ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದು ಸದ್ದು ಮಾಡಲಾರಂಭಿಸಿದ ಬಿಟ್ ಕಾಯಿನ್ ದಂಧೆ ಪ್ರಕರಣವನ್ನು ಕೇಂದ್ರ ಸರ್ಕಾರ, ತಮಿಳುನಾಡಿನ ಕಡೆ ಡೈವರ್ಟ್ ಮಾಡಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಹೌದು, ಬಿಟ್ ಕಾಯಿನ್ ದಂಧೆ ಪ್ರಕರಣ ವರ್ಗಾವಣೆಗೊಂಡಿರುವ ಬಗ್ಗೆ ನ್ಯೂಸ್‌ಫಸ್ಟ್‌ಗೆ ನಿಖರ ಮಾಹಿತಿ ಲಭ್ಯವಾಗಿದೆ. ನೇರವಾಗಿ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಬಿಟ್ ಕಾಯಿನ್ ದಂಧೆ ಪ್ರಕರಣವನ್ನು ಕೇಂದ್ರ ಸರ್ಕಾರ ಪರೋಕ್ಷವಾಗಿ ವರ್ಗಾವಣೆಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮೆರಿಕ ಮನವಿ ಬೆನ್ನಲ್ಲೇ ಚುರುಕುಗೊಂಡ ತನಿಖೆ
ಅಮೆರಿಕನ್ ಬ್ಯಾಂಕ್‌ನ ಸಾವಿರಾರು ಕೋಟಿ ರೂಪಾಯಿಗಳನ್ನು ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ಕರ್ನಾಟಕದ ಐಪಿ ಅಡ್ರೆಸ್‌ನಿಂದ ಹ್ಯಾಕ್ ಮಾಡಿದ್ದಾನೆ. ಅದನ್ನು ವಾಪಸ್ ಮಾಡಿಸಿಕೊಡಿ ಎಂದು ಅಮೆರಿಕ ಮನವಿ ಮಾಡಿದೆ. ಮನವಿ ಬೆನ್ನಲ್ಲೇ ರಾಜ್ಯದಲ್ಲಿನ ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆ ಚುರುಕುಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿ ರಾಜಕಾರಣಿಗಳ ಹೆಸರು ಆರೋಪ; ಒಳಗೊಳಗೆ RSS ತನಿಖೆ?
ಶ್ರೀಕಿಯನ್ನು ರಾಜ್ಯದಿಂದ ತಮಿಳುನಾಡಿಗೆ ಕಳುಹಿಸಿದ ಕೇಂದ್ರ ಸರ್ಕಾರ, ಶ್ರೀಕಿಯಿಂದ ಎಷ್ಟು ಬೇಕೋ ಅಷ್ಟು ಸತ್ಯವನ್ನು, ವಿಚಾರಣೆಯ ನೆಪದಲ್ಲಿ ತಮಿಳುನಾಡಿನ ಸರ್ಕಾರದ ಸಹಾಯ ಮೇರೆಗೆ ಕೇಂದ್ರ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ. ಬಳಿಕ ಕೇಂದ್ರ ಸರ್ಕಾರದಿಂದ ರಾಜ್ಯದ ಪೊಲೀಸ್ ಇಲಾಖೆಗೆ ಪತ್ರ ರವಾನಿಸಲಾಗಿದೆ.
ಇದನ್ನೂ ಓದಿ:ಹಣವೇ ಇಲ್ಲದ ಹಣ.. ಬ್ಯಾಂಕೇ ಇಲ್ಲದ ಅಕೌಂಟ್.. ಬಿಟ್ ಕಾಯಿನ್ ‘ಮಾಯಾ ಹಣ’
ರಾಜ್ಯದ ಉತ್ತರಕ್ಕಾಗಿ ಕಾಯುತ್ತಿದೆ ಕೇಂದ್ರ
ಈಗಾಗಲೇ ಶ್ರೀಕಿಯ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಸದ್ಯ ರಾಜ್ಯದ ಪೊಲೀಸರ ಉತ್ತರದ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ ಇದೆ. ಹೀಗಾಗಿ ರಾಜ್ಯ ಸರ್ಕಾರ ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಕೇಂದ್ರಕ್ಕೆ ಯಾವೆಲ್ಲಾ ಮಾಹಿತಿ ನೀಡಲಿದೆ ಎಂಬ ಕುತೂಹಲ ವ್ಯಕ್ತವಾಗಿದೆ. ಜೊತೆಗೆ ಈ ಎರಡು ರಾಜ್ಯಗಳು ನೀಡಿರುವ ಉತ್ತರಗಳನ್ನ ತಾಳೆ ಹಾಕಿ ಮತ್ತೆ ತನಿಖೆ ಚುರುಕುಗೊಳ್ಳುವ ಸಾಧ್ಯತೆ ಇದೆ.