ನವದೆಹಲಿ: ಚಿಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ಘೋರ ಪ್ರಮಾದಕ್ಕೆ ಒಳಗಾಗಿದ್ದು, ತಮಿಳುನಾಡಿನ ಕೂನೂರು ಸಮೀಪದಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ದುರ್ಘಟನೆಯಲ್ಲಿ ಸಿಡಿಎಸ್ ರಾವತ್ ಹಾಗೂ ಪತ್ನಿ ಸೇರಿ 13 ಮಂದಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಈ ನಡುವೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮ ದಿನಾಚರಣೆ ನಾಳೆ ಇದ್ದು, ರಾವತ್ರ ನಿಧನ ಹಿನ್ನೆಲೆಯಲ್ಲಿ ಸೋನಿಯಾ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಸೋನಿಯಾ ಅವರ ಹುಟ್ಟುಹಬ್ಬ ಆಚರಿಸಿ, ಸಂಭ್ರಮಾಚರಣೆ ನಡೆಸದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
Hon’ble Congress President has decided not to celebrate her birthday, tomorrow the 9th December.
Urging party workers and supporters to strictly avoid any celebrations.
— K C Venugopal (@kcvenugopalmp) December 8, 2021