ಬೆಂಗಳೂರು: ಸಿಎಂ ಬಿ.ಎಸ್.​​ ಯಡಿಯೂರಪ್ಪ ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂಬುವುದು ಖಚಿತವಾಗುತ್ತಿದಂತೆ ಬಿಜೆಪಿ ಪಡಸಾಲೆಯಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಈ ನಡುವೆ ವಿಧಾನಸೌಧಕ್ಕೆ ಆಗಮಿಸಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು, ಸಿಎಂ ಬಿಎಸ್​​ವೈ ಅವರನ್ನು ನೋಡುತ್ತಿದಂತೆ ಸೈಡಿಗೆ ಹೋದ ​ಘಟನೆ ನಡೆದಿದೆ.

ಇಂದು ಮಧ್ಯಾಹ್ನದ ವೇಳೆಗೆ ಸಿ.ಪಿ. ಯೋಗೇಶ್ವರ್ ಅವರು ಕೆಂಗಲ್ ಗೇಟ್ ಮೂಲಕ ವಿಧಾನಸೌಧ ಒಳಗೆ ಪ್ರವೇಶ ಮಾಡಿದ್ದರು. ಈ ವೇಳೆ ಕಂದಾಯ ಸಚಿವ ಆರ್​. ಅಶೋಕ್ ಅವರು ಕೂಡ ಪ್ರವೇಶ ದ್ವಾರ ಬಳಿ ನಿಂತಿದ್ದರು. ಅಶೋಕ್​ ಅವರು ಇರುವುದು ಗಮನಿಸಿದ ಸಿಪಿವೈ ಅವರೊಂದಿಗೆ ಜೊತೆ ಚರ್ಚೆ ಮಾಡುತ್ತಾ ನಿಂತಿದ್ದರು.

ಈ ಸಂದರ್ಭದಲ್ಲಿ ಸಿಎಂ ಬಿಎಸ್​​ವೈ ಅವರು ಅದೇ ದಾರಿಯಲ್ಲಿ ಆಗಮಿಸಿದ್ದರು. ಈ ವೇಳೆ ಸ್ಥಳದಿಂದ ಹೋರಾಟ ಸಿಪಿವೈ, ವಿಧಾನ ಸೌಧದ ಒಳ ಪ್ರವೇಶ ಮಾಡಿದರು. ಆದರೆ ಸಿಎಂ ಕೂಡ ಅದೇ ಮಾರ್ಗವಾಗಿ ಬರುತ್ತಿರುವುದನ್ನು ಕಂಡ ಸಿಪಿವೈ, ಬೇರೆ ದಾರಿಯಲ್ಲಿ ಒಳ ನಡೆದರು.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಹೆಚ್ಚಾಗುತ್ತಿದಂತೆ ಸಿ.ಪಿ.ಯೋಗೇಶ್ವರ್​ ಅವರು ಬಿ.ಎಸ್.​​ ಯಡಿಯೂರಪ್ಪ ಅವರ ವಿರುದ್ಧ ಲಾಬಿ ನಡೆಸಿದ್ದರು ಎನ್ನಲಾಗಿತ್ತು. ಹಲವು ಬಾರಿ ದೆಹಲಿ ಭೇಟಿ ನೀಡಿದ್ದ ಸಿಪಿವೈ ಹೈಕಮಾಂಡ್​ ಜೊತೆಗೆ ಮಾತು ನಡೆಸಿದ್ದರು. ಅಲ್ಲದೇ ಸಿಎಂ ಬಿಎಸ್​​ವೈ ಪುತ್ರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ಸಿಪಿವೈ, ಬಿಜೆಪಿ ರೆಬೆಲ್ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದರೆ ಕೆಲ ದಿನಗಳಿಂದ ನಾಯಕತ್ವ ಬದಲಾವಣೆ ಕುರಿತು ಮೌನ ವಹಿಸಿದ್ದಾರೆ.

The post ಬಿ.ಎಸ್​. ಯಡಿಯೂರಪ್ಪ ಬರುತ್ತಿದ್ದಂತೆಯೇ ಸೈಡಿಗೆ ಹೋದ ‘ಸೈನಿಕ’ appeared first on News First Kannada.

Source: newsfirstlive.com

Source link