ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಜಾರಿ ಮಾಡಿದ್ದರೂ ಕೂಡ ಇಲ್ಲದ ಕಾರಣಗಳನ್ನು ನೀಡಿ ರಸ್ತೆಗಿಳಿಯುವ ಜನರ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ವಿನಾಕಾರಣ ರಸ್ತೆಗಳಿಯುವ ಜನರನ್ನು ಪೊಲೀಸರು ತಡೆದು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪೊಲೀಸ್​ರೊಂದಿಗೆ ವಾಗ್ದಾದಕ್ಕೆ ಇಳಿಯುವ ಜನರು ಸ್ಥಳದಲ್ಲೇ ಹೈ ಡ್ರಾಮಾ ಸೃಷ್ಠಿ ಮಾಡುತ್ತಾರೆ. ಇಂತಹದ್ದೆ ಘಟನೆ ಇಂದು ನಗರದ ನೃಪತುಂಗ ರಸ್ತೆಯಲ್ಲಿ ನಡೆದಿದೆ.

ಅನಗತ್ಯವಾಗಿ ರಸ್ತೆಗೆ ಇಳಿಯದರೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಕಮಿಷನರ್ ನಿನ್ನೆಯೇ ಎಚ್ಚರಿಕೆ ನೀಡಿದ್ದರು. ಇದರ ನಡುವೆಯೂ ಇಂದು ರಸ್ತೆಗಳಲ್ಲಿ ವಾಹನಗಳು ಹೆಚ್ಚು ಸಂಚರಿಸುತ್ತಿದ್ದ ಕಾರಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದೇ ವೇಳೆ ಫೋರ್ಡ್​ ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರೇಷನ್​ ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದು ಕಾರ್ಡ್​​ ತೋರಿಸಿದ್ದರು. ಆದರೆ ಮಹಿಳೆಯ ಉತ್ತರವನ್ನು ಕಂಡು ಅಚ್ಚರಿಗೆ ಒಳಗಾದ ಪೊಲೀಸರು ಕಾರನ್ನು ಸೀಜ್​ ಮಾಡಿದ್ದರು.

ಪೊಲೀಸರು ಕಾರು ಸೀಜ್​ ಮಾಡುತ್ತಿದಂತೆ ಸ್ಥಳದಲ್ಲಿ ಹೈಡ್ರಾಮಾ ಸೃಷ್ಠಿಸಿದ ಮಹಿಳೆ, ರೇಷನ್ ತಗೊಂಡ್ ಬರೋಕೆ ಹೋಗ್ತಿದ್ದೀನಿ ನನ್ನ ಬಳಿ ಬಿಪಿಎಲ್​ ಕಾರ್ಡ್​ ಇದೆ ಅಂತಾ ಮಹಿಳೆ ಕಣ್ಣೀರು ಹಾಕಿದ್ದರು. ಕೂಡಲೇ ಸ್ಥಳೀಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ಪರಿಶೀಲನೆ ನಡೆಸಲು ವಾಹನದಲ್ಲಿ ಕರೆದುಕೊಂಡು ಹೋದರು.

ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಅನಗತ್ಯವಾಗಿ ರಸ್ತೆಗೆ ಆಗಮಿಸಿದ್ದವರ ವಾಹನಗಳನ್ನು ಸೀಜ್ ಮಾಡಿದ್ದಾರೆ. ಬೆಂಗಳೂರು ಟ್ರಾಫಿಕ್​​ ಪೊಲೀಸರು ಹಾಗೂ ಸಿವಿಲ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇದರಂತೆ ಕೇಂದ್ರ ವಿಭಾಗದ ವ್ಯಾಪ್ತಿಲ್ಲಿ ಈವರೆಗೆ 129 ವಾಹನಗಳನ್ನ ಸೀಜ್ ಮಾಡಲಾಗಿದೆ. ಇದುವರೆಗೂ ನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ.

The post ಬಿಪಿಎಲ್​​ ಕಾರ್ಡು​.. ಫೋರ್ಡ್​​ ಕಾರು- ಏನಿದು ಮಹಿಳೆಯ ಕಮಾಲ್​​..?! appeared first on News First Kannada.

Source: newsfirstlive.com

Source link