ಬೃಹತ್ ಗಾತ್ರದ ತಿಮಿಂಗಿಲ ಮೀನು ಪ್ರತ್ಯಕ್ಷ; ಹೌಹಾರಿದ ಮೀನುಗಾರರು..!


ಉತ್ತರ ಕನ್ನಡ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಬೃಹತ್​ ಗಾತ್ರದ ತಿಮಿಂಗಿಲ ಮೀನು ಬೋಟ್​ ಸಮೀಪವೇ ಕಾಣಿಸಿಕೊಂಡಿದೆ. ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಪ್ರತ್ಯಕ್ಷವಾಗಿದೆ.

ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದಲ್ಲಿ ಸ್ಥಳಿಯ ಮೀನುಗಾರರು ನಿತ್ಯದಂತೆ ಬಲೆಯನ್ನು ಹೊತ್ತು ಮೀನಿಗಾರಿಗೆ ಬೋಟ್​ನಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ದೊಡ್ಡ ತಿಮಿಂಗಿಲವೊಂದು ಮೀನುಗಾರರಿದ್ದ ಬೋಟ್​ನ ಕಣ್ಣಳತೆಯ ದೂರದಲ್ಲಿ ಕಾಣಿಸಿಕೊಂಡಿದ್ದು ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ. ಕಾಣಿಸಿಕೊಂಡ ತಿಮಿಂಗಿಲವನ್ನು ಮೀನುಗಾರರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ಸಾಕಷ್ಟು ವೈರಲ್​ ಆಗಿದೆ.

News First Live Kannada


Leave a Reply

Your email address will not be published. Required fields are marked *