ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ, ಕೋಟ್ಯಾಧಿಪತಿ ಉದ್ಯಮಿ ಬಿಲ್​ ಗೇಟ್ಸ್​ ಹಾಗೂ ಮೆಲಿಂಡಾ ದಂಪತಿ ಕಳೆದ ಸೋಮವಾರ ತಾವು ವಿಚ್ಛೇದನ ಪಡೆಯುತ್ತಿರೋದಾಗಿ ಘೋಷಿಸಿ  ಜಗತ್ತಿಗೆ ಶಾಕ್ ನೀಡಿದ್ದರು. ತಮ್ಮ 27 ವರ್ಷದ ಸುದೀರ್ಘ ವೈವಾಹಿಕ ಜೀವನವನ್ನ ಈ ಜೋಡಿ ಅಂತ್ಯಗೊಳಿಸಿದ್ದೇಕೆ ಎಂಬ ಕುತೂಹಲ ಎಲ್ಲರನ್ನ ಕಾಡಿತ್ತು. ಅದಕ್ಕೀಗ ಉತ್ತರವಾಗಿ ಮಹಿಳೆಯೊಬ್ಬರ ಹೆಸರು ಕೇಳಿಬಂದಿದ್ದು, ಈ ವಿಚಾರ ಕೂಡ ಜನರಲ್ಲಿ ಅಚ್ಚರಿ ಮೂಡಿಸಿದೆ.

ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್

ನಮ್ಮ ಸಂಬಂಧದ ಬಗ್ಗೆ ಹೆಚ್ಚಿನ ಚಿಂತನೆ ಮಾಡಿ ಮತ್ತು ಸಾಕಷ್ಟು ಶ್ರಮ ಹಾಕಿದ ನಂತರ ನಾವು ನಮ್ಮ ದಾಂಪತ್ಯ ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ನಾವು  ನಮ್ಮ ಫೌಂಡೇಷನ್​​(The Bill & Melinda Gates Foundation)ನಲ್ಲಿ ಒಟ್ಟಿಗೆ ಕೆಲಸ ಮಾಡೋದನ್ನ ಮುಂದುವರಿಸುತ್ತೇವೆ. ಆದರೆ ನಮ್ಮ ಜೀವನದ ಮುಂದಿನ ಹಂತದಲ್ಲಿ ನಾವು ದಂಪತಿಯಾಗಿ ಒಟ್ಟಿಗೆ ಬೆಳೆಯಲು ಸಾಧ್ಯವಿದೆ ಎಂಬ ನಂಬಿಕೆ ಇಲ್ಲ ಅಂತ ಗೇಟ್ಸ್​​​ ಹಾಗೂ ಮೆಲಿಂಡಾ ಟ್ವೀಟ್ ಮಾಡಿ ತಮ್ಮ ವಿಚ್ಛೇದನದ ಬಗ್ಗೆ ಅನೌನ್ಸ್ ಮಾಡಿದ್ದರು.

ಈ ಡಿವೋರ್ಸ್​ಗೆ ಕಾರಣ ಯಾರು? ಈ ಡಿವೋರ್ಸ್ ಹಿಂದೆ ಚೀನಾ ಆಟವಿದೆಯಾ? ಅನ್ನೋ ಗಂಭೀರ ಪ್ರಶ್ನೆ ಈಗ ಮೂಡಿದೆ. ಯಾಕಂದ್ರೆ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ದಾಂಪತ್ಯದಲ್ಲಿ ಹುಳಿ ಹಿಂಡಿದ್ದು ಬೇರೆ ಯಾರೂ ಅಲ್ಲ ಆಕೆ ಬಿಲ್​ಗೇಟ್ಸ್ ಚೀನಿ ಅನುವಾದಕಿ, ಪೈಲಟ್, ಏರ್​​ಹೋಸ್ಟ್ರೆಸ್ ಕೂಡ ಆಗಿರೋ ಝೇ ಶೆಲ್ಲಿ ವ್ಯಾಂಗ್ (Zhe Shelly Wang) ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ.

ಝೇ ಶೆಲ್ಲಿ ವ್ಯಾಂಗ್

ಈಗಾಗಲೇ ಜಗತ್ತು ಸಾಕ್ಷಿಯಾಗಿರುವಂತೆ ಹನಿ ಟ್ರಾಪಿಂಗ್, ಮಹಿಳಾ ಸ್ಪೈಗಳ ಬಳಸಿ ಕೆಲಸ ಮಾಡಿಸೋವ ಕ್ರಿಯೆ, ವಿಶ್ವದ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಕೆಲಸ ಮಾಡುವ ಚೀನಿಯರನ್ನು ತಮ್ಮ ಸ್ಪೈಗಳನ್ನಾಗಿ ಬಳಸೋ ಪ್ರಕ್ರಿಯೆಯಲ್ಲಿ ಚೀನಾ ಮುಂಚೂಣಿಯಲ್ಲಿದೆ. ಅದೂ ಎಷ್ಟರ ಮಟ್ಟಿಗೆ ಅಂದ್ರೆ ಅಮೆರಿಕಾದ ಅತ್ಯಂತ ಪ್ರಮುಖ ಸರ್ಕಾರಿ ಮತ್ತು ಖಾಸಗೀ ಸಂಸ್ಥೆಗಳಲ್ಲಿಯ ಬಹುತೇಕ ಮಾಹಿತಿಯನ್ನು ಬಡೆದುಕೊಳ್ಳುವಷ್ಟರ ಮಟ್ಟಿಗೆ ಚೀನಾ ಚಾಣಾಕ್ಷವಾಗಿದೆ. ಹೀಗಾಗಿ ಝೇ ಶೆಲ್ಲಿ ವ್ಯಾಂಗ್ ಮೂಲಕ ಚೀನಾವೇ ಬಿಲ್​ಗೇಟ್ಸ್​ ತಲೆ ಕೆಡಿಸಿತಾ? ಅನ್ನೋ ಗಂಭೀರ ಪ್ರಶ್ನೆ ಇಂದು ವಿಶ್ವಾದ್ಯಂತ ಕೇಳಿ ಬರುತ್ತಿದೆ.

ಈ ನಡುವೆ ಚೀನಾದ ಸೋಶಿಯಲ್ ಮೀಡಿಯಾ ಆ್ಯಪ್​ ವಿಬೋದಲ್ಲಿ ಮೆಸೇಜ್ ಹಂಚಿಕೊಂಡಿರುವ ಝೇ ಶೆಲ್ಲಿ ವ್ಯಾಂಗ್, ನನಗೂ ಈ ಡಿವೋರ್ಸ್​ಗೂ ಸಂಬಂಧವಿಲ್ಲ. ಇದು ಪೇಜ್​ ಥ್ರೀಯಲ್ಲು ಕಂಡು ಬರುವ ಗಾಳಿ ಮಾತು ಅಷ್ಟೇ.. ಯಾರೋ ಕಿಡಿಗೇಡಿಗಳು ನನ್ನ ಹೆಸರನ್ನು ಇದರಲ್ಲಿ ಎಳೆದು ತಂದಿದ್ದಾರೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

 

The post ಬಿಲ್​ ಗೇಟ್ಸ್ ಡಿವೋರ್ಸ್ ಹಿಂದೆ ಚೀನಾ ಚಮಕ್; ಚೀನಾ ಸುಂದರಿ ಮಾಡಿದ್ಲಾ ಮೋಡಿ? appeared first on News First Kannada.

Source: newsfirstlive.com

Source link