ಬೆಂಗಳೂರು: ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ಬೃಹತ್ ಲಸಿಕಾ ಅಭಿಯಾನ’ಕ್ಕೆ ಚಾಲನೆ  ನೀಡಿದರು.

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು 7 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಿಎಸ್​ವೈ.. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಭಿಯಾನ ಆರಂಭವಾಗಿದೆ. ಕೇಂದ್ರ ನೀಡುವ ಈ ಉಚಿತ ಲಸಿಕೆ ಅಭಿಯಾನ ಸಂತಸ ತಂದಿದೆ. 5 ರಿಂದ 7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನ ಹೊಂದಿದೆ ಎಂದರು.

ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಅವಕಾಶವನ್ನ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಆದಷ್ಟು ಬೇಗ‌ ಕೊರೊನಾ ಕೊನೆಯಾಗಲಿ. ಅನ್​ಲಾಕ್ ಮಾಡಿದ್ರೂ ಕೊರೊನಾ ಭಯ ಇದ್ದೆ ಇದೆ. ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅನ್​ಲಾಕ್ ಮಾಡಿದ್ರೂ ಬಸ್​​ನಲ್ಲಿ ನೂಕು ನುಗ್ಗಲು ಆಗ್ತಿದೆ. ಇದನ್ನು ಸ್ವತಃ ನಾನೇ ನೋಡಿದ್ದೇನೆ. ಹೀಗಾಗಿ ಜನರು ನಿಯಮವನ್ನ ಪಾಲನೆ ಮಾಡಬೇಕು ಅಂತಾ ಸೂಚಿಸಿದರು.

The post ಬೃಹತ್ ಲಸಿಕಾ ಅಭಿಯಾನಕ್ಕೆ ಚಾಲನೆ: ‘ಇಂದು 7 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ’ ಎಂದ ಸಿಎಂ appeared first on News First Kannada.

Source: newsfirstlive.com

Source link