ಡಿ.ಕೆ.ಶಿವಕುಮಾರ್
ಬೆಂಗಳೂರು: ಮೊದಲಿನಿಂದಲೂ ಬಿಟ್ ಕಾಯಿನ್ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ನಿನ್ನೆ ಹೆಚ್.ಡಿ.ಕುಮಾರಸ್ವಾಮಿಯವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಸರ್ಕಾರ ಕೆಲ ದಾಖಲೆ ಬಿಡುಗಡೆ ಮಾಡಿದೆ. ಆದರೆ ಅವರಿಗೆ ಏನು ಬೇಕೋ ಅದನ್ನೇ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಮೋದಿಗೆ (Narendra modi) ಬರೆದಿರುವ ಪತ್ರದ ಬಗ್ಗೆ ಮಾತಾಡುತ್ತಿಲ್ಲ. ಬಿಟ್ ಕಾಯಿನ್ (Bitcoin) ತನಿಖೆ ಬಗ್ಗೆ ಪ್ರಧಾನಿ ಅವರು ಮಾತಾಡುತ್ತಿಲ್ಲ. ಪ್ರಧಾನಿ ಈ ವಿಚಾರ ಬಿಟ್ಟು ಬಿಡಿ ಎಂದು ಹೇಳಿರಬಹುದು. ಆದರೆ ನಾವು ಮಾತ್ರ ಬಿಟ್ ಕಾಯಿನ್ ವಿಚಾರ ಬಿಡಲ್ಲ. ಬಿಟ್ ಕಾಯಿನ್ ದಂಧೆ ಬಗ್ಗೆ ನಾವು ದಾಖಲೆ ಸಂಗ್ರಹಿಸುತ್ತಿದ್ದೇವೆ ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸಮಯ ಬಂದಾಗ ಖಂಡಿತ ಬಿಟ್ ಕಾಯಿನ್ ದಾಖಲೆ ಬಿಡುಗಡೆ ಮಾಡುತ್ತೇವೆ. ನಾವು ಇದನ್ನು ಬಹಿರಂಗ ಮಾಡುತ್ತಿಲ್ಲ. ಬಿಜೆಪಿ ನಾಯಕರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ಇಂದು ಪಕ್ಷದ ಕಾರ್ಯಕ್ರಮ ಇದೆ. ಸಂಜೆ ನಂತರ ನಮ್ಮ ಪ್ರಾಮುಖ್ಯತೆ ಬದಲಾಗಬಹುದು. ಈ ವಿಚಾರವಾಗಿ ಇನ್ನಷ್ಟು ಮಾಹಿತಿ ಪಡೆಯುತ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:
Tv9 Digital Live | ಬಿಟ್ ಕಾಯಿನ್ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್ ಕರೆನ್ಸಿ?