರಾಯಭಾರಿಗಳು ಇಲ್ಲವೇ? ಬೇರೆ ದೇಶದ ರಾಯಭಾರಿಗಳು ಇದನ್ನು ಕೇಳದೇ ಇರುತ್ತಿದ್ರಾ? 5240 ಕೋಟಿ ಬಹಳ ಸಲೀಸಾಗಿ ಲಪಾಟಿಸಲು ಸಾಧ್ಯವೇ? ಕಳ್ಳತನ ಮಾಡಿದ್ರೆ, ಸುಮ್ಮನೆ ಬೇರೆ ದೇಶದವರು ಇರುತ್ತಿದ್ರಾ? ಹ್ಯಾಕಿಂಗ್ ಆಗಿದ್ರೆ, ಎಲ್ಲಿಂದ ಅಂತಾ ಕೇಳುತ್ತಿದ್ರು ಅಲ್ವಾ? ನಮ್ಮ ಕರೆನ್ಸಿ ಕಳೆದು ಹೋಗಿದೆ ಯಾರು ದೂರು ನೀಡಿಲ್ಲ. ಇಂತಹ ಚಟುವಟಿಕೆ ಆಗಿದೆ ಎನ್ನುವುದಕ್ಕೆ ಅವಕಾಶವೇ ಇಲ್ಲ. ಇದೆಲ್ಲಾ ಆಗಿಯೇ ಒಂದು ವರ್ಷ ಆಗಿದೆ. ಒಂದು ವರ್ಷದಲ್ಲಿ ಅಥವಾ ಒಂದು ವರ್ಷದ ನಂತರ ಯಾರು ಮಾಹಿತಿ ನೀಡಿಲ್ಲ ಎಂದು ಕಿಡಿಕಾರಿದರು.
ನಾಲ್ಕನೆಯದು, ಬಸವರಾಜ ಬೊಮ್ಮಾಯಿ ಅವರ ಪಾತ್ರವೇನು? ಎಂದು ಕೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಜವಾಬ್ದಾರಿಯನ್ನು ಸಮರ್ಥವಾಗಿ ಮಾಡಿದ್ದಾರೆ. ಅವರನ್ನು ಅಭಿನಂದನೆ ಸಲ್ಲಿಸಬೇಕು. ಕಳೆದ 110 ದಿನಗಳಲ್ಲಿ ಅತ್ಯಂತ ಪಾರದರ್ಶಕವಾದ ಸರ್ಕಾರ ನಡೆಸುತ್ತಿದ್ದಾರೆ. ಜನಪರ ಮುಖ್ಯಮಂತ್ರಿ ಆಗಿದ್ದಾರೆ. ಅದಕ್ಕೆ ಅವರ ಶರ್ಟ್ ಮೇಲೆ ನೀವು ಇಂಕ್ ಹಾಕಬೇಕಾ? ಇದು ಸಾಧ್ಯವಿಲ್ಲ. ಇದು ಯಾವುದೇ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತಹುದ್ದು ಅಲ್ಲ. ಅವರು ತನಿಖೆಗೆ ಆದೇಶ ಮಾಡಿಸಿದ್ದಾರೆ. ಅಂದು ಒಬ್ಬ ಗೃಹ ಸಚಿವರಾಗಿ ಹಸ್ತಕ್ಷೇಪ ಮಾಡಬಾರದು. ನಾವು ಯಾರು ಮಾಡಿಲ್ಲ. ಅವರು ಒಮ್ಮೆ ತನಿಖೆ ಮಾಡಿದ ಮೇಲೆ, ಹಸ್ತಕ್ಷೇಪ ಮಾಡಿಲ್ಲ. ಕೋರ್ಟ್‌ನ ರಿಯಲ್ ಟೈಂ ಬೇಸಿಸ್ ಮೇಲೆ ದಾಖಲೆ ಕೊಟ್ಟಿದ್ದಾರೆ. ಅಂತರಾಷ್ಟ್ರೀಯ ಪೊಲೀಸರಿಗೆ ಯಾಕೆ ತಿಳಿಸಿಲ್ಲ? 5 ತಿಂಗಳು ಸರ್ಕಾರ ಏನು ಮಾಡುತ್ತಿತ್ತು? ಜಾಮೀನು ಸಿಕ್ಕ ಬಳಿಕ ಏನು ಮಾಡುತ್ತಿತ್ತು? ಎಂದು ಪ್ರಶ್ನೆ ಹಾಕಿದ್ದಾರೆ. ಅವನ ಹೇಳಿಕೆಗಳನ್ನು ಕೇಳಿದ್ರೆ, ಭಯ ಆಗುತ್ತದೆ. ತನಿಖೆ ಸಂದರ್ಭದಲ್ಲಿ ಅವನು ನೂರಾರು ಕಥೆ ಹೇಳಿದ್ದಾನೆ. ನೀವು 70 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣಗಳನ್ನು ಬಯಲಿಗೇಳಿದ್ದೀರಿ? ಅದನ್ನು ತಿಳಿಸಿ ಎಂದು ಕಾಂಗ್ರೆಸ್‌ಗೆ ಮರು ಪ್ರಶ್ನೆ ಹಾಕಿದರು ಡಾ.ಕೆ. ಸುಧಾಕರ್.