ರಾಮನಗರ: ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ ಬಿಡದಿ ತಟ್ಟೆ ಇಡ್ಲಿಯನ್ನ ತುಂಬಾನೇ ಇಷ್ಟ ಪಡುತ್ತಿದ್ದರು. ಬಿಡದಿಯ ಕಡೆ ಹೋದಾಗ ಬಿಡುವ ಸಿಕ್ಕಾಗ ಶ್ರೀ ಶಿವಸಾಗರ್ ಬಿಡದಿ ಬಿಸಿ ತಟ್ಟೆ ಇಡ್ಲಿ ಹೋಟೆಲ್ಗೆ ಬಂದು ತಟ್ಟೆ ಇಡ್ಲಿ ತಿಂದು ಹೋಗುತ್ತಿದ್ದರು.
ಈಗ ಅಪ್ಪು ನಿಧನದ ಸುದ್ದಿ ಕೇಳಿ ಹೋಟೆಲ್ ಮಾಲೀಕ ಲೋಕೇಶ್ ರಾಮಾಚಾರಿ, ಆಘಾತಕ್ಕೆ ಒಳಗಾಗಿದ್ದಾರೆ. ನೆಚ್ಚಿನ ನಟನನ್ನ ಕಳೆದುಕೊಂಡಿದ್ದಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದೇ ವೇಳೆ ನ್ಯೂಸ್ ಫಸ್ಟ್ ಜೊತೆ ಅಪ್ಪು ಜೊತೆಗಿನ ಸಂದರ ಕ್ಷಣವನ್ನ ಮೆಲುಕು ಹಾಕಿ ಬೇಸರ ವ್ಯಕ್ತಪಡಿಸಿದ್ರು.
ಬಿಡದಿ ತಟ್ಟೆ ಇಡ್ಲಿ ಅಂದ್ರೆ ಪುನೀತ್ ರಾಜ್‍ಕುಮಾರ್‌ಗೆ ಎಲ್ಲಿಲ್ಲದ ಪ್ರೀತಿ ಇತ್ತು. ಅವರ ನೆಚ್ಚಿನ ಹೋಟೆಲ್ ಅಂದರೆ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್ ಆಗಿತ್ತು. ಸಾಕಷ್ಟು ಬಾರಿ ನಮ್ಮ ಹೋಟೆಲ್ನಿಂದ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಇಡ್ಲಿಯನ್ನ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು.
ಅಪ್ಪು ನಮ್ಮನ್ನ ಬಿಟ್ಟುಹೋಗುರುವುದು ನಿಜಕ್ಕೂ ಅತ್ಯಂತ ಬೇಸರದ ಸಂಗತಿ ಎಂದು ಲೋಕೇಶ್ ಭಾವುಕರಾದರು. ಇನ್ನು ಲೋಕೇಶ್ ಅಪ್ಪು ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನ ಹೋಟೆಲ್ನಲ್ಲಿ ಇಟ್ಟು ಗೌರವಿಸುತ್ತಿದ್ದಾರೆ.