ಹಾವೇರಿ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬೀದಿ ಬದಿಯ ವ್ಯಾಪಾರಿಗಳ ಬದುಕು ದುಸ್ಥರವಾಗಿದೆ. ಹೀಗಾಗಿ ಇಂದು ದೂರದ ಅನಂತಪುರದಿಂದ ಹಾವೇರಿ ನಗರಕ್ಕೆ ಸೋಪಾ ವ್ಯಾಪಾರಕ್ಕೆ ಬಂದಿದ್ದ ಎರಡು ಕುಟುಂಬಕ್ಕೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಟ್ರಾಫಿಕ್ ಪಿಎಸ್‍ಐ ಬಸವರಾಜ್ ಬೆಟಗೇರಿ ಮಾನವೀಯತೆ ಮೆರೆದಿದ್ದಾರೆ.

ನಗರದ ವಾಲ್ಮೀಕಿ ಸರ್ಕಲ್ ಬಳಿ ಟೆಂಟ್‍ನಲ್ಲಿರುವ ಕುಟುಂಬಗಳಿಗೆ ತಲಾ 25 ಕೆ.ಜಿ ಅಕ್ಕಿ, ಬೆಳೆ, ಸಾಂಬಾರ ಪದಾರ್ಥಗಳನ್ನು ನೀಡಿದ್ದಾರೆ. ಪ್ರತಿ ಎರಡು ದಿನಕ್ಕೊಮ್ಮೆ ಉಚಿತವಾಗಿ ತರಕಾರಿ ಹಾಗೂ ಹಣ್ಣುಗಳನ್ನು ಕೊಡುತ್ತಾ ಪಿಎಸ್‍ಐ ಮಾನವೀಯತೆ ಮೆರೆಯುತ್ತಿದ್ದಾರೆ. ಪಿಎಸ್‍ಐ ಕಾರ್ಯಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದು, ಇತರರಿಗೂ ಮಾದರಿ ಆಗಲಿ ಎಂದಿದ್ದಾರೆ.

The post ಬೀದಿ ಬದಿ ವ್ಯಾಪಾರಿಗಳಿಗೆ ಫುಡ್ ಕಿಟ್ ವಿತರಿಸಿ ಮಾನವೀಯತೆ ಮೆರೆದ PSI appeared first on News First Kannada.

Source: newsfirstlive.com

Source link