ಚೊಚ್ಚಲ ಟೆಸ್ಟ್​​​ ಚಾಂಪಿಯನ್​ ಶಿಪ್​ ಫೈನಲ್​ಗೆ ಕೌಂಟ್​​ಡೌನ್​​ ಸ್ಟಾರ್ಟ್​ ಆಗಿದೆ. 2019ರಲ್ಲಿ ಆರಂಭವಾದ ಈ ಟೂರ್ನಿ 59 ಪಂದ್ಯಗಳ ಬಳಿಕ ಇದೀಗ ಅಂತಿಮ​ ಘಟ್ಟ ತಲುಪಿದೆ. ಆಡಿದ 17ರಲ್ಲಿ 12 ಪಂದ್ಯ ಗೆದ್ದ ಭಾರತ, 11 ಪಂದ್ಯವನ್ನಾಡಿ 7 ಪಂದ್ಯ ಗೆದ್ದಿರುವ ನ್ಯೂಜಿಲೆಂಡ್​​ ಫೈನಲ್ ಫೈಟ್​ಗೆ ಸಜ್ಜಾಗಿವೆ.

ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​​ಗೆ ಇನ್ನೂ ಬರೋಬ್ಬರಿ 27 ದಿನ ಬಾಕಿಯಿದೆ. ಹಣಾಹಣಿಗೆ ಸೌತ್​ಆಂಪ್ಟನ್​ ಸಿಬ್ಬಂದಿ ಪಿಚ್​ ತಯಾರಿ ಕಾರ್ಯದಲ್ಲಿ ಬ್ಯೂಸಿ ಇದ್ರೆ, ಅಭಿಮಾನಿಗಳು ಮಾತ್ರ ಯಾರು ಗೆಲ್ಲೋ ಫೇವರಿಟ್​..! ಯಾರು ಮ್ಯಾಚ್​​ ವಿನ್ನರ್​​, ಯಾರಾಗ್ತಾರೆ ಕಿಂಗ್​ ಅನ್ನೋ ಚರ್ಚೆಗೆ ಬಿದ್ದಿದ್ದಾರೆ. ಅದರಲ್ಲೂ ಈ ಇಬ್ಬರು ಡೆಡ್ಲಿ ಬೌಲರ್​ಗಳ ಫೈಟ್​​ನಲ್ಲಿ ಯಾರು ಮೇಲುಗೈ ಸಾಧಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಯಾರ್ಕರ್​ ಸ್ಪೆಷಲಿಸ್ಟ್​​ VS ಟೆಸ್ಟ್​ ಮ್ಯಾಚ್​ ಸ್ಪೆಷಲಿಸ್ಟ್​..!
14ನೇ ಆವೃತ್ತಿ ಐಪಿಎಲ್​​ ಅರ್ಧಕ್ಕೆ ನಿಂತು ತಿಂಗಳುಗಳು ಕಳೆದಿಲ್ಲ. ಆಗಲೇ ಒಂದು ಫ್ರಾಂಚೈಸಿಯ ಇಬ್ಬರು ಮ್ಯಾಚ್​ ವಿನ್ನರ್ಸ್​ ಪರಸ್ಪರ ಎದುರಾಳಿಗಳಾಗಲು ವೇದಿಕೆ ಸಿದ್ಧವಾಗಿದೆ. ಮುಂಬೈ ಇಂಡಿಯನ್ಸ್​ನ ಮ್ಯಾಚ್​​ ವಿನ್ನರ್ಸ್​​​ ಟ್ರೆಂಟ್​​ ಬೋಲ್ಟ್​, ಜಸ್​ಪ್ರೀತ್​ ಬೂಮ್ರಾ ಪ್ರತಿಷ್ಠೆಯ ಕಣದಲ್ಲಿ ಎದುರಾಗಲಿದ್ದಾರೆ. ತಮ್ಮ ಸಾಲಿಡ್​ ಲೈನ್​ ಆ್ಯಂಡ್​​​ ಲೆಂಥ್​ ಬೌಲಿಂಗ್​​​ನಿಂದ ಎದುರಾಳಿ ಬ್ಯಾಟ್ಸ್​​ಮನ್​ಗಳನ್ನ ಕಾಡಿದ್ದ ಈ ಜೋಡಿಗೀಗ ಟೆಸ್ಟಿಂಗ್​ ಟೈಮ್​…! ಈ ಇಬ್ಬರಲ್ಲಿ ಯಾರು ಬೆಸ್ಟ್​​ ಅನ್ನೋ ಪರೀಕ್ಷೆಗೆ ಇಬ್ಬರೂ ಸಿದ್ಧವಾಗಬೇಕಿದೆ.

ಟೆಸ್ಟ್​​ ಚಾಂಪಿಯನ್​ಶಿಪ್​ನಲ್ಲಿ ಬೋಲ್ಟ್​​ – ಬೂಮ್ರಾ
ಬೋಲ್ಟ್​                                  ಬೂಮ್ರಾ
9                     ಪಂದ್ಯ                  9
34                  ವಿಕೆಟ್​                 34
4/28                ಬೆಸ್ಟ್​​​                 6/27

ಈವರೆಗೆ ಟೆಸ್ಟ್​​ ಚಾಂಪಿಯನ್​ಶಿಪ್​ ಫೈಟ್​​ನಲ್ಲಿ ಆಡಿದ 9 ಪಂದ್ಯಗಳ ರೆಕಾರ್ಡ್​​ ನೋಡಿದ್ರೆ, ಇಬ್ಬರೂ ಸಮಾನ ಸಾಧನೆ ಮಾಡಿದ್ದಾರೆ. ಆದ್ರೆ, ಇಂಗ್ಲೆಂಡ್​​​ನ ಪಿಚ್​ ಇಬ್ಬರೂ ವೇಗಿಗಳ ಪಾಲಿಗೆ ವಿದೇಶಿ ಪಿಚ್​. ಹೀಗಾಗಿ ವಿದೇಶಿ ಪಿಚ್​ನಲ್ಲಿ ಯಾರು ಪಾರುಪತ್ಯ ಸಾಧಿಸ್ತಾರೆ ಅನ್ನೋ ಕುತೂಹಲದ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಏಕ್ಸ್​​ಪರ್ಟ್​​​ಗಳ ಉತ್ತರ ಇಂಗ್ಲೀಷ್​ ಸಬ್​ಕಾಂಟಿನೆಂಟ್​ನಲ್ಲಿ ಬೂಮ್ರಾಗಿಂತ ಬೋಲ್ಟ್​​ ಬೆಸ್ಟ್​​ ಆನ್ನೋದಾಗಿದೆ.

ಆಂಗ್ಲರ ನಾಡಲ್ಲಿ ಬೋಲ್ಟ್ ಟೆಸ್ಟ್​​​ ಸಾಧನೆ
ಇನ್ನಿಂಗ್ಸ್​         8
ವಿಕೆಟ್​​          21
ಬೆಸ್ಟ್​​            5/57
ಎಕಾನಮಿ     2.67

ಬೋಲ್ಟ್​​ ಆಂಗ್ಲರ ನಾಡಲ್ಲಿ 8 ಇನ್ನಿಂಗ್ಸ್​​ಗಳನ್ನಾಡಿದ್ರೆ, ಬೂಮ್ರಾ ಇಂಗ್ಲೆಂಡ್​​ನಲ್ಲಿ ಆಡಿರೋದು ಕೇವಲ 6 ಇನ್ನಿಂಗ್ಸ್ ಮಾತ್ರ…! ಆಡಿದ ಈ ಮೂರು ಪಂದ್ಯಗಳಲ್ಲಿ ಇಂಪ್ಯಾಕ್ಟ್​​ಫುಲ್​ ಮಾಡುವಲ್ಲಿ ಬೂಮ್ರಾ ಯಶಸ್ಸಾಗಿದ್ದಾರೆ.

ಆಂಗ್ಲರ ನಾಡಲ್ಲಿ ಬೂಮ್ರಾ ಟೆಸ್ಟ್​​​ ಸಾಧನೆ
ಇನ್ನಿಂಗ್ಸ್​              6
ವಿಕೆಟ್​​              14
ಬೆಸ್ಟ್​​                5/85
ಎಕಾನಮಿ         2.72

ಸದ್ಯದ ಟ್ರ್ಯಾಕ್​ ರೆಕಾರ್ಡ್​​ ಗಮನಿಸಿದ್ರೆ ಉಭಯ ವೇಗಿಗಳು ಇಂಗ್ಲೆಂಡ್​​ನಲ್ಲಿ ಸಾಲಿಡ್​​ ಪ್ರದರ್ಶನವನ್ನೇ ನೀಡಿದ್ದಾರೆ. ಆದ್ರೆ, ಕ್ರಿಕೆಟ್​​ ಏಕ್ಸ್​ಪರ್ಟ್​​ಗಳು ಹೇಳುವಂತೆ ಇಂಗ್ಲೆಂಡ್​​​ ವಾತಾವರಣ ಬೋಲ್ಟ್​ಗೆ ಹೆಚ್ಚು ಸಹಾಯಕವಾಗುತ್ತಾ..? ಅಥವಾ ಬೂಮ್ರಾ ಕೂಡ ಇಂಗ್ಲೀಷ್​​ ಕಂಡಿಶನ್​ನಲ್ಲಿ ಯಶಸ್ಸು ಕಾಣ್ತಾರಾ ಕಾದು ನೋಡಬೇಕಿದೆ.

The post ಬೂಮ್ರಾ V/S ಬೋಲ್ಟ್- ಇಂಗ್ಲೀಷ್​ ಕಂಡೀಷನ್ಸ್​​ನಲ್ಲಿ ಯಾರು ಅಪಾಯಕಾರಿ ವೇಗಿ..? appeared first on News First Kannada.

Source: newsfirstlive.com

Source link