ಬೆಳಗಾವಿ:ಬೀದಿ ನಾಯಿ ದಾಳಿಗೊಳಗಾದ ನಾಲ್ಕು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ನಡೆದಿದೆ.
ಸೌಜನ್ಯ ಮಲ್ಲಪ್ಪ ಮುತ್ತೂರ ಮೃತ ಮಗು. ಮೃತ ಮಗುವಿನ ಮೇಲೆ ದಿಢೀರ್ ದಾಳಿ ನಡೆಸಿದ ಬೀದಿ ನಾಯಿ ಮಗುವನ್ನು ತೀವ್ರವಾಗಿ ಗಾಯಗೊಳಿಸಿತ್ತು. ತಕ್ಷಣವೇ ಕಂದಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಏರ್ಪಾಡು ಮಾಡಿದ್ದರು ಕೂಡ ಮಾರ್ಗ ಮಧ್ಯದಲ್ಲಿಯೇ ಮಗು ಕೊನೆಯುಸಿರೆಳೆದಿದೆ. ಇನ್ನು ಪುಠಾಣಿಯ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.