ಫ್ರಾನ್ಸ್​: ತಲೆಕೆಳಗ್​ ಹಾಕಿ ಕಾಲ್​ ಮೇಲೆ ಹಾಕೋದು ಒಂದ್ ಕಲೆ ಅಂತ ಈಗಲೂ ಜನ ಅದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾರೆ. ಯಾಕೆ? ಜನ ಸಿಕ್ಕಾಪಟ್ಟೆ ಇಷ್ಟಪಡ್ತಾರೆ, ನಾವೂ ಈ ರೀತಿ ಮಾಡ್ಬೇಕು ಅಂತ. ಆದ್ರೆ ಈಗ ನಾವ್​ ಒಬ್ರ ಬಗ್ಗೆ ಹೇಳ್ತೀವಿ.. ಹಾಗಂತ ನೀವು, ಅಂಥದನ್ನೆಲ್ಲ ನಿಮ್ಮ​ ಮನೆಯಲ್ಲಿ ಮಾಡೋದಕ್ಕೆ ಹೋಗ್ಬಾರ್ದು. 

ಫ್ರೆಂಚ್​ ಕಲಾವಿದರಾದ ಬೆನ್​ ಕಾಂಟೆ​ ರೂಫ್​ ಟಾಪ್​ ಸ್ಟಂಟ್ಸ್​ ಮಾಡೋದ್ರಲ್ಲಿ ಎತ್ತಿದ ಕೈ. ಇವ್ರ ಸ್ಟಂಟ್​ಗಳು ಎಂಥವರೂ ಗಾಬರಿ ಬೀಳೋ ಹಾಗಿರ್ತವೆ.. ಇವ್ರು ಬಿಲ್ಡಿಂಗ್​ನಿಂದ ಬಿಲ್ಡಿಂಗ್​ಗೆ ಹಾರ್ತಾರೆ. ಹಾರೋದಿರಲಿ ಜಂಪ್ ಮಾಡ್ತಾರೆ. ಈ ಜಂಪ್ ಮಾಡೋ ಟೈಮ್​ನಲ್ಲಿ ಎಲ್ಲಿ ಬಿದ್​ಹೋಗಿ, ಏನ್​ ಆಗ್ಬಿಡುತ್ತೋ ಅಂದುಕೊಳ್ಳುವಷ್ಟು ಭಯ ಪಡಿಸ್ತಾರೆ. ಈ ರೀತಿ ದೊಡ್ಡ ದೊಡ್ಡ ಗ್ಯಾಪ್​ಗಳ ಮಧ್ಯೆ ಜಂಪ್ ಮಾಡುತ್ತಾ ಸ್ಟಂಟ್​ ಮಾಡೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಅದ್ರಲ್ಲೂ, ಹೈಟ್​ ಅನ್ನೋ ಭಯವಿರೋರು ಈ ವಿಡಿಯೋ ನೋಡಿದ್ರೆ ಗಾಬರಿಯಾಗೋದು ಗ್ಯಾರಂಟಿ.. ಇವರ ವಿಡಿಯೋಗಳು ಎಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿವೆ ಅಂದ್ರೆ ಒಂದು ರೀತಿಯಲ್ಲಿ ಬೆನ್ ಕಾಂಟೆ ಸೋಷಿಯಲ್ ಮೀಡಿಯಾದ ಸ್ಟಾರ್ ಆಗಿಬಿಟ್ಟಿದ್ದಾರೆ.

 

The post ಬಿಲ್ಡಿಂಗ್​ನಿಂದ ಬಿಲ್ಡಿಂಗ್​ಗೆ ಜಂಪ್ ಮಾಡೋ ಈತನ ಸಾಹಸ ಭಯಂಕರ appeared first on News First Kannada.

Source: newsfirstlive.com

Source link