ಬಿಮ್ಸ್​ನಲ್ಲಿ ದಿನಕ್ಕೊಂದು ಬೆಳವಣಿಗೆ -ಅವ್ಯವಸ್ಥೆ ಸರಿಪಡಿಸಲಾಗದೆ ನಿರ್ದೇಶಕರಿಗೆ ದೀರ್ಘ ರಜೆ

ಬಿಮ್ಸ್​ನಲ್ಲಿ ದಿನಕ್ಕೊಂದು ಬೆಳವಣಿಗೆ -ಅವ್ಯವಸ್ಥೆ ಸರಿಪಡಿಸಲಾಗದೆ ನಿರ್ದೇಶಕರಿಗೆ ದೀರ್ಘ ರಜೆ

ಬೆಳಗಾವಿ: ಬಿಮ್ಸ್​​ನಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲಾಗದೆ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರಿಗೆ ದೀರ್ಘ ರಜೆ ನೀಡಿ ಸರ್ಕಾರ ಆದೇಶ ನೀಡಿದೆ.

ವೈಯಕ್ತಿಕ ಕಾರಣ ನೀಡಿ ಒಂದು ತಿಂಗಳ ಕಾಲ ರಜೆ ಚೀಟಿ ಬರೆದಿಟ್ಟು ಭೀಮ್ಸ್ ನಿರ್ದೇಶಕರು ರಜೆಯ ಮೇಲೆ ತೆರಳಿದ್ದರು. ಪರಿಣಾಮ ಅಂಗ ರಚನಾ ವಿಭಾಗ ಮುಖ್ಯಸ್ಥ ಡಾ. ಉಮೇಶ್ ಕುಲಕರ್ಣಿ ಅವರಿಗೆ ಪ್ರಭಾರ ಅಧಿಕಾರ ನೀಡಿದ್ದರು.

ಕಳೆದ ಹಲವು ತಿಂಗಳುಗಳಿಂದ ಬಿಮ್ಸ್​ ಅವ್ಯವಸ್ಥೆ ಬಗ್ಗೆ ನ್ಯೂಸ್​​ಫಸ್ಟ್​​ ವರದಿ ಮಾಡಿದೆ. ಮಾಧ್ಯಮ ವರದಿಯ ಬೆನಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವ ಲಕ್ಷ್ಮಣ ಸವದಿ ಅವರಿಗೆ ಶಾಕ್​​ ಆಗುವಂತೆ ಅಲ್ಲಿನ ವ್ಯವಸ್ಥೆ ಕಂಡು ಬಂದಿತ್ತು. ಕೂಡಲೇ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸಚಿವರು ವ್ಯವಸ್ಥೆ ಸರಿಪಡಿಸದಿದ್ದರೇ ಕಠಿಣ ನಿಲುವು ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರು.

ಉಪಮುಖ್ಯಮಂತ್ರಿ‌ ಗೋವಿಂದ ಕಾರಜೋಳ ಕೂಡ ಬಿಮ್ಸ್​ ಅವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದರು. ಇದೆಲ್ಲದರ ನಡುವೆ ನಿರ್ದೇಶಕರಿಗೆ ರಜೆ ಮೇಲೆ ತೆರಳಲು ಸರ್ಕಾರ ಸೂಚನೆ.

ಆಡಳಿತ ಮಂಡಳಿ ವಿರುದ್ಧವೇ ತಿರುಗಿ ಬಿದ್ದ ಸ್ಟಾಫ್​​ನರ್ಸ್​​​ಗಳು
ಬಿಮ್ಸ್‌ಗೆ ಡಿಸಿಎಂ ಲಕ್ಷ್ಮಣ್ ಸವದಿ ಭೇಟಿ ವೇಳೆ ಕೋವಿಡ್ ವಾರ್ಡ್‌ನಲ್ಲಿ ಮೃತದೇಹ ಇದ್ದ ವಿಚಾರವಾಗಿ ಭೀಮ್ಸ್ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಬಿಮ್ಸ್ ಸ್ಟಾಫ್ ​​ನರ್ಸ್​​ಗಳು ಗಂಭೀರ ಆರೋಪ ಮಾಡಿದ್ದರು. 7 ಜನ ಶುಶ್ರೂಷಾಧಿಕಾರಿಗಳನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಸರ್ಜನ್ ಆದೇಶ ಹೊರಡಿಸಿದ್ದರು.

ಆದರೆ ಈ ಬಗ್ಗೆ ಮಾಧ್ಯಮಗಳ ಎದುರು ಬಿಮ್ಸ್ ಆಸ್ಪತ್ರೆಯ ಸ್ಟಾಫ್​​ನರ್ಸ್​​ಗಳು ಹೇಳಿದ್ದೆ ಬೇರೆ, ಡಿಸಿಎಂ ಸವದಿ ಭೇಟಿ ವೇಳೆ ಐವರು ರೋಗಿಗಳು ಮೃತ‌ಪಟ್ಟಿದ್ದರು. ಸಂಬಂಧ ಪಟ್ಟ ವೈದ್ಯರು ಇಲ್ಲದೇ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಲ್ಲ. ಡಾಕ್ಡರ್ ಬಂದು ರೋಗಿ ಮೃತಪಟ್ಟಿದ್ದಾನೆ ಎಂದು ದೃಢಪಡಿಸುವವರೆಗೂ ನಮಗೆ ಶವ ಪ್ಯಾಕ್ ಮಾಡಲು ಅವಕಾಶ ಇಲ್ಲ. ರೋಗಿ ಮೃತಪಟ್ಟು ನಾಲ್ಕು ಐದು ಗಂಟೆ ಕಳೆದರೂ ಅದನ್ನು ದೃಢಪಡಿಸಲು ಡಾಕ್ಟರ್​​ಗಳು ಬರೋದಿಲ್ಲ. ಮೃತದೇಹ ಪ್ಯಾಕ್ ಮಾಡಲು ಸಮಯಕ್ಕೆ ಉತ್ತಮ ಕಿಟ್​​ಗಳು ಸಿಗೋದಿಲ್ಲ. ಶವಾಗಾರಕ್ಕೆ ಮೃತದೇಹಗಳನ್ನು ಸ್ಥಳಾಂತರಿಸಲು ಇರೋದು ಒಂದೇ ಆ್ಯಂಬುಲೆನ್ಸ್. ಇಷ್ಟೆಲ್ಲ ಸಮಸ್ಯೆಗಳ ಇಟ್ಟುಕೊಂಡು ಮಮ್ಮನ್ನ ಹೊಣೆಗಾರರನ್ನಾಗಿ ಮಾಡುವದು ನ್ಯಾಯವೇ ಅನ್ನೋದು ಸ್ಟಾಫ್ ನರ್ಸ್ ಗಳ ಪ್ರಶ್ನೆಯಾಗಿದೆ.

‘ಜೀವವನ್ನು ಪಣಕ್ಕಿಟ್ಟು ಕೋವಿಡ್ ಡ್ಯೂಟಿ ಮಾಡಿ ನಾವು ರೋಗಿಗಳ ಸೇವೆ ಮಾಡ್ತಿದೀವಿ’ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸದೇ ನಮಗೆ ಮೆಮೋ, ರಿಲೀವ್ ಆರ್ಡರ್ ಕೊಟ್ಟಿದ್ದಾರೆ. ಮೇಲಾಧಿಕಾರಿಗಳ ತಪ್ಪಿಗೆ ನಮಗೆ ಶಿಕ್ಷೆ ಕೊಡುತ್ತಿದ್ದಾರೆ. ಸೂಕ್ತ ನ್ಯಾಯ ದೊರಕಿಸಿ ಕೊಡುವಂತೆ ಮಾಧ್ಯಮಗಳೆದುರು ಬಿಮ್ಸ್​ ಸಿಬ್ಬಂದಿ ಕಣ್ಣೀರು ಹಾಕಿದ್ದರು.

The post ಬಿಮ್ಸ್​ನಲ್ಲಿ ದಿನಕ್ಕೊಂದು ಬೆಳವಣಿಗೆ -ಅವ್ಯವಸ್ಥೆ ಸರಿಪಡಿಸಲಾಗದೆ ನಿರ್ದೇಶಕರಿಗೆ ದೀರ್ಘ ರಜೆ appeared first on News First Kannada.

Source: newsfirstlive.com

Source link