ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ಬುಧವಾರ ಬೆಳಗ್ಗೆ 10 ಗಂಟೆಯಿಂದ ಗಣಿ ಜಿಲ್ಲೆ ಕಂಪ್ಲೀಟ್ ಲಾಕ್ ಡೌನ್ ಆಗಲಿದೆ ಎಂದು ನ್ಯೂಸ್​ಫಸ್ಟ್​ಗೆ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ನಾಳೆ ಬೆಳಗ್ಗೆ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಲಿದ್ದಾರೆ ಹೀಗಾಗಿ ಅಗತ್ಯ ವಸ್ತುಗಳನ್ನು ನಾಳೆಯೇ ಖರೀದಿ ಮಾಡಿ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಕೊರೊನಾ ಕೈ ಮೀರುತ್ತಿದೆ.. ಯಾರೂ ಉಳಿಯುತ್ತಿಲ್ಲ. ನಿಮ್ಮನ್ನ ರಕ್ಷಣೆ ಮಾಡೋಕೆ ನಾಳೆ ನಾವು ಉಳಿಯುತ್ತೇವೆ ಎನ್ನುವ ಗ್ಯಾರಂಟಿಯಿಲ್ಲ. ಹೀಗಾಗಿ ಜನತೆ ಲಾಕ್ ಡೌನ್ ಗೆ ಸಹಕಾರ ನೀಡಬೇಕು. ರೈತರಿಗೆ ಯಾವ ರೀತಿ ರಿಯಾಯಿತಿ ಕೊಡಬೇಕು ಎಂಬುದರ ಕುರಿತು ನಾಳೆ ಆದೇಶ ಹೊರಡಿಸುತ್ತೇವೆ. ಜನರು ಐದು ದಿನ ಲಾಕ್ ಡೌನ್ ಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಚಿವ ಆನಂದ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ 10 ಗಂಟೆಯವರೆಗೆ ಮಾತ್ರ ಖರೀದಿಗೆ ಅವಕಾಶವಿರಲಿದೆ. ಬುಧವಾರ ಬೆಳಗ್ಗೆ 10 ಗಂಟೆಯಿಂದ ಐದು ದಿನಗಳ ಕಾಲ ಸಂಪೂರ್ಣ ಗಣಿನಾಡು ಬಂದ್ ಮಾಡೋಕೆ ನಿರ್ಧಾರ ಮಾಡಲಾಗಿದೆ. ಐದು ದಿನದೊಳಗೆ ಸೋಂಕು ಕಡಿವಾಣ ಬೀಳದಿದ್ದರೆ ಮತ್ತೆ ಲಾಕ್ ಡೌನ್ ವಿಸ್ತರಿಸೋಕೆ ಚಿಂತನೆ ನಡೆದಿದೆ ಎಂದು ಇದೇ ವೇಳೆ ಸಚಿವ ಆನಂದ ಸಿಂಗ್ ಹೇಳಿಕೆ ನೀಡಿದ್ದಾರೆ.

The post ಬುಧವಾರ ಬೆಳಗ್ಗೆ 10 ಗಂಟೆಯಿಂದ 5 ದಿನ ಬಳ್ಳಾರಿ ಕಂಪ್ಲೀಟ್ ಲಾಕ್​ಡೌನ್ appeared first on News First Kannada.

Source: newsfirstlive.com

Source link