ಬೆಂಗಳೂರು: ಬೆಡ್​​ಗಳೀಲ್ಲ, ಆಕ್ಸಿನ್​ ಇಲ್ಲ ಬರೀ ದುಡ್ಡಿಗೋಸ್ಕರ ಈ ಬಿಬಿಎಂಪಿಯವ್ರು ಇಂಥ ಕೆಲಸ ಮಾಡ್ತಾರೆ ಅನ್ನೋ ಮಾತು ಪ್ರತಿ ದಿನ ಎಲ್ಲರ ಬಾಯಲ್ಲಿ ಬರೋ ಮಾತು. ಬೆಂಗಳೂರು, ಕೊರೊನಾಗೆ ಹಾಟ್​ಸ್ಪಾಟ್​ ಆಗ್ಬಿಟ್ಟಿದೆ. ಈ ನಡುವೆ, 49 ವರ್ಷದ ಅಮ್ಮನನ್ನ ಕಳೆದುಕೊಂಡ ಪುತ್ರ ಕಣ್ಣೀರು ಹಾಕಿರೋ ಘಟನೆ ನಗರದಲ್ಲಿ ನಡೆದಿದೆ. ರೋಗಿಯ ಸ್ಥಿತಿ ಗಂಭೀರವಿದೆ, ದಯವಿಟ್ಟು ಅವ್ರನ್ನ ಆಸ್ಪತ್ರೆಗೆ ಸೇರಿಸಿಕೊಳ್ಳಿ ಅಂದ್ರೆ, ಬಿಯು ನಂಬರ್​ ಕೊಡಿ ಅಂತಾರೆ, ಇವ್ರಿಂದ ನಮ್ಮ ಅಮ್ಮನಿಗೆ ಸರಿಯಾದ ಚಿಕಿತ್ಸೆ ಸಿಗ್ಲಿಲ್ಲ, ಇವ್ರಿಂದ ನನ್ನ ಅಮ್ಮ ಸತ್ತುಹೋದ್ರು ಅಂತ ಮಗ ಅಳಲು ತೋಡಿಕೊಂಡಿದ್ದಾರೆ. ಇದ್ರಿಂದ, ಬಿಬಿಎಂಪಿ ವಾರ್ ರೂಮ್ ಸಿಬ್ಬಂದಿಯಿಂದಲೇ ಸೋಂಕಿತರಿಗೆ ಕಂಟಕವಾಗ್ತಿದ್ಯಾ ಅನ್ನೋ ಪ್ರಶ್ನೆ ಮೂಡ್ತಿದೆ.?

ಎರಡ್ಮೂರ್​ ದಿನ ಆದ್ರೂ ಬಿಯು ನಂಬರ್​ ಕೊಡಲ್ಲ 
ಕೊರೊನಾ ಸೋಂಕು ದೃಢಪಟ್ಟು ಎರಡ್ಮೂರು ದಿನವಾದ್ರೂ ಬಿಯು ನಂಬರ್​ ಕೊಡೋದಿಕ್ಕೆ ಸತಾಯಿಸ್ತಾಯಿರೆ ಬಿಬಿಎಂಪಿ ಸಿಬ್ಬಂದಿ. ಪೇಷಂಟ್​ನ ಆಸ್ಪತ್ರೆಗೆ ಸೇರಿಸಬೇಕು ಅಂದ್ರೆ ಬಿಯು ನಂಬರ್​ ಬೇಕೇ ಬೇಕು. ಬಿಯು ನಂಬರ್ ಇಲ್ದೇ ಅಡ್ಮಿಟ್​ ಮಾಡ್ಕೊಳಲ್ಲ ಅಂತಾರೆ ಆಸ್ಪತ್ರೆ ಸಿಬ್ಬಂದಿ. ಆದ್ರೆ ಬಿಯು ನಂಬರ್ ಕೊಡೋಕೆ ವಾರ್ ರೂಮ್ ಸಿಬ್ಬಂದಿಯಿಂದ ನಿರ್ಲಕ್ಷ್ಯೆ ಮಾಡ್ತಾರೆ.ಆದ್ರೆ, ಅಷ್ಟೊತ್ತಿಗಾಗಲೇ ಪೇಷಂಟ್​ಗಳ ಸ್ಥಿತಿ ಗಂಭೀರವಾಗುತ್ತೆ. ಹಂಗೂ ಹಿಂಗೂ ಎರಡ್ಮೂರು ದಿನದ ನಂತರ ಬಿಯು ನಂಬರ್ ಕೊಡ್ತಾರೆ, ಆದ್ರೆ ಯಾವ ಆಸ್ಪತ್ರೆಗೆ ಸೇರಿಸಿ ಅಂತಾರೆ ಅನ್ನೋ ಮಾಹಿತಿ ನೀಡಲ್ಲ. ನನ್ನ ತಾಯಿ ಡಯಾಬಿಟಿಕ್​ ಪೇಷೆಂಟ್​, ತುರ್ತು ಚಿಕಿತ್ಸೆ ಅಗತ್ಯ ಇತ್ತು.. ಆದ್ರೆ ಬಿಯು ನಂಬರ್ ತಗೊಳೋದು ಲೇಟಾಯ್ತು ಅಷ್ಟರಲ್ಲಿ ಅಮ್ಮನ ಪರಿಸ್ಥಿತಿ ಮತ್ತಷ್ಟು ಸೀರಿಯಸ್ ಆಯ್ತು. ಮುಂಚೆಯೇ ಬಿಯು ನಂಬರ್ ಸಿಕ್ಕಿದ್ರೆ ಅಮ್ಮನಿಗೆ ತಕ್ಷಣದ ಚಿಕಿತ್ಸೆ ಸಿಗ್ತಿತ್ತು ಆದ್ರೆ ಬಿಯು ನಂಬರ್ ಪಡೆಯೋಕೆ 2-3ದಿನ ಬೇಕಾಯ್ತು. ಬಿಬಿಎಂಪಿಯವ್ರಿಂದ ನಾನು ನಮ್ಮ ಅಮ್ಮನನ್ನ ಕಳೆದುಕೊಂಡೆ. ಅವ್ರು ಸರಿಯಾಗಿ ರೆಸ್ಪಾಂಡ್​ ಮಾಡಿದಿದ್ರೆ ಅಮ್ಮನಿಗೆ ಚಿಕಿತ್ಸೆ ಸಿಗ್ತಿತ್ತು ಅಂತ ಮೃತ ಮಹಿಳೆಯ ಪುತ್ರ ಕಣ್ಣೀರು ಹಾಕಿದ್ದಾರೆ.

The post ಬಿಯು ನಂಬರ್​ ಕೊಡೋದಕ್ಕೆ 2-3 ದಿನ ಮಾಡ್ತಾರೆ; ತಾಯಿ ಕಳೆದುಕೊಂಡ ಮಗನ ಅಳಲು appeared first on News First Kannada.

Source: newsfirstlive.com

Source link