ಬಿಬಿಎಂಪಿ (ಪ್ರಾತತಿನಿಧಿಕ ಚಿತ್ರ)
ಬೆಂಗಳೂರು: ಸಣ್ಣ ಪುಟ್ಟ ಮಳೆಗೂ ಬೆಂಗಳೂರಿನಲ್ಲಿ ಜಲಪ್ರಳಯವಾಗುತ್ತಿದ್ದು, ಈ ರೀತಿ ಪ್ರವಾಹಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಲು ಬಿಬಿಎಂಪಿ (BBMP) ತೀರ್ಮಾನ ಮಾಡಿದೆ. ಈಗಾಗಲೇ ಬಿಬಿಎಂಪಿಯಿಂದ ಒತ್ತುವರಿ ಮಾಡಿರುವ ಕಟ್ಟಡಗಳ (Building) ಪಟ್ಟಿ ಸಿದ್ಧಪಡಿಸಲಾಗಿದೆ. ಆ ಪೈಕಿ ಒಟ್ಟು 714 ಕಟ್ಟಡಗಳ ತೆರವಿಗೆ ತೀರ್ಮಾನ ಮಾಡಲಾಗಿದೆ.
ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ ಹೀಗಿದೆ
ಬಿಬಿಎಂಪಿ ಶತಾಯಗತಾಯ ಒತ್ತುವರಿ ತೆರುವಿಗೆ ತೀರ್ಮಾನ ಮಾಡಿದ್ದು, ಆ ಮೂಲಕ ತೆರವಿಗೆ ಪಟ್ಟಿ ಸಿದ್ಧಪಡಿಸಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯ 59 ಕಟ್ಟಡ, ದಕ್ಷಿಣ ವಲಯ 20 ಕಟ್ಟಡ, ಕೋರಮಂಗಲ ವ್ಯಾಲಿ ವಲಯ 3 ಕಟ್ಟಡ, ಯಲಹಂಕ ವಲಯ 103, ಮಹಾದೇವಪುರ ವಲಯ184, ಬೊಮ್ಮನಹಳ್ಳಿ ವಲಯ 92 ಕಟ್ಟಡಗಳು, ಆರ್. ಆರ್. ನಗರ ವಲಯ 9 ಕಟ್ಟಡಗಳು, ದಾಸರಹಳ್ಳಿ ವಲಯ 134 ಕಟ್ಟಡಗಳು ಪಟ್ಟಿಯಲ್ಲಿವೆ.

ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ
ಬೆಂಗಳೂರು: ಸದ್ಯಕ್ಕೆ ಬಿಸಿಲು, ಮೂರು ದಿನದ ನಂತರ ಮತ್ತೊಂದು ಸೈಕ್ಲೋನ್ ಅಪ್ಪಳಿಸಲಿದೆ
ಕರ್ನಾಟಕ ರಾಜ್ಯಾದ್ಯಂತ ಕೆಲವೆಡೆ ಸುರಿದ ಮಳೆಯಿಂದ ಜನ ಜೀವನ ತತ್ತರಿಸಿದೆ. ಸದ್ಯ ಮಳೆ ನಿಂತರೂ ಮರದ ಹನಿ ನಿಲ್ಲದು ಅನ್ನೋಹಾಗೆ ರಾಜ್ಯದಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ರು ಕೂಡ ಮಳೆ ಸೃಷ್ಟಿಸಿರುವ ಅವಾಂತರದಿಂದ ಮುಕ್ತಿ ಸಿಕ್ಕಿಲ್ಲ. ಆದ್ರೆ ಮಳೆಯಿಂದ ತತ್ತರಿಸಿರೋ ರಾಜ್ಯಕ್ಕೆ ಈಗ ಮತ್ತೊಂದು ಆಘಾತ ಉಂಟಾಗಿದೆ. ನವೆಂಬರ್ 26ಕ್ಕೆ ಮತ್ತೆ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಸಿಕ್ಕಿದೆ.
ನವೆಂಬರ್ 26ರಿಂದ ಡಿಸೆಂಬರ್ 15ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೈಕ್ಲೋನ್ ಆಗಿ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು, ಕೇರಳ, ಆಂಧ್ರ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದ್ದು ಪುದುಚೆರಿ, ಚೆನ್ನೈ, ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ನೆರೆ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ನವೆಂಬರ್ 26ರಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಸದ್ಯ ವರುಣ ಕೊಂಚ ಬಿಡುವು ಕೊಟ್ಟಿದ್ದಾನೆ. ಮಳೆ ಸದ್ಯ ನಿಂತಿದ್ದು, ಮಳೆಯ ಪರಿಣಾಮಕ್ಕೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ನಡುವೆ ಈಗ ಮತ್ತೆ ನವೆಂಬರ್ 26 ರಿಂದ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು ಆತಂಕ ಹೆಚ್ಚಾಗಿದೆ.
ತಮಿಳುನಾಡಿನಲ್ಲಿ ವಿಪರೀತ ಮಳೆ ಸುರಿಯಲು ಪ್ರಾರಂಭಿಸಿ ಅದಾಗಲೇ ವಾರದ ಮೇಲಾಯಿತು. ಅದರೊಂದಿಗೆ ಆಂಧ್ರಪ್ರದೇಶ, ಕೇರಳ, ಪುದುಚೇರಿಯಲ್ಲೂ ಒಂದೇಸಮ ಮಳೆಯಾಗುತ್ತಿದೆ. ಐಎಂಡಿ ದಕ್ಷಿಣ ತಮಿಳುನಾಡು, ಪುದುಕೊಟ್ಟೈ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಅಲ್ಲಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುಂದಿನ ಐದು ದಿನಗಳ ಕಾಲ ತಮಿಳುನಾಡಿನ ಎರೋಡ್, ನಮಕ್ಕಲ್, ಕಲ್ಲಕುರಿಚಿ ಮತ್ತು ಪೆರಂಬಲೂರ್ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ಇದನ್ನೂ ಓದಿ:
ಅಕ್ರಮ ಕಟ್ಟಡ ತೆರವು ವಿಚಾರ: ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್ ಗರಂ
ಮೈಸೂರಿನಲ್ಲೂ ಭಾರಿ ಮಳೆ, ಬೃಹತ್ ಮರ ಧರೆಗುರುಳಿ ಎರಡು ಕಾರು ಜಖಂ, ರಸ್ತೆ ಸಂಚಾರ ಸ್ಥಗಿತ, ತೆರವು ಕಾರ್ಯ ಜಾರಿಯಲ್ಲಿದೆ