ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!

ಹರಾರೆ: ಭಾರತೀಯ ಬುಕ್ಕಿಯೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ಐಪಿಎಲ್ ಸೇರಿದಂತೆ ಲೀಗ್ ಗಳ ಮಾಹಿತಿ ಹಂಚಿಕೊಂಡ ಆರೋಪದಡಿ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ, ಖ್ಯಾತ ವೇಗದ ಬೌಲರ್ ಹೀತ್ ಸ್ಟ್ರೀಕ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಎಂಟು ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆಗಳಿಂದ ನಿಷೇಧಿಸಿದೆ.

ಜಿಂಬಾಬ್ವೆ ಕೋಚ್ ಕೂಡಾ ಆಗಿರುವ ಹೀತ್ ಸ್ರ್ಟ್ರೀಕ್ ಐಪಿಎಲ್, ಬಿಪಿಎಲ್, ಅಫ್ಘಾನಿಸ್ಥಾನ್ ಲೀಗ್ ಗಳಂತಹ ವಿವಿಧ ಜವಾಬ್ದಾರಿ ಹೊಂದಿದ್ದಾಗ ಐಸಿಸಿ ಭ್ರಷ್ಟಾಚಾರ ನಿಗ್ರಹ ನೀತಿಗಳನ್ನು ಉಲ್ಲಂಘಿಸಿದ್ದಾರೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ವೇಗಿಗೆ ಕೋವಿಡ್-19 ಸೋಂಕು ದೃಢ!

ಅವರಿಗೆ ಐಸಿಸಿಯ ಎಲ್ಲಾ ನಿಯಮಗಳ ಅರಿವಿತ್ತು. ಆದರೂ ಅವರು ತಂಡದ ಒಳ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಬುಕ್ಕಿಗಳಿಗೆ ನಾಲ್ವರು ಆಟಗಾರರನ್ನೂ ಸಂಪರ್ಕಿಸಲು ಅನುವು ಮಾಡಿಕೊಟ್ಟಿದ್ದಾರೆ. ಅವರು ತಮ್ಮೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಕಠಿಣ ನಿಷೇಧ ಹೇರಲಾಗಿದೆ ಎಂದು ಐಸಿಸಿ ಹೇಳಿದೆ.

‘ಮಿಸ್ಟರ್‌ ಎಕ್ಸ್‌’ (ಬುಕಿ) ಜೊತೆ ಸ್ಟ್ರೀಕ್‌, 15 ತಿಂಗಳಿಗೂ ಹೆಚ್ಚು ಸಮಯ ಸಂಪರ್ಕದ್ದಲ್ಲಿದ್ದರು. ಜೊತೆಗೆ ಆತನಿಂದ 2 2 ಬಿಟ್‌ ಕಾಯಿನ್‌ (ತಲಾ 35000 ಡಾಲರ್‌ ಮೌಲ್ಯ) ಪಡೆದಿದ್ದರು. ಅಷ್ಟೇ ಅಲ್ಲದೆ ಪತ್ನಿಗಾಗಿ ಒಂದು ಐಫೋನ್‌ ಉಡುಗೊರೆಯಾಗಿ ಬುಕಿಯಿಂದ ಪಡೆದಿದ್ದರು ಎನ್ನುವುದನ್ನು ಐಸಿಸಿ ಷ್ಟಾಚಾರ ನಿಗ್ರಹ ದಳದಿಂದ ಮುಚ್ಚಿಟ್ಟಿದ್ದರು. ಐಸಿಸಿ ವಿಚಾರಣೆ ವೇಳೆ ಸ್ಟ್ರೀಕ್‌ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಶಹಬಾಜ್ ಬೌಲಿಂಗ್ ಕಮಾಲ್ : ಹೈದರಾಬಾದ್‌ ವಿರುದ್ಧ RCB ಗೆ 6 ರನ್‌ಗಳ ಗೆಲುವು

ಕ್ರೀಡೆ – Udayavani – ಉದಯವಾಣಿ
Read More