ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ಗ್ಲೇನ್ ಮ್ಯಾಕ್ಸ್ವೆಲ್ ಹೊಸ ದಾಖಲೆಯೊಂದು ಬರೆದಿದ್ದಾರೆ. ಬಿಬಿಎಲ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಮ್ಯಾಕ್ಸ್ವೆಲ್ ದಾಖಲೆಯ ಶತಕ ಬಾರಿಸಿದ್ದಾರೆ.
ಇನ್ನು, ಮೆಲ್ಬೋರ್ನ್ ಪರ ಬ್ಯಾಟಿಂಗ್ ಮಾಡಿದ ಮ್ಯಾಕ್ಸ್ವೆಲ್ ಕೇವಲ 64 ಎಸೆತಗಳಲ್ಲಿ 154 ರನ್ ಸಿಡಿಸಿದರು. ಕೇವಲ 41 ಬಾಲ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದ್ದು ಮಾತ್ರ ವಿಶೇಷ.
ಬಿಗ್ ಬ್ಯಾಷ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲೇ ಇದು ದಾಖಲೆಯ ಶತಕ. ಬರೋಬ್ಬರಿ 22 ಫೋರ್ ಮತ್ತು 4 ಸಿಕ್ಸರ್ಗಳನ್ನು ಸಿಡಿಸಿದರು ಮ್ಯಾಕ್ಸ್ವೆಲ್. ಇದರ ಫಲವಾಗಿ ಮೆಲ್ಬೋರ್ನ್ಸ್ ತಂಡವೂ ಬಿಬಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ 250ಕ್ಕೂ ಹೆಚ್ಚು ರನ್ ಪೇರಿಸಿತ್ತು.