ಬೀದಿಯಲ್ಲಿ ಪೆನ್​ ಮಾರುತ್ತಿದ್ದ ಬಾಲಕಿಗೆ ‘ಐಫೋನ್’ ಗಿಫ್ಟ್ ಕೊಟ್ಟ ಲಾಲೂ ಪುತ್ರ..!


ನವದೆಹಲಿ: ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುವ ಲಾಲೂ ಪ್ರಸಾದ್​​ ಯಾದವ್ ಪುತ್ರ ಹಾಗೂ ಆರ್‌ಜೆಡಿ ಶಾಸಕ ತೇಜ್‌ ಪ್ರತಾಪ್ ಯಾದವ್ ಇದೀಗ ಹೊಸದೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ.

ಪಾಟ್ನಾದ ಬೀದಿಗಳಲ್ಲಿ ಪೆನ್ನು ಮಾರಾಟ ಮಾಡ್ತಿದ್ದ ಬಡ ಹುಡುಗಿಗೆ ಐಫೋನ್​ ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​​​ ಆಗಿದೆ. ತೇಜ್​ ಪ್ರತಾಪ್​ ತನ್ನ ಸ್ನೇಹಿತರೊಂದಿಗೆ ಪಾಟ್ನಾದ ಬೌರಿಂಗ್​ ರೋಡ್​​ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ.

ಈ ರಸ್ತೆಯಲ್ಲಿ ಚಿಕ್ಕ ಬಾಲಕಿಯೊಬ್ಬಳು ಪೆನ್ನು ಮಾರಾಟ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ತೆರಳಿದ ತೇಜ್​ ಪ್ರತಾಪ್​ ಆಕೆಯ ಜೊತೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿ ನಂತರ ಐಫೋನ್ ಕೊಟ್ಟಿದ್ದಾರೆ.

News First Live Kannada


Leave a Reply

Your email address will not be published. Required fields are marked *