ಬಿಟ್​ ಕಾಯಿನ್ ಬಗ್ಗೆ ಕೊಟ್ಟ ಶಾಕಿಂಗ್ ಹೇಳಿಕೆ ಕೊಟ್ಟ ಪ್ರಧಾನಿ ಮೋದಿ


ನವದೆಹಲಿ: ಸದ್ಯ ಕರ್ನಾಟಕ ಸೇರಿದಂತೆ ದೇಶದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಬಿಟ್​ ಕಾಯಿನ್​ ಮತ್ತು ಕ್ರಿಫ್ಟೊ ಕರೆನ್ಸಿಯ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇದರ ಗಂಭೀರತೆಯನ್ನರಿತ ಅವರು ಇಂದು ನಡೆದ ಸಿಡ್ನಿ ಸಂವಾದಲ್ಲಿ ಡಿಜಿಟಲ್​ ಕರೆನ್ಸಿ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ತಂತ್ರಜ್ಞಾನ ವಿಕಾಸ ಮತ್ತು ಕ್ರಾಂತಿ ವಿಚಾರ ಕುರಿತು ಮಾತನಾಡಿದ ಅವರು ಕ್ರಿಪ್ಟೋ ಕರೆನ್ಸಿ ವಿಷಯದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಬೇಕು. ದಿನ ಕಳೆದಂತೆ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಡಿಜಿಟಲ್ ರೂಪಾಂತರ ಆಗ್ತಿವೆ ಬಿಟ್‌ಕಾಯಿನ್‌ ಅಥವಾ ಕ್ರಿಪ್ಟೊಕರೆನ್ಸಿ ಉದಾಹರಣೆಯನ್ನೇ ತೆಗೆದುಕೊಳ್ಳಿ. ಲಕ್ಷಾಂತರ ಭಾರತೀಯರು ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಡಿಜಿಟಲ್ ಕರೆನ್ಸಿ ತಪ್ಪು ಕೈಗಳ ವಶವಾಗಿ ಯುವಜನತೆ ಹಾಳಾಗಬಾರದು ಎಂದಿದ್ದಾರೆ.

 

ಕ್ರಿಪ್ಟೋ ಕರೆನ್ಸಿ ನಮ್ಮ ಯುವಕರನ್ನ ತಪ್ಪು ಹಾದಿಗೆ ಕೊಂಡೊಯ್ಯಬಹುದು. ನಾವು ನಮ್ಮ ದೇಶದ ಯುವಜನತೆ ಹಾಳಾಗದಂತೆ ನೋಡಿಕೊಳ್ಳಬೇಕು . ಸಾಗರೋತ್ತರ ಹೂಡಿಕೆಯ ನಿರ್ವಹಣೆಯ ನಿಯಂತ್ರಣಕ್ಕೆ ಶಿಸ್ತುಬದ್ಧವಾದ ಚೌಕಟ್ಟು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ನಾವು ಯುವಜನತೆಯನ್ನು ಈ ಮಾಯಾ ಜಾಲದಲ್ಲಿ ಹಾಳಾಗುವುದನ್ನು ತಪ್ಪಿಸಲು ಸಾಧ್ಯವಾಗಬಹುದು. ಹೀಗಾಗಿ ಎಲ್ಲ ರಾಷ್ಟ್ರಗಳು ಒಂದಾಗಿ ಇದಕ್ಕೊಂದು ವ್ಯವಸ್ಥಿತ ಚೌಕಟ್ಟನ್ನು ನಿರ್ಮಿಸಬೇಕೆಂದು ಮೋದಿ ಸಂವಾದದಲ್ಲಿ ಭಾಗಿಯಾಗಿದ್ದ ರಾಷ್ಟ್ರಗಳಿಗೆ ಕರೆ ನೀಡಿದರು.

ಇನ್ನು ಬಿಟ್ ​ಕಾಯಿನ್​ ಪ್ರಕರಣದಲ್ಲಿ ರಾಜ್ಯದ ಕಮಲ ಪಕ್ಷದ ನಾಯಕರ ಹೆಸರು ಆರೋಪ ವಿಚಾರವನ್ನು ಸಿಎಂ ಬೊಮ್ಮಾಯಿ ಕೆಲ ದಿನಗಳ ಹಿಂದಿ ಪ್ರಧಾನಿ ಮೋದಿ ಅಂಗಳದಲ್ಲೂ ಇಟ್ಟಿದ್ದರು. ಈ ವೇಳೆ ಸಿಎಂ ಬೊಮ್ಮಾಯಿಗೆ ಪ್ರಧಾನಿಗಳು ಇವೆಲ್ಲವನ್ನ ಬದಿಗಿರಿಸಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಹೇಳಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದರು.

News First Live Kannada


Leave a Reply

Your email address will not be published. Required fields are marked *