ಬುಮ್ರಾ ದಾಖಲೆ ಉಡೀಸ್​​.. ಮತ್ತೊಂದು ದಾಖಲೆ ಮುರಿಯುತ್ತಾರಾ ‘ಪರ್ಪಲ್’ ಪಟೇಲ್?

IPL ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಭಾರತೀಯ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿರುವ ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್ ಇಂದು ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

2021ರ ಆವೃತ್ತಿಯಲ್ಲಿ ಒಟ್ಟು 29ವಿಕೆಟ್ ಗಳಿಸಿರುವ 30 ವರ್ಷದ ಹರ್ಷಲ್ ಪಟೇಲ್, ಬುಮ್ರಾ ದಾಖಲೆಯನ್ನು ಸರಿಗಟ್ಟಿದ್ದಾರೆ. 2020ರ ಐಪಿಎಲ್​ ಆವೃತ್ತಿಯಲ್ಲಿ ಬುಮ್ರಾ 27 ವಿಕೆಟ್​ ಕಬಳಿಸಿದ್ದರು. ಸದ್ಯ ಪಟೇಲ್​ 29 ವಿಕೆಟ್​ ಪಡೆದುಕೊಂಡಿದ್ದು, ಇನ್ನು 4 ವಿಕೆಟ್ ಪಡೆದ್ರೆ 33 ವಿಕೆಟ್ಸ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. 2013ರ ಆವೃತ್ತಿಯಲ್ಲಿ ಡ್ವೇನ್ ಬ್ರಾವೋ 32, ಕಳೆದ ಆವೃತ್ತಿಯಲ್ಲಿ ಕಗಿಸೊ ರಬಾಡ 30 ವಿಕೆಟ್ ಪಡೆಯುವ ಮೂಲಕ ಸೀಸನ್​ ಒಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ಐಪಿಎಲ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದಿರುವ ಭಾರತೀಯ ಬೌಲರ್​ಗಳ ಪಟ್ಟಿಯಲ್ಲಿ ಎಸ್​​ಆರ್​ಹೆಚ್​ ತಂಡದ ಭುವನೇಶ್ವರ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. 2017ರ ಆವೃತ್ತಿಯಲ್ಲಿ ಭುವನೇಶ್ವರ್ 26 ವಿಕೆಟ್​ ಕಬಳಿಸಿದ್ದರು. ಉಳಿದಂತೆ 2013ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಹರ್ಭಜನ್​ ಸಿಂಗ್​ 24 ವಿಕೆಟ್​​ ಪಡೆದುಕೊಂಡಿದ್ದರು. ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

News First Live Kannada

Leave a comment

Your email address will not be published. Required fields are marked *