ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ 34,68,463 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ 5 ತಿಂಗಳು (ಒಂದು ವಾರ ಕಡಿಮೆ ಅವಧಿಯಲ್ಲಿ) 33,074 ಸೆಷನ್ ಮಾಡಲಾಗಿದೆ. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ನ್ನು 28,54,671 ಜನ ಮೊದಲನೇ ಡೋಸ್ ಪಡೆದಿದ್ದಾರೆ. ಹಾಗೆಯೇ ಎರಡನೇ ಡೋಸ್ ನ್ನು 6,13,792 ಜನ ಪಡೆದಿದ್ದಾರೆ.

ಲಸಿಕೆ ಪಡೆದವರ ಮಾಹಿತಿ
* ಆರೋಗ್ಯ ಕಾರ್ಯಕರ್ತರು: 19,347
* ಮುಂಚೂಣಿ ಕಾರ್ಯಕರ್ತರು: 1,63,616
* 18-44 ವರ್ಷದವರು: 9,03,765
* 45+ ವರ್ಷ ಮೇಲ್ಪಟ್ಟವರು (60+ಸೇರಿದಂತೆ): 15,43,617
* 60+ ಮೇಲ್ಪಟ್ಟವರು: 6,75,775

ಹಾಗೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ 53,400 ಡೋಸ್ ಕೋವ್ಯಾಕ್ಸಿನ್,18-44 ವರ್ಷ ಒಳಗಿನವರಿಗೆ ನೀಡಲು ಬೇಕಾದ 25,140 ಡೋಸ್ ಕೋವಿಶೀಲ್ಡ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ನೀಡಲು 45,860 ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್ ಬಿಬಿಎಂಪಿಯಲ್ಲಿ ಸಂಗ್ರಹವಿದೆಯೆಂದು ಬಿಬಿಎಂಪಿ ಪ್ರಕಟನೆ ಹೊರಡಿಸಿದ್ದಾರೆ.

The post ಬಿಬಿಎಂಪಿ ವ್ಯಾಪ್ತಿಯಲ್ಲಿ 34,68,463 ಜನಕ್ಕೆ ಕೊರೊನಾ ಲಸಿಕೆ appeared first on Public TV.

Source: publictv.in

Source link