ಬಿಟ್​​ ಕಾಯಿನ್​​ ಕೇಸ್​: ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್​​​ ಖರ್ಗೆ ಐದು ಸವಾಲು; ಯಾವುವು..?


ಬೆಂಗಳೂರು: ಇಡೀ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಬಿಟ್​​ ಕಾಯಿನ್​​ ಕೇಸ್​​ ಸಂಬಂಧ ಸಿಎಂ ಬಸವರಾಜ್​​ ಬೊಮ್ಮಾಯಿಗೆ ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ ಐದು ಸವಾಲುಗಳು ಎಸೆದಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರಿಯಾಂಕ್​​​ ಖರ್ಗೆ, ಬಿಟ್​​ ಕಾಯಿನ್​​ ಕೇಸ್​​​ ಅಷ್ಟು ಮುಖ್ಯವಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದ್ರೆ ಪ್ರಧಾನಿ ಮೋದಿ ಬಳಿ ಹೋಗಿ ಏಕೆ ಚರ್ಚಿಸಿದ್ರು ಎಂದು ಬೊಮ್ಮಾಯಿಗೆ ಪ್ರಿಯಾಂಕ್​​​ ಖರ್ಗೆ ಪ್ರಶ್ನೆ ಮಾಡಿದರು.

ಬಿಟ್ ಕಾಯಿನ್ ಪ್ರಕರಣ ದೊಡ್ಡ ಹಗರಣ. ನವೆಂಬರ್ 14 ರಂದು ಶ್ರೀಕಿ ಸರಂಡರ್ ಆಗ್ತಾರೆ. ಬಳಿಕ 3 ದಿನ ಕೇಸ್​​ ಕುರಿತು ಯಾವುದೇ ರಿಪೋರ್ಟ್ ಆಗಲ್ಲ. ನವೆಂಬರ್ 17 ರಂದು ಕೇಸ್​ ದಾಖಲಾಗುತ್ತೆ. ಬಳಿಕ 14 ದಿನ ಪೊಲೀಸ್ ಕಸ್ಟಡಿಗೆ ಪಡೆಯುತ್ತಾರೆ ಎಂದರು.

ಇನ್ನು, ಸರ್ಕಾರಕ್ಕೆ ಐದು ಪ್ರಶ್ನೆ ಕೇಳಿದ ಪ್ರಿಯಾಂಕ್​​​ ಖರ್ಗೆ ಕೆಂಡಕಾರಿದರು. ಸರ್ಕಾರ ನಮ್ಮನ್ನು ಬ್ಲ್ಯಾಕ್​ಮೇಲ್ ಮಾಡೋದು ಬೇಡ. ಕಾಂಗ್ರೆಸ್ಸಿಗರು ಯಾರೇ ಭಾಗಿಯಾಗಿದ್ದರೂ ಒದ್ದು ಒಳಹಾಕಿ. ಬಿಟ್ ಕಾಯಿನ್ ಕೇಸ್​ ಡೈವರ್ಟ್ ಮಾಡಲು ಕಾಂಗ್ರೆಸ್​ ನಾಯಕರು ಇದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ ಯಾಕೆ ಎಂದರು.

ಪ್ರಿಯಾಂಕ್​​​ ಖರ್ಗೆ ಬೊಮ್ಮಾಯಿಗೆ ಕೇಳಿದ ಐದು ಪ್ರಶ್ನೆಗಳು ಹೀಗಿದ್ದವು..

  1. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಶ್ರೀಕಿಗೆ ಡ್ರಗ್ಸ್ ಕೊಡಲಾಗಿತ್ತಾ?
  2. 186 ಬಿಟ್ ಕಾಯಿನ್ ಮೊತ್ತ ₹100 ಕೋಟಿ, ಇದೆಲ್ಲೋಯ್ತು?
  3. ಶ್ರೀಕಿ ಹ್ಯಾಕ್​ ಮಾಡಿದ್ದ 5 ಸಾವಿರ ಕಾಯಿನ್ ಎಲ್ಲೋಯ್ತು?
  4. ಇ.ಡಿ, ಇಂಟರ್ ಪೋಲ್​​ಗೆ ಮಾಹಿತಿ ನೀಡಲು ವಿಳಂಬವೇಕೆ?
  5. 80 ಸಾವಿರ ಯೂರೋ ಟ್ರಾನ್ಸಫರ್ ಮಾಡಿದ್ರೂ ತನಿಖೆ ಯಾಕಿಲ್ಲ?

ಇದನ್ನೂ ಓದಿ: #BitCoin ವಿಚಾರದಲ್ಲಿ CM ನನ್ನ ಸೆಟಲ್​​ಮೆಂಟ್​ಗೆ ಕರೆದಂತಿತ್ತು -ಪ್ರಿಯಾಂಕ್ ಖರ್ಗೆ ಆರೋಪ

The post ಬಿಟ್​​ ಕಾಯಿನ್​​ ಕೇಸ್​: ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್​​​ ಖರ್ಗೆ ಐದು ಸವಾಲು; ಯಾವುವು..? appeared first on News First Kannada.

News First Live Kannada


Leave a Reply

Your email address will not be published. Required fields are marked *