ಬೆಂಗಳೂರು: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ)ದಲ್ಲಿ ನಿನ್ನೆ ಆರಂಭವಾಗಿದ್ದ ಎಸಿಬಿ ಅಧಿಕಾರಿಗಳ ದಾಳಿ ಇಂದು ಮುಂದುವರಿದಿದ್ದು, ಎಸಿಬಿ ಅಧಿಕಾರಿಗಳು ಬಿಡಿಎ ಕಚೇರಿಯಲ್ಲಿರೋ ಪ್ರತಿಯೊಂದು ಹಾಳೆಯನ್ನು ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳ ದಾಳಿ ವೇಳೆ ಬೃಹತ್ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಬಿಡಿಎ ಕಚೇರಿಗಳ ಮೇಲಿನ ಎಬಿಸಿ ದಾಳಿ ಅಂತ್ಯಗೊಂಡಿದ್ದು, 2ನೇ ದಿನದ ದಾಳಿ ಸಂದರ್ಭದಲ್ಲಿ ಬೆಳಕಿಗೆ ಬಂದ ಅಕ್ರಮಗಳ ಕುರಿತು ಎಸಿಬಿ ಸುದೀರ್ಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.
2ನೇ ದಿನದ ದಾಳಿಯಲ್ಲಿ ಏನೆಲ್ಲ ಅಕ್ರಮಗಳು ಪತ್ತೆ ಆಯ್ತು..?
- ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ 75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಠಿಸಿರುವುದು ಪತ್ತೆ
- ಕೆಂಗೇರಿ ಹೊಬಳಿಯಲ್ಲಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು
- ಸ್ಯಾಟಲೈಟ್ ಟೌನ್ ಬಳಿ 80 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು
- ಚಂದ್ರಾಲೇಔಟ್ ನಲ್ಲಿ 2400 ಚದರ ಅಡಿಯ 5 ಕೋಟಿ ಮೌಲ್ಯದ ನಿವೇಶನ ಅಕ್ರಮ ಮಂಜೂರು
- ಕೆಂಪೇಗೌಡ ಲೇಔಟ್ ನಲ್ಲಿ 30 ಲಕ್ಷ ಮೌಲ್ಯದ ಅಕ್ರಮ ನಿವೇಶನ ಮಂಜೂರು
- ಒಂದು ನಿವೇಶನವನ್ನ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ನೊಂದಣಿ ಈ ಕುರಿತು ತನಿಖೆ
- ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 52 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು
- ಅರ್ಕಾವತಿ ಲೇಔಟ್ ನಲ್ಲಿ ಪಲಾನುಭವಿಗಳಿಗಲ್ಲದೆ ಬೇರೆಯವರಿಗೆ ನಿವೇಶನ ಮಂಜೂರು
- ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್, ಮೊದಲಾದ ಕಡೆ ಅಧಿಕಾರಿಗಳು ಮತ್ತು ಮದ್ಯವರ್ತಿಗಳೊಂದಿಗೆ ಅಕ್ರಮವಾಗಿ ಸೈಟ್ ಗಳ ಮಂಜೂರು
- ಕೋಟ್ಯಾಂತರ ಮೌಲ್ಯದ ಪರಿಹಾರ ಧನ ಸದರಿ ವಯಕ್ತಿಗಳಿಗೆ ನೀಡದೆ ಬೇರೆಯವರಿಗೆ ನೀಡಿರುವುದು ಪತ್ತೆ
- ಅಂಜನಾಪುರ ಬಡಾವಣೆಯಲ್ಲಿ ಮೂಲ ಮಾಲೀಕನಿಗಲ್ಲದೆ ಬೇರೆಯವರಿಗೆ ನಿವೇಶನ ನೀಡಿರುವ ದಾಖಲೆ ಪತ್ತೆ
- ಅರ್ಕಾವತಿ ಲೇಔಟ್ ಸೇರಿದಂತೆ ಇತರೆ ಕಡೆ ಅರ್ಜಿದಾರರಿಂದ ಹಣ ಪಡೆದು ನಿವೇಶನ ನೀಡದೆ ತೊಂದರೆ ಕೊಟ್ಟಿರುವ ಅಧಿಕಾರಿಗಳು
- ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ವಿಳಂಭ ಮಾಡಿರುವು ಪತ್ತೆಯಾಗಿದೆ..
ಸದ್ಯ ಎಸಿವಿ ಅಧಿಕಾರಿಗಳು ಅಂದಾಜು 100 ಕೋಟಿ ರೂಪಾಯಿಗೂ ಅಧಿಕ ಭೂ ದಾಖಲೆಗಳನ್ನು ಸೀಜ್ ಮಾಡಿದ್ದು, ಎಲ್ಲಾ ದಾಖಲಾತಿಗಳನ್ನ ಎಸಿಬಿ ಕಚೇರಿಗೆ ಕೊಂಡ್ಯೋದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.