ದುಬೈ: ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ವ್ಯಪಿಸುತ್ತಿರುವ ಹಿನ್ನೆಲೆ ಹಲವು ದೇಶಗಳು ನಾವು ನಿಮ್ಮ ಜೊತೆಗಿದ್ದೇವೆ ಎಂದು ಇಂಡಿಯಾಗೆ ಬೆಂಬಲ ಸೂಚಿಸಿವೆ.

ನಿನ್ನೆ ವಿಶ್ವದ ಅತೀ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜವನ್ನ ಪ್ರದರ್ಶಿಸಲಾಯ್ತು. ಈ ಮೂಲಕ ಯುನೈಟೆಡ್​ ಅರಬ್ ಎಮಿರೈಟ್ಸ್​, ಕೋವಿಡ್​ ಸಂಕಷ್ಟದಲ್ಲಿ ನಾವು ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದಿದೆ.

ಈ ಸವಾಲಿನ ಸಮಯದಲ್ಲಿ ಭಾರತಕ್ಕೆ ಮತ್ತು ಎಲ್ಲಾ ಭಾರತೀಯರಿಗೆ ಭರವಸೆ, ಪ್ರಾರ್ಥನೆ ಮತ್ತು ಬೆಂಬಲವನ್ನು ಸೂಚಿಸುತ್ತೇವೆ #ಸ್ಟೇಸ್ಟ್ರಾಂಗ್ಇಂಡಿಯಾ ಎಂದು ಬುರ್ಜ್​ ಖಲೀಫಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

ಬುರ್ಜ್​ ಕಟ್ಟಡ ಮಾತ್ರವಲ್ಲದೆ ಯುಎಇಯಲ್ಲಿರೋ ಹಲವು ಪ್ರಮುಖ ಲ್ಯಾಂಡ್​​ಮಾರ್ಕ್​ಗಳ ಬಳಿ ಭಾರತದ ಧ್ವಜವನ್ನ ಪ್ರದರ್ಶನ ಮಾಡಲಾಗಿದೆ.

The post ಬುರ್ಜ್​ ಖಲೀಫಾ ಮೇಲೆ ತ್ರಿವರ್ಣ ಧ್ವಜ: ಕೋವಿಡ್​ ಸಂಕಷ್ಟದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದ UAE appeared first on News First Kannada.

Source: News First Kannada
Read More