‘ಬಿಸಿಸಿಐ ಒತ್ತಡಕ್ಕೆ ಸಿಲುಕಿ ಸಂಜುಗೆ ತಂಡದ ನಾಯಕತ್ವ ವಹಿಸಿದೆ’; ಪಾಕ್ ಕ್ರಿಕೆಟಿಗನ ಗಂಭೀರ ಆರೋಪ | BCCI Came Under So Much Pressure That Sanju Samson Was Handed Captaincy Of India A Danish Kaneria


Sanju Samson: ಸಂಜುಗೆ ಅಪಾರ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರ ಬ್ಯಾಟಿಂಗ್ ಶೈಲಿಯು ಭಾರತದ ಎಕ್ಸ್-ಫ್ಯಾಕ್ಟರ್ ಆಗಿರಬಹುದಾಗಿತ್ತು. ಬೌನ್ಸಿ ವಿಕೆಟ್‌ಗಳಲ್ಲಿ ಸಂಜುಗಿಂತ ಉತ್ತಮವಾಗಿ ಯಾರೂ ಆಡುವುದಿಲ್ಲ ಎಂದಿದ್ದಾರೆ.

‘ಬಿಸಿಸಿಐ ಒತ್ತಡಕ್ಕೆ ಸಿಲುಕಿ ಸಂಜುಗೆ ತಂಡದ ನಾಯಕತ್ವ ವಹಿಸಿದೆ’; ಪಾಕ್ ಕ್ರಿಕೆಟಿಗನ ಗಂಭೀರ ಆರೋಪ

Danish Kaneria, Sanju Samson

ನ್ಯೂಜಿಲೆಂಡ್ ‘ಎ’ ತಂಡ ಇದೇ ತಿಂಗಳ 22 ರಿಂದ ಭಾರತ ‘ಎ’ ತಂಡದ ವಿರುದ್ಧ ಏಕದಿನ ಸರಣಿ ಆಡಲಿದೆ. ಸೆಪ್ಟೆಂಬರ್ 22, 25 ಮತ್ತು 27 ರಂದು ಚೆನ್ನೈನಲ್ಲಿ ಮೂರು ODI ಪಂದ್ಯಗಳು ನಡೆಯಲಿವೆ. ಈ ಸರಣಿಗಾಗಿ ಸಂಜು ಸ್ಯಾಮ್ಸನ್ (Sanju Samson) ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಬದಲಿಯಾಗಿ ಸಂಜುಗೆ, BCCI ನ್ಯೂಜಿಲೆಂಡ್ ‘ಎ’ ತಂಡದ ವಿರುದ್ಧದ ಸರಣಿಗೆ ನಾಯಕತ್ವ ನೀಡಿದೆ. ಟಿ20 ವಿಶ್ವಕಪ್​ಗೆ (T20 World Cup) ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಕೋಪಗೊಂಡಿದ ಸಂಜು ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಈ ಸುದ್ದಿಯಿಂದ ಕೊಂಚ ಸಂಭ್ರಮದಲ್ಲಿದ್ದಾರೆ. ಅಲ್ಲದೆ ಕೆಲವು ನೆಟ್ಟಿಗರು ಬಿಸಿಸಿಐ, ಭಯದಿಂದಲೇ ಸಂಜುಗೆ ನ್ಯೂಜಿಲೆಂಡ್ ‘ಎ’ ತಂಡದ ವಿರುದ್ದದ ಸರಣಿಗೆ ನಾಯಕತ್ವ ವಹಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹವರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಕೂಡ ಸೇರಿದ್ದಾರೆ.

ಪಾಕ್ ತಂಡದ ಮಾಜಿ ಲೆಗ್‌ಸ್ಪಿನ್ನರ್ ದಾನಿಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, “ಸಂಜುಗೆ ಅಪಾರ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರ ಬ್ಯಾಟಿಂಗ್ ಶೈಲಿಯು ಭಾರತದ ಎಕ್ಸ್-ಫ್ಯಾಕ್ಟರ್ ಆಗಿರಬಹುದಾಗಿತ್ತು. ಬೌನ್ಸಿ ವಿಕೆಟ್‌ಗಳಲ್ಲಿ ಸಂಜುಗಿಂತ ಉತ್ತಮವಾಗಿ ಯಾರೂ ಆಡುವುದಿಲ್ಲ. ಅಂತಹದರಲ್ಲಿ ಬಿಸಿಸಿಐ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡದೆ, ಅವರನ್ನು ಈಗ ಭಾರತ ಎ (ನ್ಯೂಜಿಲೆಂಡ್ ವಿರುದ್ಧ) ತಂಡದ ನಾಯಕರನ್ನಾಗಿ ಮಾಡಿದೆ. ಅದು ಕೂಡ ಬಿಸಿಸಿಐ ಒತ್ತಡದಲ್ಲಿ (ಟಿ20 ವಿಶ್ವಕಪ್‌ಗೆ ಸಂಜು ಅವರನ್ನು ಆಯ್ಕೆ ಮಾಡದಿರುವುದು) ಈ ನಿರ್ಧಾರ ತೆಗೆದುಕೊಂಡಿದೆ ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.

ಸಂಜು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದಿರುವ ದಾನಿಶ್ ಕನೇರಿಯಾ, ನೀವು ಯಾವುದೇ ವಿಭಾಗದಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದಾಗ ಅದು ಹೆಮ್ಮೆಯ ವಿಷಯವಾಗಿದೆ. ಸಂಜು ಸ್ಯಾಮ್ಸನ್‌ಗೆ ಇದು ಉತ್ತಮ ಅವಕಾಶ. ಅವರು ನಾಯಕನಾಗಿ ಭಾರತ ತಂಡಕ್ಕೆ ಸರಣಿಯನ್ನು ಗೆಲ್ಲಲು ಸಾಧ್ಯವಾದರೆ, ಅದು ಅದ್ಭುತ ಸಾಧನೆಯಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ಭಾರತ ‘ಎ’ ತಂಡ: ಸಂಜು ಸ್ಯಾಮ್ಸನ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ರಾಹುಲ್ ಚಾಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ರಾಜ್ ಬಾವಾ.

ತಾಜಾ ಸುದ್ದಿ

TV9 Kannada


Leave a Reply

Your email address will not be published.