ಬೆಂಗಳೂರು: ಇತಿಹಾಸ ಪ್ರಸಿದ್ಧ ರಾಜಧಾನಿಯ ಬಸವನಗುಡಿ ದೊಡ್ಡಗಣಪತಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಕೋವಿಡ್ ಸಲುವಾಗಿ 2 ವರ್ಷ ಸ್ಥಗಿತಗೊಂಡಿದ್ದ ಕಡಲೆಕಾಯಿ ಪರಿಷೆ ಇದೀಗ ಆರಭಗೊಂಡಿದ್ದು ನಾನಾ ಜಿಲ್ಲೆಗಳಿಂದ ರೈತರು ನಾನಾ ಬಗೆಯ ಕಡೆಲಾಕಾಯಿ ಹೊತ್ತು ಆಗಮಿಸುತ್ತಿದ್ದಾರೆ.
ಇನ್ನು ಈ ಪರಿಷೆಯಲ್ಲಿ ಅಂಗಡಿ, ಮುಂಗಟ್ಟುಗಳ ಆದಾಯಕ್ಕೆ ಸಂಬಧಿಸಿದಂತೆ ಚರ್ಚೆಯೊಂದು ಶುರುವಾಗಿದ್ದು ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಪುಟ್ಪಾತ್ ಮೇಲೆ ಕಡಲೆಕಾಯಿ ಮಾರಾಟಕ್ಕೆ ಮುಜರಾಯಿ ಇಲಾಖೆ ಟೆಂಡರ್ ಕರೆದಿದ್ದು, ಪ್ರತಿ ಅಂಗಡಿಗೆ ತಲಾ 2000 ರೂಪಾಯಿಗಳವರೆಗೆ ದರ ನಿಗದಿ ಪಡಿಸಲಾಗಿದೆ. ಆದರೆ ವಿಷ್ಯಾ ಇರೋದೇ ಇಲ್ಲಿ ಏಕೆಂದರೆ ಜಾಗ ಬಿಬಿಎಂಪಿಯದ್ದು. ಆದರೆ ಆದಾಯ ಸೇರೋದು ಮಾತ್ರ ಮುಜರಾಯಿ ಹುಂಡಿಗೆ ಅಂತ ಶಾಸಕ ಉದಯ್ ಗರುಡಾಚಾರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಡಲೆಕಾಯಿ ಬೀಜ ಮುಜರಾಯಿ ಇಲಾಖೆಗೆ, ಸಿಪ್ಪೆ ಮಾತ್ರ ಬಿಬಿಎಂಪಿಗೆ ಎಂಬ ರೀತಿಯಲ್ಲಿ ವ್ಯವಸ್ಥೆಯಿದೆ. ಬಿಬಿಎಂಪಿ ಜಾಗದಲ್ಲಿ ಅಂಗಡಿ ನಿರ್ಮಿಸಿ, ಮುಜರಾಯಿ ಇಲಾಖೆ ಕಂದಾಯ ವಸೂಲಿ ಮಾಡುತ್ತಿದೆ ಎಂದು ಗರಂ ಆಗಿದ್ದಾರೆ. ಆದರೆ ಕಾನೂನಿನ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಜಾಗಕ್ಕೆ ಬಿಬಿಎಂಪಿಯೇ ತೆರಿಗೆ ವಸೂಲಿ ಮಾಡಬೇಕು. ಇಲ್ಲಿ ಮುಜರಾಯಿ ಇಲಾಖೆ ಪಾಲಿಕೆ ಜಾಗದ ತೆರಿಗೆ ವಸೂಲಿ ಮಾಡುತ್ತಿದೆ ಎಂಬ ಅಸಮಾಧಾನದ ಹೊಗೆಯಾಡ್ತಾ ಇದೆ.