ಬಿರುಗಾಳಿ-ಮಳೆಗೆ ಮನೆ ಛಾವಣಿ ಹಾರಿಹೋಗಿ ಜೋಳಿಗೆಯಲ್ಲಿದ್ದ ಕಂದಮ್ಮ ಸಾವು

ಬಿರುಗಾಳಿ-ಮಳೆಗೆ ಮನೆ ಛಾವಣಿ ಹಾರಿಹೋಗಿ ಜೋಳಿಗೆಯಲ್ಲಿದ್ದ ಕಂದಮ್ಮ ಸಾವು

ವಿಜಯಪುರ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯೊಂದರ ಛಾವಣಿ ಹಾರಿ ಹೋಗಿ, ಜೋಳಿಗೆಯಲ್ಲಿದ್ದ ಮಗು ಸಾವನ್ನಪ್ಪಿದ್ದ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ನಿವಾಸಿ ಅಬ್ದುಲ್ ರೆಹೆಮಾನ್ ಎಂಬುವವರ 8 ತಿಂಗಳ ಕಂದಮ್ಮ ಸಾವನ್ನಪ್ಪಿದೆ. ಮಗುವನ್ನ ಮನೆಯಲ್ಲಿ ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿದ್ದ ಮಲಗಿಸಲಾಗಿತ್ತು. ನಿನ್ನೆ ಸಾಯಂಕಾಲ ಸುರಿದ ಮಳೆ ಹಾಗೂ ಬಿರಗಾಳಿಗೆ ಛಾವಣಿ ಹಾರಿಹೋಗಿದ್ದು, ಅದರೊಂದಿಗೆ ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿದ್ದ ಮಗು ಕೂಡ ಹಾರಿಹೋಗಿದೆ. ವಿದ್ಯುತ್ ಕಂಬಕ್ಕೆ ಸಿಲುಕಿ ಮಗು ಮೃತಪಟ್ಟಿದೆ ಅಂತ ತಿಳಿದುಬಂದಿದೆ.

ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

The post ಬಿರುಗಾಳಿ-ಮಳೆಗೆ ಮನೆ ಛಾವಣಿ ಹಾರಿಹೋಗಿ ಜೋಳಿಗೆಯಲ್ಲಿದ್ದ ಕಂದಮ್ಮ ಸಾವು appeared first on News First Kannada.

Source: newsfirstlive.com

Source link