ಸೂಪ್ನ ಬಿಸಿಗೆ ಪ್ಯಾಕಿಂಗ್ ಡಬ್ಬದ ಮುಚ್ಚಳ ಕರಗಿದೆ ಎಂದು ಕೋಪಗೊಂಡ ಯುವತಿಯೋರ್ವಳು ಸುಡುವ ಸೂಪನ್ನು ಮ್ಯಾನೇಜರ್ ಮುಖಕ್ಕೆ ಎರಚಿದ ಘಟನೆ ಅಮೆರಿಕಾದ ಟೆಕ್ಸಾಸ್ನಲ್ಲಿ ನಡೆದಿದೆ.
ರೆಸ್ಟೋರೆಂಟ್ನಿಂದ ಸೂಪ್ ತರಿಸಿಕೊಂಡ ಮಹಿಳೆ, ಸೂಪ್ನ ಬಿಸಿಗೆ ಡಬ್ಬದ ಮುಚ್ಚಳ ಕರಗಿದೆ ಅಂತ ವಾಪಸ್ ಬಂದು ಜಗಳವಾಡಿದ್ದಾಳೆ. ಸಿಟಿಗೆದ್ದ ಯುವತಿ ಮ್ಯಾನೇಜರ್ ಬಳಿ ಹೋಗಿ ಕೂಗಾಡಿದ್ದಾಳೆ. ಮಾತಿಗೆ ಮಾತು ಬೆಳೆದು ಮಹಿಳೆ ತನ್ನ ಕೈಯಲ್ಲಿದ್ದ ಬಿಸಿ ಬಿಸಿ ಸೂಪನ್ನು ಮ್ಯಾನೇಜರ್ ಮುಖದ ಮೇಲೆ ಎರಚಿದ್ದಾಳೆ.
ಕೋಪಗೊಂಡ ಯುವತಿ ರೆಸ್ಟೋರೆಂಟ್ನಲ್ಲಿ ಮ್ಯಾನೇಜರ್ ಮುಖದ ಮೇಲೆ ಬಿಸಿ ಬಿಸಿ ಸೂಪ್ ಎರಚಿ ತಕ್ಷಣ ರೆಸ್ಟೋರೆಂಟ್ನಿಂದ ಓಡಿ ಹೋಗಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಅದೃಷ್ಟವಶಾತ್ ರೆಸ್ಟೋರೆಂಟ್ ಮ್ಯಾನೇಜರ್ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.