ಬೀದರ್: ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಸಮಯದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಜನರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ.

ಒಂದೇ ತಿಂಗಳಲ್ಲಿ ಬರೋಬ್ಬರಿ 20 ಜನ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗೌರಮ್ಮ ಬಿರಾದಾರ, ವಿಶ್ವನಾಥ ಸೇರಿದಂತೆ 20 ಜನ ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆ, ಕೆಮ್ಮು ಇರುವ ವಯೋವೃದ್ಧರು ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಜೊತೆಗೆ ಗ್ರಾಮದ ಯುವಕರು ಸಹ ಸಾವನ್ನಪ್ಪುತ್ತಿರುವುದು ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಗ್ರಾಮದ ಜನರು ಕೊರೊನಾ ಮಹಾಮಾರಿಗೆ ಸಾವನ್ನಪ್ಪುತ್ತಿದ್ದಾರಾ? ಇಲ್ಲವೇ ಯಾವ ಕಾರಣಕ್ಕಾಗಿ ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ತಿಳಿಯದೇ ಗೊಂದಲಗೊಂಡಿದ್ದಾರೆ. ಹೀಗೆ ಗ್ರಾಮದಲ್ಲಿ ನಿಗೂಢವಾಗಿ ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ತಿಳಿಯಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಟೆಸ್ಟಿಂಗ್ ಇಂದು ಮುಂದಾಗಿದ್ದಾರೆ.

ಒಂದು ತಿಂಗಳಿನಿಂದ ನಮ್ಮ ಗ್ರಾಮದಲ್ಲಿ 20 ಜನರು ನಿಗೂಢವಾಗಿ ಸಾವನ್ನಪ್ಪಿದ್ದು ಯಾವ ಕಾರಣ ಸಾವನ್ನಪ್ಪಿದ್ದಾರೆ ಎಂಬುದು ಇನ್ನು ತಿಳಿಯುತ್ತಿಲ್ಲಾ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

The post ಬೀದರ್ ಗ್ರಾಮದಲ್ಲಿ ದುರಂತ – 1 ತಿಂಗಳಲ್ಲಿ ಯುವಕರು ಸೇರಿದಂತೆ 20 ಜನ ನಿಗೂಢ ಸಾವು appeared first on Public TV.

Source: publictv.in

Source link