ಕೊಪ್ಪಳ: ಜಿಲ್ಲೆಯಲ್ಲಿ ಏಪ್ರಿಲ್ 23ರಿಂದ ಜೂನ್ 03ರವರೆಗೆ 1,40,86,197 ರೂಪಾಯಿ ಮೌಲ್ಯದ ವಿವಿಧ ಮಾದರಿ ಅಬಕಾರಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಸಿ.ಸೇಲಿನಾ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 23 ರಿಂದ ಜೂನ್ 03ರವರೆಗೆ ಅಬಕಾರಿ ಇಲಾಖೆಯಿಂದ ಜಿಲ್ಲೆಯಾದ್ಯಂತ 45 ಕಡೆ ದಾಳಿ ಮಾಡಲಾಗಿದೆ. ಅವುಗಳಲ್ಲಿ 16 ಕಠಿಣ ಕ್ರಮ, 7 ಬಿಎಲ್‌ಸಿ ಹಾಗೂ 15(ಎ) ಅಡಿ 24 ಸೇರಿದಂತೆ ಒಟ್ಟು 47 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ದಾಳಿ ಸಂದರ್ಭ 8 ವಾಹನಗಳು, 15,069.390 ಲೀಟರ್ ಮದ್ಯ, 44,340 ಲೀಟರ್ ಬಿಯರ್, 5 ಲೀಟರ್ ಐಬಿ ಮತ್ತು 40,000 ಲೀಟರ್ ಮದ್ಯಸಾರವನ್ನು ಜಪ್ತಿ ಮಾಡಲಾಗಿದೆ. ಒಟ್ಟು 1,40,86,197 ರೂಪಾಯಿ ಮೌಲ್ಯದ ಲಿಕ್ಕರ್ ವಶಪಡಿಸಿಕೊಳ್ಳಲಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದ ಲಭ್ಯತೆಯ ಕೊರತೆಯಿಂದ ವ್ಯಸನಿಗಳು ಇತರೆ ಮಾದಕ ವಸ್ತುಗಳಾದ ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ, ಸ್ಯಾನಿಟೈಸರ್, ವಾರ್ನಿಶ್ ನಂತಹ ರಾಸಾಯನಿಕ ವಸ್ತುಗಳನ್ನು ಸೇವನೆ ಮಾಡಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಇಂತಹ ಪ್ರಕರಣಗಳು ಕಂಡುಬದಲ್ಲಿ ಅಬಕಾರಿ ಉಪ ಆಯುಕ್ತೆ ಸಿ.ಸೇಲಿನಾ ಅವರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

The post ಬೃಹತ್​ ಕಾರ್ಯಾಚರಣೆ- 10 ದಿನಗಳಲ್ಲಿ ₹1.40 ಕೋಟಿ ಮೌಲ್ಯದ ಅಬಕಾರಿ ವಸ್ತುಗಳು ಜಪ್ತಿ appeared first on News First Kannada.

Source: newsfirstlive.com

Source link