ನವದೆಹಲಿ: ಬಿಸಿಸಿಐ ನೂತನ ಕಾಂಟ್ರಾಕ್ಟ್ ಯಾದಿಯನ್ನು ಪ್ರಕಟಿಸಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಮತ್ತು ಜಸ್‌ಪ್ರೀತ್‌ ಬುಮ್ರಾ ಎ ಪ್ಲಸ್‌ ಗ್ರೇಡ್‌ ನಲ್ಲಿ ಉಳಿದುಕೊಂಡಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಎ ಗ್ರೇಡ್‌ಗೆ ಭಡ್ತಿ ಪಡೆದಿದ್ದಾರೆ.

ಆದರೆ ಬೌಲರ್ ಗಳು ಈ ಬಾರಿ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ಬಾರಿ ಎ ಗ್ರೇಡ್ ನಲ್ಲಿದ್ದ ಭುವನೇಶ್ವರ್ ಗೆ ಈ ಬಾರಿ ಬಿ ಗ್ರೇಡ್ ನೀಡಲಾಗಿದೆ. ಚಾಹಲ್ ಬಿ ಗ್ರೇಡ್ ನಿಂದ ಸಿ ಗ್ರೇಡ್ ಗೆ ಇಳಿದಿದ್ದಾರೆ. ಆದರೆ ಎ ಗ್ರೇಡ್ ನಲ್ಲಿದ್ದ ಕುಲದೀಪ್ ಯಾದವ್ ಗೆ ಈ ಬಾರಿ ಸಿ ಗ್ರೇಡ್ ನೀಡಲಾಗಿದೆ.

ಶುಭ್ಮನ್ ಗಿಲ್, ಅಕ್ಷರ್ ಪಟೇಲ್, ಮತ್ತು ಸಿರಾಜ್ ಇದೇ ಮೊದಲ ಬಾರಿಗೆ ಕಾಂಟ್ರಾಕ್ಟ್ ಪಡೆದಿದ್ದಾರೆ. ಆದರೆ ಮನೀಷ್ ಪಾಂಡೆ ಮತ್ತು ಕೇದಾರ್ ಜಾಧವ್ ರನ್ನು ಕೈಬಿಡಲಾಗಿದೆ.

ಗ್ರೇಡ್‌ ಎ ಪ್ಲಸ್‌ (7 ಕೋ.ರೂ.): ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ.

ಗ್ರೇಡ್‌ ಎ (5 ಕೋ.ರೂ.): ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್‌, ಕೆ.ಎಲ್. ರಾಹುಲ್‌, ಮೊಹಮ್ಮದ್ ಶಮಿ, ಇಶಾಂತ್‌ ಶರ್ಮ, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ.

ಗ್ರೇಡ್‌ ಬಿ (3 ಕೋ.ರೂ.): ವೃದ್ಧಿಮಾನ್ ಸಾಹಾ, ಉಮೇಶ್‌ ಯಾದವ್‌, ಭುವನೇಶ್ವರ್‌, ಶಾರ್ದೂಲ್‌ ಠಾಕೂರ್‌, ಮಯಾಂಕ್ ಅಗರ್ವಾಲ್‌.

ಗ್ರೇಡ್‌ ಸಿ (1 ಕೋ.ರೂ.): ಕುಲದೀಪ್‌ ಯಾದವ್, ನವದೀಪ್ ಸೈನಿ, ದೀಪಕ್‌ ಚಹರ್‌, ಶುಭ್ಮನ್ ಗಿಲ್‌, ಹನುಮ ವಿಹಾರಿ, ಅಕ್ಷರ್‌ ಪಟೇಲ್‌, ಅಯ್ಯರ್‌, ವಾಷಿಂಗ್ಟನ್‌ ಸುಂದರ್‌, ಯುಹುವೇಂದ್ರ ಚಹಲ್‌, ಮೊಹಮ್ಮದ್ ಸಿರಾಜ್‌.

ಕ್ರೀಡೆ – Udayavani – ಉದಯವಾಣಿ
Read More