ಬೀದರ್: ತಲೆಗೆ ಹಾಗೂ ಮರ್ಮಾಂಗಕ್ಕೆ ಕಲ್ಲಿನಿಂದ ಜಜ್ಜಿ ಪ್ರಾಥಮಿಕ ಶಾಲೆಯ ಶಿಕ್ಷಕನ ಕೊಲೆ | Primary School teacher killed by stone in bidar


ಬೀದರ್: ತಲೆಗೆ ಹಾಗೂ ಮರ್ಮಾಂಗಕ್ಕೆ ಕಲ್ಲಿನಿಂದ ಜಜ್ಜಿ ಪ್ರಾಥಮಿಕ ಶಾಲೆಯ ಶಿಕ್ಷಕನ ಕೊಲೆ

ವಿಜಯ್ ಕುಮಾರ್ ಧೋಂಡಿಬಾ ಟಿಳೇಕರ್ (49)

ಬೀದರ್: ತಲೆಗೆ ಹಾಗೂ ಮರ್ಮಾಂಗಕ್ಕೆ ಕಲ್ಲಿನಿಂದ ಜಜ್ಜಿ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಗ್​ಪುರ ತಾಂಡಾ ಬಳಿ ನಡೆದಿದೆ. ಮೊನ್ನೆ (ನವೆಂಬರ್ 8, ಸೋಮವಾರ) ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಕುಮಾರ್ ಧೋಂಡಿಬಾ ಟಿಳೇಕರ್ (49) ರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇವರು ಔರಾದ್ ತಾಲೂಕಿನ ಕರಂಜಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಳೆದ ಏಳು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ವಿಜಯ್​ ಕುಮಾರ್​ಗೆ ಮದುವೆಯಾಗಿದ್ದು, ಗಂಡ ಹೆಂಡತಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಅಲ್ಲದೇ ವಿಧವಾ ವಿಚ್ಚೇದನಕ್ಕೂ ಕೂಡಾ ಇವರ ಹೆಂಡತಿ ಕೋರ್ಟ್​ನಲ್ಲಿ ಅರ್ಜಿಹಾಕಿದ್ದಾರೆ.

ವಿಜಯ್ ಕುಮಾರ್ ಪತ್ನಿ ಬೀದರ್​ನಲ್ಲಿಯೇ ವಾಸವಾಗಿದ್ದಾರೆ. ಆದರೆ ಕೊಲೆಯಾದ ವಿಜಯ್​ ಕುಮಾರ್ ಔರಾದ್ ಪಟ್ಟಣದ ಲಿಡ್ಕರ್ ಕಾಲೋನಿಯಲ್ಲಿ ವಾಸವಾಗಿದ್ದರು. ಇನ್ನೂ ಮೊದಲನೆಯ ಹೆಂಡತಿಗೆ ವಿಚ್ಚೇದನ ಕೊಟ್ಟು ಎರಡನೇಯ ಮದುವೆಯಾಗಲು ವಿಜಯ್​ ಕುಮಾರ್​ ತಯಾರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಅಷ್ಟರಲ್ಲಾಗಲೇ ವಿಜಯ್​ ಕುಮಾರ್ ಭೀಕರವಾಗಿ ಹತ್ಯೆಯಾಗಿದ್ದಾರೆ. ಇನ್ನೂ ಕೊಲೆಯಾದ ವಿಜಯ್​ ಕುಮಾರ್ ವಿಪರಿತವಾಗಿ ಕುಡಿಯುತ್ತಿದ್ದರು ಎಂದು ಹೇಳಲಾಗುತ್ತಿದೆ ಮತ್ತು ಕೌಟುಂಬಿಕ ಕಲಹವೇ ಇವರ ಕೊಲೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಔರಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರರನ್ನು ಹಿಡಿಯಲು ಪೋಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ ಪ್ರಕರಣ; 6 ಆರೋಪಿಗಳು ಅರೆಸ್ಟ್

Murder: ರಾಡ್‌ನಿಂದ ಪತಿ ಹತ್ಯೆಗೈದು ಪೊಲೀಸರ ಮುಂದೆ ಶರಣಾದ 2ನೇ ಪತ್ನಿ, ಕೊಲೆಯ ಹಿಂದೆ ಆಸ್ತಿ ಕಬಳಿಕೆ ಆರೋಪ

TV9 Kannada


Leave a Reply

Your email address will not be published. Required fields are marked *