ನವದೆಹಲಿ: ಕ್ರಿಪ್ಟೋಕರೆನ್ಸಿ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಕರ್ನಾಟಕದಲ್ಲಿ ಸಿಡಿದ ಬಿಟ್ ಬಾಂಬ್ ದೆಹಲಿ ಅಂಗಳದಲ್ಲಿ ಸದ್ದು ಮಾಡ್ತಿದೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಖುದ್ದು ಪ್ರಧಾನಿ ಮೋದಿಯೇ ತಲೆಕೆಡಿಸಿಕೊಂಡಿದ್ದು, ಮಹತ್ವದ ಸಭೆಯೂ ನಡೆದಿದೆ. ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಕ್ರಿಪ್ಟೋ ಎಂಬ ಹುಚ್ಚು ಕುದುರೆಗೆ ಲಗಾಮು ಹಾಕಲು ಮೋದಿ ಮುಂದಾಗಿದ್ದಾರೆ.
ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್ ಫೈನಲ್; ಯಾವ ತಂಡಕ್ಕೆ ಗೆಲುವಿನ ಹೆಚ್ಚು ಚಾನ್ಸ್ ಇದೆ ಗೊತ್ತಾ..?
ಕರ್ನಾಟಕದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರ ಸಾಕಷ್ಟೂ ಸದ್ದು ಮಾಡ್ತಿದೆ. ಕೈ ಪಡೆ ಕಮಲದ ಮೇಲೆ ಬಿಟ್ ಅಸ್ತ್ರ ಪ್ರಯೋಗಿಸಿದೆ. ಇದ್ರಿಂದ ಪಾರಾಗಲು ಸಿಎಂ ದೆಹಲಿಗೆ ದೌಡಾಯಿಸಿ ಮೋದಿ ಮುಂದೆ ವಿಚಾರ ಪ್ರಸ್ತಾಪಿಸಿ ಬಂದೂ ಆಗಿದೆ. ಇದ್ರ ಬೆನ್ನಲ್ಲೇ ಬಿಟ್ ಬಾಂಬ್ ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಆಗಿದ್ದು, ಕಾಂಗ್ರೆಸ್ನ ರಾಷ್ಟ್ರ ನಾಯಕರು ದೆಹಲಿಯಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಗುಡುಗುಗಿದ್ದಾರೆ. ಇದ್ರ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರು ಹುತಾತ್ಮ; ರಕ್ಕಸ ದಾಳಿಯ ಹೊಣೆ ಹೊತ್ತ PLA, MNPF
‘ಕ್ರಿಪ್ಟೋ ಕರೆನ್ಸಿ’ಗೆ ಲಗಾಮು ಹಾಕಲು ಮುಂದಾದ ಪ್ರಧಾನಿ ಮೋದಿ
ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆ ಮೇಲೆ ಕೇಂದ್ರದ ಹದ್ದಿನ ಕಣ್ಣು
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಕ್ರಿಪ್ಟೋ ಕರೆನ್ಸಿ ವಿಚಾರವಾಗಿ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದು, ಕ್ರಿಪ್ಟೋಕರೆನ್ಸಿಯ ಮುಂದಿನ ದಾರಿಯ ಕುರಿತು ಗಂಭೀರ ಚರ್ಚೆ ನಡೆದಿದೆ. ಸಭೆಯಲ್ಲಿ ಬಿಟ್ ಕಾಯಿನ್ಗೆ ಲಗಾಮು ಹಾಕಲು ಕೇಂದ್ರ ನಿರ್ಧರಿಸಲಾಗಿದೆ.
ಕ್ರಿಪ್ಟೋಗೆ ಮೋದಿ ಲಗಾಮು
- ಪಾರದರ್ಶಕವಲ್ಲದ ಜಾಹೀರಾತು ಮೂಲಕ ದಾರಿ ತಪ್ಪಿಸುವ ಯತ್ನ
- ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆ ಸಮಸ್ಯೆಗೆ ನಿಯಂತ್ರಣ ಹಾಕ್ಬೇಕು
- ಮನಿ ಲಾಂಡರಿಂಗ್, ಉಗ್ರರಿಗೆ ಹಣಕಾಸು ವರ್ಗಾವಣೆ ಮೇಲೆ ನಿಗಾ
- ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯದಿಂದ ನಿಗಾ
- ಕ್ರಿಪ್ಟೋಕರೆನ್ಸಿ ಬಗ್ಗೆ ಪ್ರಪಂಚದಾದ್ಯಂತ ತಜ್ಞರನ್ನು ಸಂಪರ್ಕಿಸಲಾಗಿದೆ
- ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಬೇಕಾದ ತಂತ್ರಜ್ಞಾನದ ಬಗ್ಗೆಯೂ ಚರ್ಚೆ
- ಮುಂಬರುವ ಬಜೆಟ್ನಲ್ಲಿ ಕ್ರಿಪ್ಟೋ ನಿಯಂತ್ರಣಕ್ಕೆ ಸಭೆಯಲ್ಲಿ ನಿರ್ಧಾರ
ಒಟ್ಟಿನಲ್ಲಿ ರಾಜ್ಯ ರಾಜಧಾನಿಯಲ್ಲಿ ಕೈಪಡೆ ಸಿಡಿಸಿದ ಬಿಟ್ ಬಾಂಬ್ ದೆಹಲಿಯಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರಧಾನಿ ಮೋದಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಅಲ್ದೆ ಕ್ರಿಪ್ಟೋ ಕರೆನ್ಸಿ ಎಂಬ ಹುಚ್ಚು ಕುದುರೆಗೆ ಕಡಿವಾಣ ಹಾಕಲು ಮೋದಿ ಮುಂದಾಗಿದ್ದು, ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚನೆಯೂ ರವಾನಿಸಿದ್ದಾರೆ. ಆದ್ರೆ ಬಿಟ್ ಎಂಬ ಈ ಮಾಯಾ ಲೋಕವನ್ನ ಹೇಗೆ ಬೇಧಿಸೋದು ಅನ್ನೋದೆ ಸದ್ಯದ ಯಕ್ಷ ಪ್ರಶ್ನೆ ಆಗಿದೆ.
ವಿಶೇಷ ವರದಿ: ಜಗದೀಶ್
ಇದನ್ನೂ ಓದಿ: ದೆಹಲಿಯಲ್ಲಿ 1 ದಿನ ಉಸಿರಾಡೋದು 20 ಸಿಗರೇಟ್ ಸೇವನೆಗೆ ಸಮ -ಲಾಕ್ಡೌನ್ ಬಗ್ಗೆ ಕೇಜ್ರಿವಾಲ್ ಏನಂದ್ರು..?
ಇದನ್ನೂ ಓದಿ: ಆಯ್ಕೆ ಸಮಿತಿ ವಿರುದ್ಧ ಶಾಸ್ತ್ರಿ ಹೊಸ ಬಾಂಬ್; ಗಂಗೂಲಿ ಆಡಳಿತದ ಅವಧಿಯಲ್ಲೇ ಹೀಗ್ಯಾಕೆ ಆಯ್ತು..?
ಇದನ್ನೂ ಓದಿ: ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಶೋ ಮ್ಯಾನ್ ಪ್ರೇಮ್.. ಎಣ್ಣೆ ಹಾಡಿನಲ್ಲಿ ಚಳಿಬಿಟ್ಟು ಕುಣಿದ ರಚಿತಾ ರಾಮ್
ಇದನ್ನೂ ಓದಿ: 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಆರೋಪಿಯೂ ಎನ್ಕೌಂಟರ್; ಮಿಲಿಂದ್ ಕೊಂದವ್ರಿಗೆ ಸಿಕ್ತು ₹25 ಲಕ್ಷ