ಬಿಟ್​ ಕಾಯಿನ್​ ಕೇಸ್ನಲ್ಲಿ ED ಮೊದಲು ಸಿದ್ದರಾಮಯ್ಯಗೆ ನೋಟಿಸ್​ ನೀಡಲಿ- ಪ್ರತಾಪ್​ ಸಿಂಹ


ಮೈಸೂರು: ರಾಜ್ಯದಲ್ಲಿ ಗದ್ದಲ ಎಬ್ಬಿಸಿರು ಬಿಟ್​ ಕಾಯಿನ್​ ಕೇಸ್​ಗೆ ಸಂಬಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮೊದಲು ನೋಟಿಸ್​ ನೀಡಲಿ ಎಂದು ಸಂಸದ ಪ್ರತಾಪ್​ ಸಿಂಹ್​ ಕಿಡಿಕಾರಿದ್ದಾರೆ.

ಬಿಟ್​ ಕಾಯಿನ್​ ಹಗರಣದ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್​​ ಸಿಂಹ ಬಿಟ್ ಕಾಯಿನ್ ಬಗ್ಗೆ ಮೊದಲು ಟ್ವೀಟ್ ಮಾಡಿದವರು ಸಿದ್ದರಾಮಯ್ಯ. ನಂತರ ಪ್ರಿಯಾಂಕ್​ ಖರ್ಗೆ, ಸುರ್ಜೆವಾಲ ಸೇರಿದಂತೆ ಹಲವರು ಮಾತಾನಾಡಿದ್ದಾರೆ. ಹೀಗಾಗಿ ಇವರ ಬಳಿ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದಿದ್ದಾರೆ.

ಸಾಮಾನ್ಯ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುವಂತೆ ಈ ಪ್ರಕರಣದಲ್ಲೂ ತನಿಖೆ ನಡೆಸಲಿ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಹ ಜನಧನ್ ಹಣ ಕದ್ದ ಬಗ್ಗೆ ಮಾತನಾಡಿದ್ದಾರೆ ಅವರಿಗೂ ನೋಟಿಸ್​ ನೀಡಲಿ. ನೋಟಿಸ್​ ನೀಡದ ಮೇಲೆ ಎಲ್ಲಾ ನಾಯಕರು ತನಿಖೆಗೆ ಸಹಕರಿಸಲಿ. ಈ ನಾಯಕರ ಬಳಿ ಇರುವ ಸಾಕ್ಷಿ, ಮಾಹಿತಿಗಳಿಂದ ತನಿಖೆ ಮುಂದುವರಿಯಲಿ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

News First Live Kannada


Leave a Reply

Your email address will not be published.