ಬಿಟ್ ಕಾಯಿನ್ ಹಗರಣ: ಇಡಿಗೆ ಕರ್ನಾಟಕ ಸರ್ಕಾರ ಬರೆದಿದ್ದ ಪತ್ರ ಬಹಿರಂಗ | Bitcoin Scam Letter Karnataka Govt Writes to ED Published now


ಬಿಟ್ ಕಾಯಿನ್ ಹಗರಣ: ಇಡಿಗೆ ಕರ್ನಾಟಕ ಸರ್ಕಾರ ಬರೆದಿದ್ದ ಪತ್ರ ಬಹಿರಂಗ

ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ

ಬೆಂಗಳೂರು: ಬಿಟ್ ಕಾಯಿನ್ ಹಗರಣ ದಿನದಿಂದ ದಿನಕ್ಕೆ ಹೊಸರೂಪ ಪಡೆದುಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರವು ಬರೆದಿದ್ದ ಪತ್ರದಲ್ಲಿದ್ದ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮಾಹಿತಿ ನೀಡಿತ್ತು. 2020ರ ಡಿಸೆಂಬರ್​ನಲ್ಲಿಯೇ ಕೇಂದ್ರ ಅಪರಾಧ ದಳದ (ಸಿಸಿಬಿ) ತನಿಖೆ ವೇಳೆ ಶ್ರೀಕೃಷ್ಣ ಆರೋಪಿಯಾಗಿರುವ ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಿತ್ತು. ಮಾರ್ಚ್ ತಿಂಗಳಲ್ಲಿ ಇಡಿಗೆ ಪತ್ರದ ಮೂಲಕ ರಾಜ್ಯ ಸರ್ಕಾರ ಮಾಹಿತಿ ನೀಡಿತ್ತು.

ಸಿಸಿಬಿಯಿಂದ ಮಾಹಿತಿ ಪಡೆದು ಇಡಿ ಅಧಿಕಾರಿಗಳು‌ ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಶ್ರೀಕೃಷ್ಣ ಜೈಲಿನಲ್ಲಿದ್ದಾಗಲೇ ತನಿಖೆ ನಡೆಸಿರುವ ಬೆಂಗಳೂರು ಇಡಿ ಅಧಿಕಾರಿಗಳು, 3 ಬಾರಿ ಶ್ರೀಕಿಯನ್ನು ವಶಕ್ಕೆ ಪಡೆದು ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.‌ ವಿದೇಶಗಳಲ್ಲಿ ಹಾಗೂ ಅಂತರಾಷ್ಟ್ರೀಯ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿದ್ದ ವಿಚಾರದಲ್ಲಿ ವಿಚಾರಣೆ ನಡೆಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಚಾರಣೆಗೆ ಅಧಿಕಾರವಿಲ್ಲದ ಕಾರಣ ಇಡಿಗೆ ಸಿಸಿಬಿ ಮಾಹಿತಿ ನೀಡಿದ್ದು, ಸಿಸಿಬಿ ಅಧಿಕಾರಿಗಳು ನೀಡಿದ್ದ ಮಾಹಿತಿ ಅಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.‌

ತನಿಖೆಯಲ್ಲಿ ಬಿಟ್ ಕಾಯಿನ್​ಗಳನ್ನು ಅಮಾನತುಪಡಿಸಿಕೊಳ್ಳಲು ಇಬ್ಬರು ತಜ್ಞ ಅಧಿಕಾರಿಗಳನ್ನು ಪಂಚನಾಮೆಗೆ ಕಳುಹಿಸಿಕೊಡುವಂತೆ ಸಿಸಿಬಿ ಪತ್ರ ಬರೆದಿತ್ತು. ಬಿಟ್ ಕಾಯಿನ್​ಗಳನ್ನು ಭಾರತೀಯ ರೂಪಾಯಿಗೆ ವರ್ಗಾವಣೆ ಮಾಡಲು ಬಿಟ್​ ಕಾಯಿನ್ ಖಾತೆ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಪತ್ರ ಕೂಡಾ ಈಗ ಇದೀಗ ಬಹಿರಂಗವಾಗಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ದಂಧೆ: ಸಿದ್ದರಾಮಯ್ಯ, ಸೋಮಣ್ಣ ಆರೋಪ ಪ್ರತ್ಯಾರೋಪ
ಇದನ್ನೂ ಓದಿ: Bitcoin: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ 60 ಸಾವಿರ ಯುಎಸ್​ಡಿ ಸಮೀಪಕ್ಕೆ

TV9 Kannada


Leave a Reply

Your email address will not be published. Required fields are marked *