ಬಿ.ವೈ. ವಿಜಯೇಂದ್ರನ್ನು ಮಾಧ್ಯಮಗಳು ಹಿರೋ ಮಾಡುತ್ತಿವೆ; ಅವರನ್ನ ಹಿರೋ ಮಾಡೋದಕ್ಕೆ ನನ್ನನ್ನು ತುಳಿಯುತ್ತಿದ್ದೀರಿ-ಬಸನಗೌಡ ಪಾಟೀಲ್ ಯತ್ನಾಳ್ | Basanagouda Patil Yatnal express anger on media over BY Vijayendra in Vijayapura


ಬಿ.ವೈ. ವಿಜಯೇಂದ್ರನ್ನು ಮಾಧ್ಯಮಗಳು ಹಿರೋ ಮಾಡುತ್ತಿವೆ; ಅವರನ್ನ ಹಿರೋ ಮಾಡೋದಕ್ಕೆ ನನ್ನನ್ನು ತುಳಿಯುತ್ತಿದ್ದೀರಿ-ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)

ಕೆಲ ಟಿವಿ ಮಾಧ್ಯಮಗಳು ಬಿ.ವೈ. ವಿಜಯೇಂದ್ರನ್ನು ಹಿರೋ ಮಾಡೋದಕ್ಕೆ ಯತ್ನಾಳನ್ನು ತುಳಿಯುತ್ತಿದ್ದೀರಿ. ಯತ್ನಾಳರನ್ನಾ ಯಾವಾಗ ಹೊರ ಹಾಕುತ್ತೀರಿ ಎಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಗಂಟು‌ ಬಿದಿದ್ದೀರಿ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೇ ಶಾಸಕ ಯತ್ನಾಳ್ ಹೊರಟ್ರು.

ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಪುತ್ರ ಬಿ.ವೈ. ವಿಜಯೇಂದ್ರನ್ನು ಮಾಧ್ಯಮಗಳು ಹಿರೋ ಮಾಡುತ್ತಿವೆ ಎಂದು ಮಾಧ್ಯಮದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿ ಆಕ್ರೋಶ ಹೊರ ಹಾಕಿದ್ದಾರೆ.

ಕೆಲ ಟಿವಿ ಮಾಧ್ಯಮಗಳು ಬಿ.ವೈ. ವಿಜಯೇಂದ್ರನ್ನು ಹಿರೋ ಮಾಡೋದಕ್ಕೆ ಯತ್ನಾಳನ್ನು ತುಳಿಯುತ್ತಿದ್ದೀರಿ. ಯತ್ನಾಳರನ್ನಾ ಯಾವಾಗ ಹೊರ ಹಾಕುತ್ತೀರಿ ಎಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಗಂಟು‌ ಬಿದಿದ್ದೀರಿ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೇ ಶಾಸಕ ಯತ್ನಾಳ್ ಹೊರಟ್ರು. ನಗರದ‌ ಬಸವ ರೆಸಿಡೆನ್ಸಿ ಹೊಟೇಲ್ ಗೆ ಸಚಿವರಾದ ಭೈರತಿ ಬಸವರಾಜ ಹಾಗೂ‌ ಎಂಟಿಬಿ ನಾಗರಾಜ ಭೇಟಿಗೆ ಬಂದಿದ್ದ ಯತ್ನಾಳ್ ಮಾಧ್ಯಮದವರು ಪ್ರತಿಕ್ರಿಯೆ ಪಡೆಯಲು ತೆರಳಿದ್ದ ವೇಳೆ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಿಜಯೇಂದ್ರಗೆ ಕೈ ತಪ್ಪಿದ ಟಿಕೆಟ್‌
ವಿಧಾನಪರಿಷತ್‌ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್‌ ಕೈತಪ್ಪಿತ್ತು. ಅತ್ತ ಅಭಿಮಾನಿಗಳು ಮುಂದಿನ ಸಿಎಂ ಎಂಬಲ್ಲಿವರೆಗೂ ವಿಜಯೇಂದ್ರ ಪರ ಘೋಷಣೆಯನ್ನು ಮುಟ್ಟಿಸಿದ್ದಾರೆ. ಇದರ ನಡುವೆ ವಿಜಯೇಂದ್ರ ಅವರಿಗೆ ಟಿಕೆಟ್‌ ಕೈತಪ್ಪಿರುವುದಕ್ಕೆ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನೇನೂ ಬಿಎಸ್‌ವೈ ಪರ ಬ್ಯಾಟಿಂಗ್‌ ಮಾಡ್ತಾ ಇಲ್ಲ ಎನ್ನುತ್ತಲೇ, ವ್ಯವಸ್ಥಿತವಾಗಿ ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡ್ತಿದ್ದಾರೆಂದು ದೂರಿದ್ದಾರೆ.

TV9 Kannada


Leave a Reply

Your email address will not be published. Required fields are marked *