ಬೀದರ್: ಸಾಲಬಾಧೆಯಿಂದ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ | Farmer Suicide Case at Bidar Karnataka Police Crime News details here


ಬೀದರ್: ಸಾಲಬಾಧೆಯಿಂದ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಬೀದರ್: ಸಾಲಬಾಧೆಯಿಂದ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೀದರ್ ತಾಲೂಕಿನ ಕುತ್ತಾಬಾದ್ ಗ್ರಾಮದಲ್ಲಿ ನಡೆದಿದೆ. ರೈತ ಸಂಜುಕುಮಾರ್ (37) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀದರ್ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅವರು ಪಿಕೆಪಿಎಸ್ ಬ್ಯಾಂಕ್​ನಲ್ಲಿ ಮೂರು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂರುವರೆ ಎಕರೆಗಳಷ್ಟು ಜಮೀನು ಹೊಂದಿದ್ದ ರೈತರಿಗೆ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿ ನಷ್ಟ ಉಂಟಾಗಿತ್ತು. ಅತಿವೃಷ್ಟಿಯಿಂದ ರೈತ ಬೆಳೆದ ಬೆಳೆ ನಷ್ಟವಾಗಿ ಸಾಲ ತಿರಿಸೋದು ಹೇಗೆ ಎಂಬ ಚಿಂತೆಯಲ್ಲಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹಾಸನ: ಗುಂಡು ಹಾರಿಸಿ ಕೊಲೆಗೆ ಯತ್ನ
ಜಮೀನು ವೈಷಮ್ಯ ಹಿನ್ನೆಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಉಚ್ಚಂಗಿ ಗ್ರಾಮದಲ್ಲಿ ನಡೆದಿದೆ. ಕೃತಿಕ್ ಎಂಬವರ ಬಲಗೈಗೆ ಗುಂಡು ತಗುಲಿದೆ. ಸೋದರ ಸಂಬಂಧಿಗಳಾದ ರವಿಕುಮಾರ್, ವೇದಮೂರ್ತಿ, ಸುರೇಶ್, ಚಿರಾಗ್ ಎಂಬುವರ ವಿರುದ್ಧ ಫೈರಿಂಗ್​ ಆರೋಪ ಕೇಳಿಬಂದಿದೆ. ಕಾರಿನಲ್ಲಿ ತೆರಳುತ್ತಿದ್ದ ಕೃತಿಕ್ ಅಡ್ಡಗಟ್ಟಿ‌ ಫೈರಿಂಗ್ ಆರೋಪ ಕೇಳಿಬಂದಿದೆ. ಕೃತಿಕ್​​ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಂಗಳೂರು: ಅಪ್ರಾಪ್ತ ಬಾಲಕಿ ಶವ ಪತ್ತೆ ಪ್ರಕರಣ; ಎನ್​ ಶಶಿಕುಮಾರ್ ಪ್ರತಿಕ್ರಿಯೆ
ಹೆಂಚಿನ ಫ್ಯಾಕ್ಟರಿ ಬಳಿ ಅಪ್ರಾಪ್ತೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ವಿವರಗಳು ಲಭ್ಯವಾಗಿದೆ. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಿನ್ನೆ ಸಂಜೆ ಫ್ಯಾಕ್ಟರಿ ಡ್ರೈನೇಜ್ ನಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಾರ್ಖಂಡ್ ಮೂಲದ ಬಾಲಕಿ‌ ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಳು. ಸಂಜೆ ವೇಳೆಗೆ ಬಳಿಕ ಬಾಲಕಿ ಶವ ಪತ್ತೆ ಆಗಿದೆ. ಇದೀಗ 19 ಜನರನ್ನು ವಶಕ್ಕೆ ಪಡೆದು ವಿಚಾರಣೆ‌ ನಡೆಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗಾಗಲೇ ಅನುಮಾನ ಬಂದ ಸಾಕಷ್ಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳನ್ನು ಸದ್ಯದರಲ್ಲೆ ಬಂಧಿಸುತ್ತೇವೆ. ಮರಣೋತ್ತರ ಪರೀಕ್ಷೆ ವೇಳೆ ಹಲವು ಪರೀಕ್ಷೆ ಮಾಡಲು ಸೂಚಿಸಿದ್ದೇವೆ. ಅತ್ಯಾಚಾರ ಆಗಿದ್ಯಾ ಅನ್ನೊ ಬಗ್ಗೆ ತಿಳಿಯಲು ಸಾಕಷ್ಟು ಪ್ರಶ್ನೆ ಕೇಳಿದ್ದೇವೆ. ಅತ್ಯಾಚಾರ ಆಗಿದ್ಯಾ, ಸಾವಿಗೆ ಕಾರಣ ಏನು ಅನ್ನೊದ್ರ ಬಗ್ಗೆ 16 ಪ್ರಶ್ನೆ ಕೇಳಿದ್ದೇವೆ. ಆ ಪ್ರಶ್ನೆ ಆಧಾರದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ಮಾಡುತ್ತಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

ಮೈಸೂರು: ಇಬ್ಬರು ಕಾಲು ಜಾರಿ ನೀರುಪಾಲು
ಕೆರೆ ಏರಿ ಮೇಲೆ ನಿಂತಿದ್ದ ಇಬ್ಬರು ಕಾಲು ಜಾರಿ ನೀರುಪಾಲು ಆದ ದುರ್ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹೊಸಕೋಟೆ ಕೆಂಚನ ಕೆರೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳಾದ ಅಬ್ದುಲ್ಲಾ (21), ತನ್ವೀರ್ (20) ಮೃತರಾಗಿದ್ದಾರೆ. ಮೂವರು ಸ್ನೇಹಿತರು ಕೆರೆ ಏರಿ‌ ಮೇಲೆ ನಿಂತಿದ್ದಾಗ ಘಟನೆ ಸಂಭವಿಸಿದೆ. ಈ ವೇಳೆ ಕಾಲು ಜಾರಿ ಇಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟದಲ್ಲಿ ಗೃಹಿಣಿ ಶವ ಪತ್ತೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಗೃಹಿಣಿ ಶವ ಪತ್ತೆ ಆಗಿದೆ. ಹೆಡ್ ಕಾನ್ಸ್‌ಟೇಬಲ್ ಕಿರುಕುಳದಿಂದ ಸಾವು ಆರೋಪ ಕೇಳಿಬಂದಿದೆ. ಹೆಚ್‌ಸಿ ಅನಂತಕುಮಾರ್ ವಿರುದ್ಧ ಮೃತಳ ಪತಿ ದೂರು ನೀಡಿದ್ದಾರೆ. ಅನಂತಕುಮಾರ್, ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಮುಖ್ಯ ಕಾನ್​ಸ್ಟೇಬಲ್ ಆಗಿದ್ದಾರೆ. ತನ್ನ ಪತ್ನಿ ಜತೆ ಅನಂತಕುಮಾರ್‌ಗೆ ಅನೈತಿಕ ಸಂಬಂಧವಿತ್ತು. ಮನೆಯಲ್ಲಿ ಅವರಿಬ್ಬರೇ ಇದ್ದಾಗ ನನ್ನ ಪತ್ನಿ ಮೃತಪಟ್ಟಿದ್ದಾಳೆ. ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಅನಂತಕುಮಾರ್ ನಾಪತ್ತೆ ಆಗಿದ್ದಾರೆ ಎಂದು ಮೃತಳ ಪತಿ ವೆಂಕಟೇಶನಿಂದ ಶಿಡ್ಲಘಟ್ಟ ನಗರ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ: Crime News: ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ; 6 ಆರೋಪಿಗಳ ಬಂಧನ

ಇದನ್ನೂ ಓದಿ: ಮಳೆ ಅಬ್ಬರ: ಮನೆಗೋಡೆ ಕುಸಿದು ವ್ಯಕ್ತಿ ಸಾವು, ಹರಿಯುವ ನೀರಲ್ಲಿ ತೇಲಿ ಬಂತು ಅಪರಿಚಿತ ಮಹಿಳೆ ಶವ

TV9 Kannada


Leave a Reply

Your email address will not be published. Required fields are marked *