ಕಳೆದ ವರ್ಷ ಅನಾರೋಗ್ಯದಿಂದ ಸಾವನ್ನಪ್ಪಿದ ನಟ ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್ ಸ್ಯಾಂಡಲ್​ವುಡ್​​​​​​ನಲ್ಲಿ ಕಾಲಿಡುತ್ತಿದ್ದು, ಗುರುಶಿಷ್ಯರು ಸಿನಿಮಾದಲ್ಲಿ ಬಣ್ಣ ಹಚ್ಚುವುದು ಕನ್ಫರ್ಮ್​​ ಆಗಿದೆ. ಈ ನಡುವೆ ಸಿನಿಮಾ ಕ್ಷೇತ್ರ ಪ್ರವೇಶದ ಕುರಿತು ನ್ಯೂಸ್​ಫಸ್ಟ್​​​ನೊಂದಿಗೆ ಮಾತನಾಡಿರುವ ರಕ್ಷಕ್​​, ನಟನೆಯ ಬಗ್ಗೆ ಏನೆಲ್ಲಾ ಸಲಹೆ ನೀಡಿದ್ದರು ಎಂದು ಮಾತನಾಡಿದ್ದಾರೆ.

ಅಮ್ಮ ನನಗೆ ಸಿನಿಮಾದಲ್ಲಿ ಆಗ ಮಾಡಬೇಕು ಹೀಗ್ ಮಾಡಬೇಕು ಅಂತಾ ಏನೂ ಹೇಳಿರಲಿಲ್ಲ. ಅವರು ಹೇಳಿದ್ದು ಒಂದೇ ಶ್ರದ್ಧೆಯಿಂದ ಕೆಲಸ ಮಾಡಬೇಕು ಅಂತಾ.. ನಮ್ಮ ಬಗ್ಗೆ ಒಳ್ಳೆದು ಮಾತನಾಡುತ್ತಾರೆ, ಕೆಟ್ಟದ್ದು ಮಾತನಾಡುತ್ತಾರೆ. ಆ ಬಗ್ಗೆ ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳಬಾರದು. ಆಗ ನೀನು ಯಾವ ಲೆವೆಲ್​ಗೆ ರೀಚ್ಆಗಬೇಕು ಆಗ್ತಿಯಾ ಎಂದಿದ್ದರು.

ಅಪ್ಪ ಎಂದೂ ಆರೋಗ್ಯ ಸರಿ ಇಲ್ಲ ಅಂತಾ ಯಾರು ಹೇಳಿರಲಿಲ್ಲ. ಆದರೆ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಅವರ ಕಾಲೆಳೆಯಬೇಕು ಅಂದುಕೊಂಡ್ರು.. ಅವರನ್ನು ಮಲಗಿಸಬೇಕು ಎಂದುಕೊಂಡ್ರು.. ಕೊನೆಗೆ ಮುಗಿಸ್ಬೇಕು ಅಂದ್ಕೊಂಡ್ರು ಮುಗಿಸ್ಬಿಟ್ರು.. ಅದರ ಬಗ್ಗೆ ಈಗ ನಾನು ಮಾತನಾಡಿದರೆ ತಪ್ಪಾಗುತ್ತದೆ. ಆದ್ದರಿಂದ ಮಾತನಾಡೋದಿಲ್ಲ ಎಂದರು.

The post ಬುಲೆಟ್​ ಪ್ರಕಾಶ್​ನ ಮುಗಿಸ್ಬೇಕು ಅಂದ್ಕೊಂಡ್ರು ಮುಗಿಸ್ಬಿಟ್ರು- ರಕ್ಷಕ್ ಬುಲೆಟ್ appeared first on News First Kannada.

Source: newsfirstlive.com

Source link