ಮನೆಯಲ್ಲಿ ಯಾವೆಲ್ಲ ವಸ್ತುಗಳು ಜಲಾವೃತಗೊಂಡಿವೆ ಎಂದು ಫೋಟೊ ಸಮೇತ ನಿವಾಸಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಬಳಿಕ ಬಿಬಿಎಂಪಿ ಸಿಬ್ಬಂದಿಗಳು ಪೋಟೊ ಸಮೇತ ಬಿಬಿಎಂಪಿ ಲಿಂಕ್ ಮೂಲಕ ಮಾಹಿತಿ ಅಪ್ಲೋಡ್ ಮಾಡಲಾಗುವುದು.
ಬೆಂಗಳೂರು: ಹೊರಮಾವು ಸಾಯಿ ಬಡಾವಣೆ ಮಳೆ ಪೀಡಿತ ಪ್ರದೇಶಗಳಿಗೆ ಬಿಬಿಎಂಪಿ ಸಿಬ್ಬಂದಿಗಳು ಭೇಟಿ ನೀಡಿದ್ದು, ಮನೆ ಮನೆ ಸರ್ವೆ ಕಾರ್ಯ ಆರಂಭ ಮಾಡಿದ್ದಾರೆ. ಮಳೆ ಹಾನಿಯಾದ ಪ್ರತಿ ಮನೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ 25 ಸಾವಿರ ಪರಿಹಾರ ಘೋಷಣೆ ಹಿನ್ನಲೆ ಬಿಬಿಎಂಪಿ ಸಿಬ್ಬಂದಿಗಳು ಮಾಹಿತಿ ಪಡೆಯುತ್ತಿದ್ದಾರೆ. ಹಾನಿಗೊಳಗಾಗಿರುವ ಮನೆಗಳಿಗೆ ಭೇಟಿ ನೀಡಿದ್ದು, ಪರಿಹಾರ ಒದಗಿಸಲು ಬಿಬಿಎಂಪಿಯಿಂದ ಸರ್ವೆ ಮಾಡಲಾಗಿದೆ. ಮನೆಯಲ್ಲಿ ಯಾವೆಲ್ಲ ವಸ್ತುಗಳು ಜಲಾವೃತಗೊಂಡಿವೆ ಎಂದು ಫೋಟೊ ಸಮೇತ ನಿವಾಸಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಬಳಿಕ ಬಿಬಿಎಂಪಿ ಸಿಬ್ಬಂದಿಗಳು ಪೋಟೊ ಸಮೇತ ಬಿಬಿಎಂಪಿ ಲಿಂಕ್ ಮೂಲಕ ಮಾಹಿತಿ ಅಪ್ಲೋಡ್ ಮಾಡಲಾಗುವುದು.
ಮಳೆಯಿಂದ ಹೈರಾಣಾದ ಹೊರಮಾವು ಜನ
ನಗರದಲ್ಲಿ ಭಾರಿ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಹೊರಮಾವಿನಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯಿಂದ ಹೊರಗೆ ಬರಲಾಗದ ಹಿನ್ನೆಲೆ ಜನರಿಗೆ ಬಿಬಿಎಂಪಿ ಅಧಿಕಾರಿಗಳು ಫುಡ್ ಸಪ್ಲೈ ಮಾಡಿದ್ದಾರೆ. ಹೊರಮಾವಿನ ಸಾಯಿ ಲೇಔಟ್ನಲ್ಲಿ ಮಳೆ ನಿಂತರು ನೀರು ಮಾತ್ರ ಕಮ್ಮಿ ಆಗಿಲ್ಲ. ಮೊನ್ನೆ ಸುರಿದ ಮಳೆಯಿಂದ ನೀರು ತುಂಬಿಕೊಂಡಿದೆ. ಇನ್ನೂ ಎರಡು ಅಡಿಯಷ್ಟು ನೀರು ನಿಂತುಕೊಂಡಿದ್ದು, ನೀರು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಮನೆಯ ನೀರಿನ ಸಂಪ್ನಲ್ಲಿ ತುಂಬಾ ಕೊಳಚೆ ನೀರು ತುಂಬಿಕೊಂಡಿದೆ. ಬಳಕೆ ಮಾಡಲು, ಕುಡಿಯಲು ನೀರಿಲ್ಲ. ಐದು ಜನಕ್ಕೆ ಒಂದು ಬಾಟಲ್ ನೀರು ಕೊಟ್ಟಿದ್ದಾರೆ. ಯಾವುದೇ ರೀತಿಯ ವ್ಯವಸ್ಥೆ ಮಾಡಿಲ್ಲ ಎಂದು ಸಾಯಿ ಲೇಔಟ್ ನಿವಾಸಿಗಳು ಹೇಳಿದ್ದಾರೆ.