ಕೊಪ್ಪಳ: ಕೋವಿಡ್​ನಿಂದ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನ ಕೊಡೋದಕ್ಕೆ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸತಾಯಿಸಿರೋ ಅಮಾನವೀಯ ಘಟನೆ ನಡೆದಿದೆ.

ಜಿಲ್ಲೆಯ ವಾತ್ಸಲ್ಯ ಆಸ್ಪತ್ರೆಯಿಂದ ಇಂಥದ್ದೊಂದು ಅಮಾನವೀಯ ಪ್ರದರ್ಶನ ನಡೆದಿದೆ. ಬಾಕಿ ಹಣ ಕಟ್ಟಿ, ತದನಂತರ ದೇಹ ತೆಗೆದುಕೊಂಡು ಹೋಗಿ ಅಂತ ಕುಟುಂಬಸ್ಥರಿಗೆ ಆಸ್ಪತ್ರೆಯ ಸಿಬ್ಬಂದಿ ಕಿರಿಕಿರಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಕಳೆದ ಒಂದು ವಾರದ ಹಿಂದೆ ಈ ಆಸ್ಪತ್ರೆಗೆ ಸೋಂಕಿತ ವ್ಯಕ್ತಿ ದಾಖಲಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನ ಕೊಡೋದಕ್ಕೆ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ ಎಂದು ಕಟುಂಬಸ್ಥರು ಆರೋಪಿಸಿದ್ದಾರೆ. ಒಂದು ದಿನಕ್ಕೆ 25 ಸಾವಿರದಂತೆ ಏಳು ದಿನಗಳ ಕಾಲ ಬಿಲ್ ಮಾಡಿದ್ದ ಆಸ್ಪತ್ರೆ, ಒಟ್ಟಾಗಿ ಒಂದು ಲಕ್ಷ ಬಿಲ್ ಮಾಡಿದೆ.

ತದನಂತರ ಮೃತದೇಹ ಬೇಕಂದ್ರೆ ದುಡ್ಡು ಕಟ್ಟಿ ಅಂತ ಸಿಬ್ಬಂದಿ ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸೋಂಕಿತ ಕುಟುಂಬಸ್ಥರು ಆದಷ್ಟು ಹಣ ಕೊಡುತ್ತೇವೆ ಮೃತದೇಹ ಕೊಡಿ ಅಂತಾ ಅಂಗಲಾಚಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಕರುಣೆ ತೋರಿಸಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹಾಗೂ ಸಂಸದ ಕರಡಿ ಸಂಗಣ್ಣನವರಿಗೆ ದೂರು ನೀಡಿದ್ದಾರೆ.

ನಂತರ ಬೆಳಗ್ಗೆ 7 ಗಂಟೆಯಿಂದ ಗೋಳಾಡಿದ್ರೂ ಹಣ ಕಟ್ಟೋವರೆಗೂ ಮೃತದೇಹ ಕೊಡಲೇ ಇಲ್ಲ. ಕೊನೆಗೆ ಸಾಲ ಮಾಡಿ 30 ಸಾವಿರ ಕಟ್ಟಿ ಮೃತದೇಹವನ್ನ ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ.

The post ಬಿಲ್ ಕಟ್ಟದಿದ್ಕೆ ಆಸ್ಪತ್ರೆ ಕಿರಿಕ್.. ಸಾಲ ಮಾಡಿ ಮೃತದೇಹ ಕೊಂಡೊಯ್ದ ಕುಟುಂಬಸ್ಥರು appeared first on News First Kannada.

Source: newsfirstlive.com

Source link