ಮೇ 29ರಂದು ವಿಶೇಷ ಸಾಮಾನ್ಯ ಸಭೆ ನಡೆಸಿದ್ದ ಬಿಸಿಸಿಐ, ಐಪಿಎಲ್ ಮರು ಆಯೋಜನೆಯ ಅಂತಿಮ ತೀರ್ಮಾನ ತೆಗೆದುಕೊಂಡಿತ್ತು. ಇದು ಭಾರತೀಯ ಅಭಿಮಾನಿಗಳಿಗೆ ಖುಷಿಯ ವಿಚಾರವೇ ಆಗಿದ್ರೂ, ಟಿ20 ವಿಶ್ವಕಪ್​​ನ ನಡೆ ಏನು ಅನ್ನೋದು ಅಭಿಮಾನಿಗಳನ್ನ ಕಾಡಿದ್ದು ಸುಳ್ಳಲ್ಲ. ಆದ್ರಲ್ಲೂ ಐಸಿಸಿ ಜೊತೆಗಿನ ಸಭೆ ಎಂದಾಗ, ವಿಶ್ವಕಪ್ ಭವಿಷ್ಯ ಇವತ್ತೇ ತೀರ್ಮಾನವಾಗುತ್ತೆ ಅಂತಾನೇ ಊಹಿಸಲಾಗಿತ್ತು. ಆದ್ರೆ ಐಸಿಸಿ ಮೇಲೆ ಕಾಲಾವಕಾಶದ ಒತ್ತಡವನ್ನೇರಿದ್ದ ಬಿಸಿಸಿಐಗೆ, ಕೊನೆಗೂ ಐಸಿಸಿ ಅಸ್ತು ಎಂದಿದೆ.

ಬಿಸಿಸಿಐ ಬಿಗ್​ಬಾಸ್​​ಗಳ ಒತ್ತಡಕ್ಕೆ ಮಣಿದ ಐಸಿಸಿ
ವಿಶ್ವಕಪ್ ಸ್ಥಳಾಂತರದ ತೀರ್ಮಾನಕ್ಕೆ ಕಾಲಾವಕಾಶ

ಅಕ್ಟೋಬರ್​​ನಲ್ಲಿ ಭಾರತದಲ್ಲಿ ನಡೆಯಬೇಕಿರೋ ಟಿ20 ವಿಶ್ವಕಪ್​ ಆಯೋಜನೆ, ಸ್ಥಳಾಂತರ ವಿಚಾರ ಸಂಬಂಧ ಐಸಿಸಿ ಜೊತೆ ಸಭೆ ನಡೆಸಿದ ಬಿಸಿಸಿಐಗೆ, ಗುಡ್​ನ್ಯೂಸ್​ ಸಿಕ್ಕಿದೆ. ಐಸಿಸಿ ಮಂಡಳಿ ಸಭೆಯಲ್ಲಿ ಭಾಗಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ ಶಾ, ಕೊರೊನಾ ಕಾರಣ ಭಾರತದಿಂದಾಚೆ ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ನಿರ್ಧಾರ ಪ್ರಕಟಿಸಬೇಕಿತ್ತು. ಆದ್ರೆ ಟೂರ್ನಿಯನ್ನ ಭಾರತದಲ್ಲೇ ಆಯೋಜಿಸುವುದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಸಿಸಿಐ, ಟಿ20 ವಿಶ್ವಕಪ್ ಆಯೋಜನೆ ಹಾಗೂ ಸ್ಥಳಾಂತರ ವಿಚಾರವಾಗಿ ಕಾಲಾವಕಾಶ ನೀಡುವಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.

​ಬಿಸಿಸಿಐ ಒತ್ತಡಕ್ಕೆ ಮಣಿದ ಐಸಿಸಿ, ಟಿ20 ವಿಶ್ವಕಪ್ ಟೂರ್ನಿಯ ಸ್ಥಳಾಂತರದ ನಿರ್ಧಾರ ತಿಳಿಸುವ ಸಲುವಾಗಿ, ಜೂನ್ 28ರವರೆಗೆ ಗಡುವು ನೀಡಿದೆ. ಅಷ್ಟೇ ಅಲ್ಲ..! ಸದ್ಯ ಕೊರೊನಾ ವೈರಸ್​​ನಿಂದ ತತ್ತರಿಸಿರುವ ದೇಶದ ಪರಿಸ್ಥಿತಿಯ ಪರಿಶೀಲನೆಗೂ ಸೂಚಿಸಿದೆ. ಹಾಗಾಗಿ ಭಾರತೀಯ ಕ್ರಿಕೆಟ್​ ಮಂಡಳಿಗೆ ಸ್ವಲ್ಪ ರಿಲೀಫ್​ ಸಿಕ್ಕಿದರು. ಜೂನ್​ 28ರವರೆಗೆ ವಿಶ್ವಕಪ್ ಸ್ಥಳಾಂತರದ ತೀರ್ಮಾನ ಹಗ್ಗದ ಮೇಲಿನ ನಡಿಗೆಯೇ ಆಗಿದೆ.

ಭಾರತದಲ್ಲೇ ನಡೆಯುತ್ತಾ..? ಇಲ್ವಾ ಯುಎಇನಲ್ಲಿ ನಡೆಯುತ್ತಾ..?
ಸದ್ಯ ಕೊರೊನಾ 2ನೇ ಅಲೆಯಿಂದ ಭಾರತ ತತ್ತರಿಸಿದೆ. ಮತ್ತೊಂದೆಡೆ ನಿಗದಿಯಂತೆ ಅಕ್ಟೋಬರ್​ನಲ್ಲಿ ಭಾರತದಲ್ಲೇ ಟಿ20 ವಿಶ್ವಕಪ್​ ಆಯೋಜಿಸೋ ಪ್ಲಾನ್, ಬಿಸಿಸಿಐ ಮುಂದಿದೆ. ಆದ್ರೆ, ಅಕ್ಟೋಬರ್​-ನವೆಂಬರ್​​ ನಡುವೆ ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಶುರುವಾಗುವ ಸಾಧ್ಯತೆ ಇದೆ. ಇದರಿಂದಾಗಿ ಟಿ20 ವಿಶ್ವಕಪ್​​ನಲ್ಲಿ ಭಾಗಿಯಾಗುವ 16 ತಂಡಗಳಲ್ಲಿ ಒಂದು ತಂಡಕ್ಕೆ ಸೋಂಕು ತಗುಲಿದರೂ, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಂತೆ ವಿಶ್ವಕಪ್ ಸ್ಥಗಿತಗೊಳಿಸಬೇಕಿರುತ್ತೆ. ಹಾಗಾಗಿ ಯುಎಇಗೆ ಸ್ಥಳಾಂತರಿಸಲು ಪ್ಲಾನ್ ಬಿ ಆಪ್ಷನ್ ಬಿಸಿಸಿಐ ಮುಂದಿದೆ.

ಸಭೆ ವೇಳೆ ಬಿಸಿಸಿಐ, ವಿಶ್ವಕಪ್ ಆಯೋಜನೆಯ ಬಗೆಗಿನ ನಿಲುವು ಸ್ಪಷ್ಟಪಡಿಸಿದೆ. ಇದೇ ವೇಳೆ ಐಸಿಸಿ, ಯುಎಇನಲ್ಲೇ ವಿಶ್ವಕಪ್ ಆಯೋಜಿಸಲು ಸಲಹೆ ನೀಡಿದೆ. ಹಾಗಾಗಿ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿಖರ ಮಾಹಿತಿ ಸಿಗೋದು ಕನ್ಫರ್ಮ್.

ಯುಎಇನಲ್ಲಿ ನಡೆದರೆ ಬಿಸಿಸಿಐ ಮುಂದಿದೆ ಸವಾಲು
ಸದ್ಯಕ್ಕೆ ಐಸಿಸಿ ನೀಡಿರುವ ಕಾಲಾವಕಾಶದಿಂದ ಬಿಸಿಸಿಐಗೆ ರಿಲೀಫ್ ಎನಿಸಿದರೂ, ಸಾಲು ಸಾಲು ಸವಾಲುಗಳೇ ಇವೆ. ಅದ್ರಲ್ಲೂ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಅವಧಿಯಲ್ಲೇ ಬಹುತೇಕ ದ್ವಿಪಕ್ಷಿಯ ಸರಣಿಗಳನ್ನ, ಯುಎಇನಲ್ಲೇ ಆಯೋಜಿಸಲು ಉತ್ಸಾಹ ತೋರುತ್ತಿವೆ. ಹಾಗಾಗಿ ಬಿಸಿಸಿಐ ಬಿಗ್​ಬಾಸ್​ಗಳು, ಕ್ರಿಕೆಟ್ ಸ್ಟೇಡಿಯಂಗಳಿಗಾಗಿ ಶೀಘ್ರವೇ ಯುನೈಟೆಡ್ ಎಮಿರೇಟ್ಸ್​ಗೆ ಪ್ರಸ್ತಾಪ ಸಲ್ಲಿಸಬೇಕಿರುತ್ತೆ. ಐಪಿಎಲ್ ಸಹ ಯುಎಇನಲ್ಲೇ ನಡೆಸಲು ತೀರ್ಮಾನಿಸಿರುವ ಕಾರಣ, ವಿಶ್ವಕಪ್​​ಗೆ ಯಾವುದೇ ಅಡ್ಡಿಯಾಗದಂತೆ ಶೆಡ್ಯೂಲ್ ಫಿಕ್ಸ್ ಮಾಡಬೇಕಿರುತ್ತೆ. ಆದ್ರೆ, ಎಮಿರೆಟ್ಸ್​ ಕ್ರಿಕೆಟ್ ಬೋರ್ಡ್​ ಹಾಗೂ ಬಿಸಿಸಿಐ ನಡುವಿನ ವಿಶೇಷ ಸಂಬಂಧ ಬಿಗ್​ಬಾಸ್​​ಗಳ ಕೆಲಸ ಸುಲಭವಾಗಿಸಲಿದೆ.

ಸದ್ಯ ಟಿ-20 ವಿಶ್ವಕಪ್ ಭಾರತದಲ್ಲೇ ನಡೆಯುತ್ತಾ ಅನ್ನೋದಕ್ಕೆ ಉತ್ತರ ಇಲ್ಲ. ಆದ್ರೆ ಐಸಿಸಿ ನೀಡಿರುವ ಕಾಲಾವಕಾಶ ಅಂತ್ಯದಲ್ಲಿ ಬಿಸಿಸಿಐ, ಅಂತಿಮ ತೀರ್ಮಾನ ಏನಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

The post ಬಿಸಿಸಿಐಗೆ ಗುಡ್​ನ್ಯೂಸ್​.. ಕೊನೆಗೂ ಬಿಗ್​ಬಾಸ್​ಗಳ ಒತ್ತಡಕ್ಕೆ ಮಣಿದ ಐಸಿಸಿ appeared first on News First Kannada.

Source: newsfirstlive.com

Source link