ಬಿಡಿಎ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ; ತೆರವಿಗೆ ತೆರಳಿದ ಅಧಿಕಾರಿಗೆ ಮೂರು ದಿನ ಕಾಲಾವಕಾಶ ಕೇಳಿದ ಶಾಸಕ | Illegal home construction in BDA acquired land: A MLA asked for three days


ಬಿಡಿಎ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ; ತೆರವಿಗೆ ತೆರಳಿದ ಅಧಿಕಾರಿಗೆ ಮೂರು ದಿನ ಕಾಲಾವಕಾಶ ಕೇಳಿದ ಶಾಸಕ

ಬಿಡಿಎ

Image Credit source: Deccan Herald

ನಗರದ R.T.ನಗರದ ಹೆಚ್​ಜಿಹೆಚ್​ ಲೇಔಟ್​ನಲ್ಲಿ ಬಿಡಿಎ ಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಐಷಾರಾಮಿ ಮನೆ ತೆರವಿಗೆ ಪೊಲೀಸ್ ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳು ಆಗಮಸಿದ್ದರು.

ಬೆಂಗಳೂರು: ನಗರದ R.T.ನಗರದ ಹೆಚ್​ಜಿಹೆಚ್​ ಲೇಔಟ್​ನಲ್ಲಿ ಬಿಡಿಎ (BDA) ಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಐಷಾರಾಮಿ ಮನೆ ತೆರವಿಗೆ ಪೊಲೀಸ್ (Police) ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳು ಆಗಮಸಿದ್ದರು. ಮುನಿರಾಜು ಎಂಬ ವ್ಯಕ್ತಿ ಬಿಡಿಎ ಜಾಗದಲ್ಲಿ ಐಷಾರಾಮಿ ಮನೆ ನಿರ್ಮಿಸಿದ್ದನು.  ಕೋಟ್ಯಂತರ ರೂ. ಮೌಲ್ಯದ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದು, ಮನೆಯನ್ನು ತೆರವುಗೊಳಿಸಲು ಬಿಡಿಎ ಅಧಿಕಾರಿಗಳು ಆಗಮಿಸಿದ್ದರು.  ವಿಷಯ ತಿಳಿಯುವಂತೆ ಸ್ಥಳಕ್ಕೆ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ (Byrathi Suresh) ಸುರೇಶ್​ ಆಗಮಿಸಿದ್ದಾರೆ. ಶಾಸಕರ ಮಧ್ಯಪ್ರವೇಶದಿಂದ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಶಾಸಕರು 3 ದಿನ ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಅಧಿಕಾರಿಗಳು ಸಮ್ಮತಿಸಿ ವಾಪಸ್ಸಾಗಿದ್ದಾರೆ.

ಇದನ್ನು ಓದಿ: ಇನ್​​ಸ್ಟಾಗ್ರಾಮ್ ರೀಲ್ಸ್​ನಲ್ಲಿ ದೊಡ್ಡ ಬದಲಾವಣೆ: ಹೊಸ ಆಯ್ಕೆಯಲ್ಲಿ ಏನಿದೆ ನೋಡಿ

ಈ ಕುರಿತು ಮಾತನಾಡಿದ ಬಿಡಿಎ ಇಂಜಿನಿಯರ್ ಕುಮಾರ್ ಬಿಡಿಎ ಸ್ವಾಧೀನ ಪಡಿಸಿಕೊಂಡು ನಿರ್ಮಿಸಿರುವ ಲೇಔಟ್ ನಲ್ಲಿ ಒತ್ತುವರಿ ಮಾಡಲಾಗಿದೆ. ಎರಡು ಸೈಟ್ ನಲ್ಲಿ ಒಂದು ಶೆಡ್ಡು, ಒಂದು ಮನೆ ನಿರ್ಮಿಸಿದ್ದಾರೆ. ಮನೆಗೆ ನೀಡಿದ್ದ ಖಾತಾವನ್ನ ಬಿಬಿಎಂಪಿ ರದ್ದು ಪಡಿಸಿದೆ. ಈಗ ಒತ್ತುವರಿ ತೆರವು ಮಾಡಲು ಬಂದಿದ್ದೇವೆ.  ಸಾಕಷ್ಟು ಬಾರಿ ನೋಟೀಸ್ ನೀಡಲಾಗಿತ್ತು, ಅದಕ್ಕೆ ಉತ್ತರ ನೀಡಿರಲಿಲ್ಲ. ಅವರು ಮೂರು ದಿನದ ಕಾಲಾವಕಾಶ ಕೇಳಿದ್ದಾರೆ. ಮನೆ ಕೂಡಾ ಬಿಡಿಎ ಜಾಗದಲ್ಲಿದೆ, ಅದನ್ನ ತೆರವು ಮಾಡ್ತೇವೆ ಎಂದು ಹೇಳಿದ್ದಾರೆ.

ಬಿಡಿಎ ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಂತೆ ವರ್ತಿಸಬಾರದು: ಹೈಕೋರ್ಟ್

ಬೆಂಗಳೂರು: ಬಿಡಿಎ ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯಂತೆ ವರ್ತಿಸಬಾರದು.  ಲಾಭ ಗಳಿಕೆಗಿಂತ ಸೈಟ್ ಮಂಜೂರಾದವರ ಸಮಸ್ಯೆ ಬಗೆಹರಿಸಿ ಎಂದು ಬಿಡಿಎಗೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿದೆ. ಅರ್ಕಾವತಿ ಬಡಾವಣೆಯಲ್ಲಿ ಸೈಟ್ ಮಂಜೂರಾದವರು ಹಲವು ಸಮಸ್ಯೆ ಮುಂದೂಡಿ ಹೈಕೋರ್ಟಗೆ  ಅರ್ಜಿ ಸಲ್ಲಿಸಿದ್ದರು. ಮೊದಲು ಕಾಲುವೆ ಬಫರ್ ಜೋನ್‌ನಲ್ಲಿ ನಿವೇಶನ ಹಂಚಿಕೆ ಮಾಡಿದ್ದರು. ನಂತರ ನಕ್ಷೆ ಬದಲಿಸಿ ಸೈಟ್‌ಗಳ ಮೇಲೆ ರಸ್ತೆ ನಿರ್ಮಾಣ ಮಾಡಿದ್ದಾರೆ. ಸೈಟ್ ಕಳೆದುಕೊಂಡವರಿಗೆ 35 ಕಿ.ಮೀ. ದೂರದಲ್ಲಿ ಬದಲಿ ಸೈಟ್ ನೀಡಬೇಕು. ಇದು ಬಿಡಿಎ ಅಧಿಕಾರಿಗಳ ಕರ್ತವ್ಯಲೋಪ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಇದನ್ನು ಓದಿ: ನಾವು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸೈಟ್ ಹರಾಜಿಗಿಂತ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಿ. ನಿವೇಶನ ಮಂಜೂರಾದವರಿಗೆ ಸೈಟ್ ಒದಗಿಸಿ. ಅರ್ಕಾವತಿ ಬಡಾವಣೆಯಲ್ಲಿ ಹರಾಜಿಗೆ ಆದ್ಯತೆ ಸರಿಯಲ್ಲ. ಜೂ.7ರೊಳಗೆ ಬಿಡಿಎ ತನ್ನ  ನಿಲುವು ತಿಳಸಬೇಕು ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಸೂಚನೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *