ಬೆಳಗಾವಿ: ಬೀದಿ ನಾಯಿಗಳನ್ನ ಹಿಡಿಯಲೇಂದೇ ಬೆಳಗಾವಿ ಮಹಾನಗರ ಪಾಲಿಕೆ ಲಕ್ಷ ಲಕ್ಷ ಹಣವನ್ನ ಖರ್ಚು ಮಾಡಿದೆ. ನಾಯಿ ಹಿಡಿಯಲೆಂದು ಒಟ್ಟಾಗಿ 47 ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿರೋದು ಬಹಿರಂಗವಾಗಿದೆ.

ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಪಾಲಿಕೆ ಬೀದಿ ನಾಯಿಯನ್ನ ಹಿಡಿಯಲು ಎಷ್ಟು ಖರ್ಚು ಮಾಡಿದೆ ಅನ್ನೋದರ ದಾಖಲೆಯನ್ನ ಬಿಡುಗಡೆ ಮಾಡಿದ್ದಾರೆ.  2014-15 , 2017-18 ಮತ್ತು 20019-20 ಈ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 47 ಲಕ್ಷದ 55 ಸಾವಿರದ 556ರೂಪಾಯಿಯನ್ನ ಬೆಳಗಾವಿ ಮಹಾನಗರ ಪಾಲಿಕೆ ಖರ್ಚು ಮಾಡಿದೆ ಅಂತ ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಬೀದಿ ನಾಯಿಗಳನ್ನ ಬೇರೆ ಕಡೆ ಸಾಗಿಸಲು ಪಾಲಿಕೆ ಮಾಡಿದ ಲಕ್ಷ ಲಕ್ಷ ಖರ್ಚು ನೋಡೋದಾದ್ರೆ

2014-15ನೇ ಸಾಲಿನಲ್ಲಿ 3,944 ಬೀದಿ ನಾಯಿಗಳನ್ನ ಹಿಡಿಯಲು 25,65 ,805 ರೂಪಾಯಿಗಳು

2017-18ರ ಅವಧಿಯಲ್ಲಿ 972 ಬೀದಿ ನಾಯಿಗಳನ್ನ ಹಿಡಿಯಲು 6,97,000 ರೂಪಾಯಿಗಳು

2019-20ನೇ ಸಾಲಿನಲ್ಲಿ 1,598 ಬೀದಿ ನಾಯಿಗಳನ್ನ ಹಿಡಿಯಲು 14,95,531 ರೂಪಾಯಿ ಖರ್ಚು

ಅಂದ್ರೆ, ಒಂದು ಬೀದಿ ನಾಯಿ ಹಿಡಿಯಲು ಮಹಾನಗರ ಪಾಲಿಕೆ ಅಧಿಕಾರಿಗಳು ಖರ್ಚು ಮಾಡಿದ್ದು ಬರೋಬ್ಬರಿ 730 ರೂಪಾಯಿ. ಇದು, ಅಕ್ರಮವಾಗಿ ಖರ್ಚು ಮಾಡಿದ್ದಾರೆ. ಖರ್ಚು ವೆಚ್ಚಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.

The post ಬೀದಿ ನಾಯಿಗಳನ್ನ ಹಿಡಿಯಲು ಬೆಳಗಾವಿ ಮಹಾನಗರ ಪಾಲಿಕೆ ಖರ್ಚು ಮಾಡಿರೋ ಹಣ ಎಷ್ಟು ಗೊತ್ತಾ? appeared first on News First Kannada.

Source: newsfirstlive.com

Source link