ಬುಚಾ ನಾಗರಿಕರನ್ನು ಕೊಂದ ಸೈನಿಕರನ್ನು ಪುಟಿನ್ ಸನ್ಮಾನಿಸಿದ ಸುದ್ದಿ ಓದುವಾಗ ಕಣ್ಣೀರಿಟ್ಟ ಜಪಾನೀ ನ್ಯೂಸ್ ರೀಡರ್ | While reading about Putin honouring those who killed civilians at Bucha a Japanese anchor breaks down ARB


ಬುಚಾ ನಾಗರಿಕರನ್ನು ಕೊಂದ ಸೈನಿಕರನ್ನು ಪುಟಿನ್ ಸನ್ಮಾನಿಸಿದ ಸುದ್ದಿ ಓದುವಾಗ ಕಣ್ಣೀರಿಟ್ಟ ಜಪಾನೀ ನ್ಯೂಸ್ ರೀಡರ್

ಯುಮಿಕೊ ಮತ್ಸುವೊ, ಜಪಾನೀ ನ್ಯೂಸ್ ರೀಡರ್

ಟಿವಿ ಚ್ಯಾನೆಲ್ ಗಳ ನ್ಯೂಸ್ ರೀಡರ್ ಗಳು ವಾರ್ತೆಗಳನ್ನು ವಾಚಿಸುವಾಗ ಭಾವುಕರಾಗುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಶುಕ್ರವಾರ ಜಪಾನಿನ ಸುದ್ದಿವಾಚಕಿ (news reader) ಒಬ್ಬರು, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಉಕ್ರೇನ್ ನ ಬುಚಾನಲ್ಲಿ ನಾಗರಿಕರ ಮಾರಣಹೋಮ (massacre) ನಡೆಸಿದ ತನ್ನ ದೇಶದ ಸೈನಿಕರನ್ನು ಸತ್ಕರಿಸಿದ ವಿಷಯವನ್ನು ಓದುವಾಗ ಭಾವುಕರಾಗಿ ಅತ್ತುಬಿಟ್ಟರು. ಸದರಿ ನ್ಯೂಸ್ ರೀಡರನ್ನು ಯುಮಿಕೊ ಮತ್ಸುವೊ ಅಂತ ಗುರುತಿಸಲಾಗಿದ್ದು, ಆ ಭಾಗವನ್ನು ಓದುವಾಗ ನನ್ನ ಮನಸ್ಸು ರೋಸಿಹೋಗಿ ಮೈ ಪರಚಿಕೊಳ್ಳುವಂತಾಗಿತ್ತು ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಪುಟಿನ್ ತನ್ನ ಸೈನಿಕರನ್ನು ಸನ್ಮಾನಿಸಿ, ‘ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಸೇನಾ ಕಾರ್ಯಚರಣೆಯಲ್ಲಿ ಈ ಸೈನಿಕರು ರೋಲ್ ಮಾಡಲ್ಗಳಾಗಿದ್ದಾರೆ, ಇವರನ್ನು ಸನ್ಮಾನಿಸುತ್ತಿರುವುದು ನನಗೆ ಅತೀವ ಸಂತಸ ನೀಡಿದೆ,’ ಎಂದು ಹೇಳಿದನ್ನು ಓದುವಾಗ ಮತ್ಸುವೊ ಗದ್ಗದಿರಾದರು. ರೆಡ್ಡಿಟ್ ನಲ್ಲಿ ಪೋಸ್ಟ್ ಆಗಿರುವ ವಿಡಿಯೋನಲ್ಲಿ, ಮತ್ಸುವೊ ವಾರ್ತೆ ಓದುವುದನ್ನು ಕೊಂಚ ಹೊತ್ತು ನಿಲ್ಲಿಸಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ ನಂತರ ಅವರು ತಮ್ಮನ್ನು ನಿಯಂತ್ರಿಸಿಕೊಂಡು ತಮ್ಮ ಸೆಗ್ಮೆಂಟ್ ಅನ್ನು ಪೂರ್ತಿಗೊಳಿಸಿದರು.

‘ಇನ್ನೂ ಅನೇಕ ನಾಗರಿಕರು ಬಂಕರ್ಗಳಲ್ಲಿ ಸಿಲುಕಿಕೊಂಡಿದ್ದಾರೆ. ದಯವಿಟ್ಟು ಕ್ಷಮಿಸಿ, ಸಾರಿ,’ ಅಂತ ನೇರ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸುವ ಮೊದಲು ಅವರು ಹೇಳಿದರು. ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಅವರರು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ವಾರ್ತೆ ಓದುವುದನ್ನು ಮುಂದುವರಿಸಿದರು: ಉಕ್ರೇನಿಯನ್ ಯುದ್ಧವು ಒಂದು ಹೊಸ ಹಂತಕ್ಕೆ ಕಾಲಿಟ್ಟಿದೆ…

ರೆಡ್ಡಿಟ್ ಬಳಕೆದಾರರು ಮತ್ಸುವೊ ಅವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಸಾರ್ವಜನಿಕವಾಗಿ ಜಪಾನಿಯರು ಇಂಥ ಧೈರ್ಯ ಪ್ರದರ್ಶಿಸುವುದು ಸಾಮಾನ್ಯ ಮಾತಲ್ಲ, ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಬುಚಾನಲ್ಲಿ ನಡೆದ ಭೀಕರ ಮತ್ತು ಅಮಾನವೀಯ ನರಮೇಧ ಹೇಗೆ ವಿಶ್ವದಾದ್ಯಂತ ಜನರ ಅಂತಃಸ್ಥೈರ್ಯವನ್ನೇ ಕದಡಿಬಿಟ್ಟಿದೆ ಅನ್ನುವದನ್ನು ಇದು ನಿದರ್ಶಿಸುತ್ತದೆ. ನಮ್ಮಲ್ಲಿ ಸಾತ್ವಿಕ ರೋಷ ಉಕ್ಕುತ್ತಿದೆ ಮತ್ತು ಪರಸ್ಪರ ರಕ್ಷಿಸಿಕೊಳ್ಳಲು ಮನಸ್ಸು ಹಾತೊರೆಯುತ್ತಿದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೂ ಕೆಲವರು ಮತ್ಸುವೊ ಅವರಂತೆ ನಮ್ಮಲ್ಲೂ ಭಾವೋದ್ವೇಗ ಉಂಟಾಗಿ ಅತ್ತುಬಿಟ್ಟೆವು ಅಂತ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ, ಪುಟಿನ್ ಅವರು 64 ನೇ ಪ್ರತ್ಯೇಕ ಗಾರ್ಡ್ ಮೋಟಾರ್ ರೈಫಲ್ ಬ್ರಿಗೇಡ್‌ಗೆ ‘ಗಾರ್ಡ್ಸ್’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇದೇ ಬ್ರಿಗೇಡ್ ಬುಚಾದಲ್ಲಿ ಘೋರ ಯುದ್ಧ ಅಪರಾಧಗಳನ್ನು ಎಸಗಿದೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಆರೋಪಿಸಿದೆ. ತಮ್ಮ ಸಹಿ ಇರುವ ಪತ್ರವೊಂದರಲ್ಲಿ ಪುಟಿನ್, ‘ರಷ್ಯಾದ ಸಾರ್ವಭೌಮತ್ವವನ್ನು ರಕ್ಷಿಸಲು ಈ ಬ್ರಿಗೇಡ್ ಪ್ರಯಾಸ ಪಟ್ಟಿದೆ ಮತ್ತು ಮಹಾನ್ ಶೌರ್ಯ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಿದೆ ಅಂತ ಹೇಳುತ್ತಾ ಅದನ್ನು ಅಭಿನಂದಿಸಿದ್ದಾರೆ.

‘ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಚಾಣಾಕ್ಷ ಮತ್ತು ದಿಟ್ಟ ಕ್ರಮಗಳ ಮೂಲಕ, ಘಟಕದ ಸಿಬ್ಬಂದಿ ತಮ್ಮ ಮಿಲಿಟರಿ ಕರ್ತವ್ಯ, ಶೌರ್ಯ, ಸಮರ್ಪಣೆ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿ ದೇಶದ ಇತರ ಸೈನಿಕರಿಗೆ ಮಾದರಿಯಾಗಿದ್ದಾರೆ,’ ಅಂತ ಅವರ ಹೇಳಿಕೆಯಲ್ಲಿ ಉಲ್ಲೇಖವಾಗಿದೆ. ರಷ್ಯಾದ ಆಕ್ರಮಣದಿಂದ ಉಕ್ರೇನಲ್ಲಿ ಅತಿಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಬುಚಾ ಪ್ರಾಂತ್ಯ ಸಹ ಒಂದಾಗಿದೆ. ಅಲ್ಪಾವಧಿಯ ಯುದ್ಧ ವಿರಾಮ ಘೋಷಿಸಿ ಚೇತರಿಸಿಕೊಳ್ಳಲು ರಷ್ಯನ್ ಸೈನಿಕರು ಬುಚಾ ಪ್ರದೇಶದಿಂದ ವಾಪಸ್ಸು ಹೋದಾಗಲೇ ಸಾಮೂಹಿಕ ಸಮಾಧಿಗಳು ಉಕ್ರೇನ್ ಜನರ ಕಣ್ಣಿಗೆ ಬಿದ್ದವು.

ಕೀವ್ ನಗರಕ್ಕೆ ಹತ್ತಿರದ ಈ ಜಾಗಕ್ಕೆ ಭೇಟಿ ನೀಡಿದ್ದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗವು ಏನಿಲ್ಲವೆಂದರೂ 50 ನಾಗರಿಕರನ್ನು ದಾರುಣವಾಗಿ ಕೊಲ್ಲಲಾಗಿದೆ ಎಂದು ಹೇಳಿತ್ತು.

TV9 Kannada


Leave a Reply

Your email address will not be published. Required fields are marked *