ಬೆಂಗಳೂರು: ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಬಿಟ್ ಕಾಯಿನ್ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ.. ಕಾಂಗ್ರೆಸ್ನವರು ಯಾರಾದ್ರು ಇಂತಹ ಅವ್ಯವಹಾರದಲ್ಲಿ ಭಾಗಿಯಾಗಿದ್ರೆ ಅವರನ್ನು ಗಲ್ಲಿಗೆ ಹಾಕಲಿ. ಯಾರ ಬೆಂಬಲಕ್ಕೂ ಯಾರೂ ನಿಲ್ಲಲ್ಲ. ಯಾರನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದಿದ್ದಾರೆ.
ಕಾಂಗ್ರೆಸ್ನವರು ಯಾರೇ ಭಾಗಿಯಾಗಿದ್ದರೂ, ಅವರನ್ನ ನೇಣಿಗೆ ಹಾಕಲಿ. ನಮ್ಮ ಪಕ್ಷದವರು ಇದ್ದರೆ ಅರೆಸ್ಟ್ ಮಾಡಲಿ. ನಮ್ಮದು ಯಾವುದೇ ತಕರಾರು ಇಲ್ಲ, ನಾವು ಯಾಕೆ ತನಿಖೆ ನಡೆಸಬೇಕು? ಸರ್ಕಾರ ಇರೋದು ಬಿಜೆಪಿಯದ್ದು. ಸಿಎಂ, ಹೋಮ್ ಮಿನಿಸ್ಟರ್ ಅವರೇ ಇರೋದು ಏನಾಗಿದೆ ಎಂದು ಬಹಿರಂಗ ಪಡಿಸಲಿ. ನಾವು ದಾಖಲೆ ಸಂಗ್ರಹ ಮಾಡುತ್ತಿದ್ದೇವೆ. ನಮ್ಮದೇ ರೀತಿಯಲ್ಲಿ ತನಿಖೆ ಆಗುತ್ತಿದೆ. ಸೂಕ್ತ ಸಮಯದಲ್ಲಿ ಮಾತನಾಡುತ್ತೇವೆ ಎಂದು ಗುಡುಗಿದ್ದಾರೆ.
The post ಬಿಟ್ ಕಾಯಿನ್ ದಂಧೆ; ‘ಕಾಂಗ್ರೆಸ್ನವರು ಭಾಗಿಯಾಗಿದ್ದರೆ ಗಲ್ಲಿಗೇರಿಸಲಿ’ -ಸರ್ಕಾರಕ್ಕೆ DKS ಸವಾಲ್ appeared first on News First Kannada.