ಬಿರುಕು ಬಿಟ್ಟ ಪಿಕಪ್ ಡ್ಯಾಮ್; ಜನರಲ್ಲಿ ಹೆಚ್ಚಿದ ಆತಂಕ

ದಾವಣಗೆರೆ:ಅಕಾಲಿಕ ಮಳೆಗೆ ಕರ್ನಾಟಕ ಸೇರಿದಂತೆ ಅಕ್ಕಪಕ್ಕ ರಾಜ್ಯಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ನೀರನ್ನೇ ಕಾಣದ ಕೆರಗಳೂ ಕೂಡ ತುಂಬಿ ಹರಿಯುತ್ತಿವೆ. ರೈತರ ಬೆಳೆಗಳು ಕೈಗೆ ಬರುವಷ್ಟರಲ್ಲಿ ಮಣ್ಣುಪಾಲಾಗ್ತಿದೆ ಇಂಥಾ ಸಂದರ್ಭದಲ್ಲಿ ಬೆಣ್ಣೆ ನಗರಿ ಮಂದಿಗೆ ಮತ್ತೊಂದು ಆತಂಕ ಎದುರಾಗಿದೆ.

ಇದೇ ಇದೇ ಬಿರುಕು ಆತಂಕ ಮೂಡಿಸಿದೆ.. ಇದೇ ಬಿರುಕು ಮುಂದ್ಯಾವುದೋ ಅನಾಹುತ ಸಂಭವಿಸೋ ಎಚ್ಚರಿಕೆ ನೀಡ್ತಿದೆ.. 43 ವರ್ಷಗಳ ಇತಿಹಾಸವಿರುವ ದಾವಣಗೆರೆ ದೇವರ ಬೆಳಕೆರೆ ಪಿಕಪ್ ಡ್ಯಾಮ್ ಇದು.. ಇಲ್ಲಿ ಬಿಟ್ಟಿರೋ ಬಿರುಕು ಡ್ಯಾಮ್‌ನ ಕೆಳಭಾಗದ ಜನ್ರಲ್ಲಿ ಭಯದ ಕಾರ್ಮೋಡ ಕವಿಯುವಂತೆ ಮಾಡಿದೆ.

ಡ್ಯಾಂ ನೀರು ಭರ್ತಿಯಾಗಿ 14 ಗೇಟ್​ಗಳು ಕಸದಿಂದ ಬ್ಲಾಕ್​ ಆಗಿದ್ದು, ಡ್ಯಾಮ್​ನ ಎಡಗಡೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಡ್ಯಾಂ ಏನಾದ್ರೂ ಒಡೆದು ಹೋದ್ರೆ ಸುತ್ತಲಿರುವ 10 ಹಳ್ಳಿಗಳು ಸೇರಿ ಸಾವಿರಾರು ಎಕರೆ ಭೂಮಿಗೆ ಹಾನಿಯಾಗಲಿದೆ. ಇನ್ನೂ ಈ ಡ್ಯಾಂ 2,286.08 ಚದರ ಮೀಟರ್ ವಿಸ್ತೀರ್ಣವಿದ್ದು 10,570 ಎಕರೆ ಕೃಷಿ ಭೂಮಿಗೆ ಈ ಡ್ಯಾಂ ನಿಂದ ನೀರು ಹರಿಯುತ್ತಿದೆ. ಬಲ್ಲೂರು, ದೇವರಬೆಳಕೆರೆ, ಕಡ್ಲೇಗೊಂದಿ, ಬೆಳ್ಳೂಡಿ ಸೇರಿದಂತೆ ಕೆಳ ಹಂತದಲ್ಲಿರುವ ಹಲವು ಗ್ರಾಮದ ಜನರಿಗೆ ಸದ್ಯ ಬಿರುಕು ಆತಂಕ ತಂದಿಟ್ಟಿದೆ.

ಬಿರುಕಿನ ಬಗ್ಗೆ ಇವತ್ತು ವರದಿ ಮಾಡಿದ ನ್ಯೂಸ್​ ಫಸ್ಟ್​, ಹರಿಹರ ಶಾಸಕ ರಾಮಪ್ಪರನ್ನ ಸಂಪರ್ಕಿಸಿ ಪರಿಹಾರದ ಪ್ರಶ್ನೆ ಮಾಡ್ತು. ಈ ವೇಳೆ ಶಾಸಕರು, ಕಸ ಕ್ಲೀನ್​ ಮಾಡಿಸಿದ್ದೀವಿ. ಬಿರುಕಿನ ಬಗ್ಗೆ ಇಂಜಿಯರ್​ ಮತ್ತು ಸಿಇಓ ತಲೆಕೆಡಿಸಿಕೊಳ್ತಿಲ್ಲ ಅನ್ನೋ ಆರೋಪ ಮಾಡಿದ್ರು.
ದೊಡ್ಡ ಮಟ್ಟದ ಹಾನಿಯಾಗುತ್ತೆ ಅಂತ ಗೊತ್ತಾದ್ರೂ ಅಧಿಕಾರಿಗಳು ಸುಮ್ಮನೆ ಕೂತಿರೋದ್ಯಾಕೆ..? ಬಿರುಕು ಸರಿಪಡಿಸೋಕೆ ನೀರಾವರಿ ಇಲಾಖೆ ಮುಂದೆಬರದೇ ಇರೋದ್ಯಾಕೆ? ಮುಂದೆ ದೊಡ್ಡ ಅಪಾಯವಾದ್ರೆ ಅದರ ಹೊಣೆ ಯಾರದ್ದು ಅನ್ನೋ ಸ್ಥಳೀಯರ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಬೇಕಿದೆ.

ಮಹದೇವ್​, ನ್ಯೂಸ್​ ಫಸ್ಟ್​, ದಾವಣಗೆರೆ

News First Live Kannada

Leave a comment

Your email address will not be published. Required fields are marked *